AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forex Decrease- ಭಾರತದ ಫಾರೆಕ್ಸ್ ಹಣ ಮತ್ತೆ ಕುಸಿತ; ಈಗೆಷ್ಟಿದೆ ವಿದೇಶಿ ವಿನಿಮಯ ಮೀಸಲು ನಿಧಿ?

India Sees Decrease in Forex Reserve For 4th Week: 2021ರ ಅಕ್ಟೋಬರ್​ನಲ್ಲಿ ಭಾರತದ ಫೋರೆಕ್ಸ್ ಮೀಸಲು ನಿಧಿ 645 ಬಿಲಿಯನ್ ಡಾಲರ್​ನಷ್ಟಿತ್ತು. ಅಂದರೆ ಸುಮಾರು 52.7 ಲಕ್ಷ ಕೋಟಿ ರೂ ಮೌಲ್ಯದಷ್ಟು ಆಸ್ತಿಗಳಿದ್ದವು. ಅದು ಸಾರ್ವಕಾಲಿಕ ದಾಖಲೆಯಾಗಿತ್ತು. ಅದಾದ ಬಳಿಕ ನಿಧಿಯಲ್ಲಿ ಇಳಿಕೆ ಕಾಣುತ್ತಲೇ ಇದೆ.

Forex Decrease- ಭಾರತದ ಫಾರೆಕ್ಸ್ ಹಣ ಮತ್ತೆ ಕುಸಿತ; ಈಗೆಷ್ಟಿದೆ ವಿದೇಶಿ ವಿನಿಮಯ ಮೀಸಲು ನಿಧಿ?
ಫಾರೆಕ್ಸ್ ಮೀಸಲು ನಿಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 05, 2023 | 11:51 AM

ನವದೆಹಲಿ: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex- Foreign Exchange Reserve) ಮೀಸಲು ನಿಧಿ ಸತತ ನಾಲ್ಕನೇ ವಾರ ಇಳಿಕೆ ಕಂಡಿದೆ. ಫೆಬ್ರುವರಿ 24ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ನಿಧಿ 325 ಮಿಲಿಯನ್ ಡಾಲರ್​ನಷ್ಟು (ಸುಮಾರು 2,655 ಕೋಟಿ ರೂ) ಕುಸಿತ ಕಂಡಿದೆ ಎಂದು ಇತ್ತೀಚಿನ ಆರ್​ಬಿಐ ಡೇಟಾ ಹೇಳಿದೆ. ಹಿಂದಿನ ವಾರದಲ್ಲಿ 5.68 ಬಿಲಿಯನ್ ಡಾಲರ್ ಮೊತ್ತದಷ್ಟು ಕುಸಿತ ಕಂಡಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಕುಸಿತ ಅಲ್ಪಪ್ರಮಾಣದ್ದಾಗಿದೆ. ಈಗ ಭಾರತದ ಫೋರೆಕ್ಸ್ ಮೀಸಲು ನಿಧಿಯಲ್ಲಿ ಒಟ್ಟು 560.942 ಬಿಲಿಯನ್ ಡಾಲರ್​ನಷ್ಟು (ಸುಮಾರು 45.8 ಲಕ್ಷ ಕೋಟಿ ರೂ) ಹಣ ಇದೆ.

2021ರ ಅಕ್ಟೋಬರ್​ನಲ್ಲಿ ಭಾರತದ ಫೋರೆಕ್ಸ್ ಮೀಸಲು ನಿಧಿ 645 ಬಿಲಿಯನ್ ಡಾಲರ್​ನಷ್ಟಿತ್ತು. ಅಂದರೆ ಸುಮಾರು 52.7 ಲಕ್ಷ ಕೋಟಿ ರೂ ಮೌಲ್ಯದಷ್ಟು ಆಸ್ತಿಗಳಿದ್ದವು. ಅದು ಸಾರ್ವಕಾಲಿಕ ದಾಖಲೆಯಾಗಿತ್ತು. ಅದಾದ ಬಳಿಕ ನಿಧಿಯಲ್ಲಿ ಇಳಿಕೆ ಕಾಣುತ್ತಲೇ ಇದೆ. ಈ ಕುಸಿತಕ್ಕೆ ಹೆಚ್ಚಾಗಿ ಕಾರಣವಾಗಿರುವುದು ಜಾಗತಿಕ ವಿದ್ಯಮಾನಗಳು. ರುಪಾಯಿ ಮೌಲ್ಯ ಕಡಿಮೆ ಆಗುವುದನ್ನು ನಿಯಂತ್ರಿಸಲು ಆರ್​ಬಿಐ ತನ್ನ ಮೀಸಲು ನಿಧಿಯಲ್ಲಿರುವ ವಿದೇಶಗಳ ಕರೆನ್ಸಿಗಳನ್ನು, ಅದರಲ್ಲೂ ಪ್ರಮುಖವಾಗಿ ಡಾಲರ್​ಗಳನ್ನು ಆಗಾಗ್ಗೆ ಮಾರುತ್ತಿದೆ. ಇದು ಫೋರೆಕ್ಸ್ ಖಜಾನೆ ತುಸು ತುಸುವೇ ಖಾಲಿಯಾಗಲು ಕಾರಣವಾಗಿದೆ.

