ಆಸ್ಟ್ರಾಜೆನೆಕಾ ಲಸಿಕೆಗೆ ಸ್ಪುಟ್ನಿಕ್ ವಿ ಬಲ -ಇದು ರಷ್ಯಾ ತಜ್ಞರ ‘ಡಬಲ್ ಪವರ್’ ಸಲಹೆ
ಕೊವಿಡ್ ತಡೆಗಟ್ಟಲು ಔಷಧಿ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ (AstraZeneca) ತಯಾರಿಸಿರುವ ಲಸಿಕೆಗೆ ಮತ್ತಷ್ಟು ಬಲ ತುಂಬಲು ಸ್ಪುಟ್ನಿಕ್ ವಿ (Sputnik V) ಲಸಿಕೆ ಸಹಕಾರಿಯಾಗಲಿದೆ ಎಂದು ರಷ್ಯಾದ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
ಕೊವಿಡ್ ತಡೆಗಟ್ಟಲು ಔಷಧಿ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ (AstraZeneca) ತಯಾರಿಸಿರುವ ಲಸಿಕೆಗೆ ಮತ್ತಷ್ಟು ಬಲ ತುಂಬಲು ಸ್ಪುಟ್ನಿಕ್ ವಿ (Sputnik V) ಲಸಿಕೆ ಸಹಕಾರಿಯಾಗಲಿದೆ ಎಂದು ರಷ್ಯಾದ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
ರಷ್ಯಾದ ಗಮಾಲೆಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯನ್ನು ಆಸ್ಟ್ರಾಜೆನೆಕಾ ಲಸಿಕೆಯೊಂದಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿದರೆ ಲಸಿಕೆಯ ಶಕ್ತಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಆದ್ದರಿಂದ, ಈ ಪ್ರಯೋಗ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಪ್ರಸ್ತುತ ಅಧ್ಯಯನ ಪ್ರಕಾರ ಆಸ್ಟ್ರಾಜೆನೆಕಾ ಲಸಿಕೆ ಶೇ.62ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಆದರೆ, ಆಗಸ್ಟ್ನಲ್ಲಿ ತಯಾರಾದ ಸ್ಪುಟ್ನಿಕ್ ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ಅದನ್ನು ತಯಾರಿಸಿದ ಗಮಾಲೆಯಾ ಸಂಸ್ಥೆ ತಿಳಿಸಿತ್ತು. ಈಗ ಅದೇ ಆಧಾರದ ಮೇಲೆ ಈ 2 ಲಸಿಕೆಗಳ ಮಿಶ್ರಣವನ್ನು ಪ್ರಯೋಗಿಸುವ ಸಲಹೆ ವ್ಯಕ್ತವಾಗಿದೆ.
2020ರ ಅಂತ್ಯದ ವೇಳೆಗೆ ಆಸ್ಟ್ರಾಜೆನೆಕಾದ 20 ಕೋಟಿ ಲಸಿಕೆಗಳು ಸಿದ್ಧವಾಗಲಿದೆ ಎಂದು ತಯಾರಿಕಾ ಕಂಪನಿ ಹೇಳಿದರೂ ಇನ್ನೂ ಕೆಲ ಹಂತದ ಪ್ರಯೋಗಗಳು ಬಾಕಿ ಇವೆ. ಸದ್ಯ, ಆಸ್ಟ್ರಾಜೆನೆಕಾ ಲಸಿಕೆ ಅತ್ಯಂತ ಕಡಿಮೆ ದರದಲ್ಲಿ ಪರಿಣಾಮಕಾರಿ ಲಸಿಕೆಯಾಗಿ ಕಾಣುತ್ತಿದ್ದು ರಷ್ಯಾದ ತಜ್ಞರ ಸಲಹೆ ಒಂದು ವೇಳೆ ಯಶಸ್ಸು ಕಂಡರೆ ಈ ಲಸಿಕೆಗಾಗಿ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.