ಫೆಬ್ರುವರಿ 24ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫೋರೆಕ್ಸ್ ಮೀಸಲು ನಿಧಿಯಲ್ಲಿ 325 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಅದರಲ್ಲಿ ವಿದೇಶೀ ಕರೆನ್ಸಿಯ ಮೊತ್ತವೇ 166 ಮಿಲಿಯನ್ ಡಾಲರ್​ನಷ್ಟಿದೆ. ಇದರೊಂದಿಗೆ ಭಾರತದಲ್ಲಿ ಈಗ ಇರುವ ಒಟ್ಟು ಫೋರೆಕ್ಸ್ ನಿಧಿಯಲ್ಲಿ ವಿದೇಶಿ ಕರೆನ್ಸಿಗಳ ಮೊತ್ತ 495.906 ಬಿಲಿಯನ್ ಡಾಲರ್ ಇದೆ.

ಇದನ್ನೂ ಓದಿWindfall Tax: ಕಚ್ಛಾ ತೈಲಕ್ಕೆ ವಿಂಡ್​ಫಾಲ್ ಟ್ಯಾಕ್ಸ್ ಹೆಚ್ಚಳ; ಜೆಟ್ ಇಂಧನಕ್ಕೆ ಆಮದು ಸುಂಕ ಇಲ್ಲ

ವಿದೇಶೀ ಕರೆನ್ಸಿ ಮಾತ್ರವಲ್ಲ, ಗೋಲ್ಡ್ ರಿಸರ್ವ್ ಕೂಡ ಸತತ ನಾಲ್ಕನೇ ವಾರ ಇಳಿಮುಖ ಕಂಡಿದೆ. 66ಮಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನದ ಮೀಸಲು ಕಡಿಮೆ ಆಗಿದೆ. ಈಗ ಗೋಲ್ಡ್ ರಿಸರ್ವ್ ಮೊತ್ತ 41.750 ಬಿಲಿಯನ್ ಡಾಲರ್​ನಷ್ಟಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್​ಡಿಆರ್) ಕೂಡ 80 ಮಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿ 18.187 ಬಿಲಿಯನ್ ಡಾಲರ್ ಮಟ್ಟಕ್ಕೆ ಬಂದಿದೆ.

ಇನ್ನು ಐಎಂಎಫ್​ನೊಂದಿಗಿನ ಭಾರತದ ಮೀಸಲು ನಿಧಿ 12 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿ 5.098 ಬಿಲಿಯನ್ ಡಾಲರ್ ತಲುಪಿದೆ ಎಂಬುದು ಆರ್​ಬಿಐನ ವರದಿಯಿಂದ ಗೊತ್ತಾಗುತ್ತದೆ. ಐಎಂಎಫ್ ಜೊತೆಗಿನ ಮೀಸಲು ನಿಧಿ ಒಂದು ರೀತಿಯಲ್ಲಿ ಕ್ರೆಡಿಟ್ ರೇಟಿಂಗ್ ಇದ್ದ ಹಾಗೆ. ಇದನ್ನು ರಿಸರ್ವ್ ಟ್ರಾಂಚ್ ಎಂದೂ ಕರೆಯುತ್ತಾರೆ. ಇದು ಉತ್ತಮ ಮಟ್ಟದಲ್ಲಿದ್ದರೆ ಐಎಂಎಫ್​ನಿಂದ ಸುಲಭ ಸಾಲ ಸಿಗುತ್ತದೆ. ಇಲ್ಲದಿದ್ದರೆ ಐಎಂಎಫ್ ಸಾಲವನ್ನು ನಿರ್ದಿಷ್ಟ ಅವಧಿಯೊಳಗೆ ಮರುಪಾವತಿ ಮಾಡಬೇಕಾಗುತ್ತದೆ.

ಫಾರೆಕ್ಸ್ ಮೀಸಲು ನಿಧಿ ಯಾಕೆ ಮುಖ್ಯ?

ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಮೇಲೆ ತಿಳಿಸಿದ ನಾಲ್ಕು ಅಂಶಗಳು ಇರುತ್ತವೆ. ಅಂದರೆ ವಿದೇಶೀ ಕರೆನ್ಸಿ ಆಸ್ತಿ, ಚಿನ್ನ, ಎಸ್​ಡಿಆರ್ ಮತ್ತು ರಿಸರ್ವ್ ಟ್ರಾಂಚ್ ಈ ನಾಲ್ಕು ಅಂಶಗಳು ಫಾರೆಕ್ಸ್ ರಿಸರ್ವಸ್​ನಲ್ಲಿರುತ್ತವೆ.

ದೇಶದ ಕರೆನ್ಸಿ ಮೌಲ್ಯ ದಿಢೀರ್ ಕಡಿಮೆ ಆಗಿಬಿಟ್ಟರೆ ಅದನ್ನು ರಕ್ಷಿಸಲು ಫಾರೆಕ್ಸ್ ರಿಸರ್ವ್​ನ ಆಸ್ತಿಗಳನ್ನು ಸೆಂಟ್ರಲ್ ಬ್ಯಾಂಕುಗಳು ಬಳಕೆ ಮಾಡುತ್ತವೆ. ಹೆಚ್ಚು ಆಮದು ಮಾಡಿಕೊಳ್ಳುವುದು ಅನಿವಾರ್ಯವಾದಾಗಲೂ ಈ ನಿಧಿ ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ಫೋರೆಕ್ಸ್ ನಿಧಿ ಬಹಳ ಕಡಿಮೆ ಇದ್ದರೆ ವಿದೇಶಗಳಿಂದ ಕೆಲ ಅಗತ್ಯ ವಸ್ತುಗಳ ಆಮದು ಕಷ್ಟಸಾಧ್ಯವಾಗಬಹುದು. ಪಾಕಿಸ್ತಾನ, ಶ್ರೀಲಂಕಾ ಮೊದಲಾದ ಹಲವು ದೇಶಗಳು ಇಂಥ ಸಂಕಷ್ಟಗಳನ್ನು ಅನುಭವಿಸುತ್ತಿವೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:38 am, Sun, 5 March 23