ಕೊರೊನಾ ಮೂಲ ಚೀನಾ ಅಲ್ಲ ಎಂಬ ವಾದವನ್ನು ಒಪ್ಪುವುದು ಕಷ್ಟ ಕಷ್ಟ ಎಂದ WHO!
2019 ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊತ್ತ ಮೊದಲ ಕೊರೊನಾ ಪ್ರಕರಣ ಕಂಡುಬಂದಿತ್ತು. ಆದರೆ ಈಗ ಚೀನಾ, ತನಗಿಂತ ಮೊದಲು ಇತರೆ ದೇಶಗಳಲ್ಲಿ ಕೊರೊನಾ ವೈರಾಣು ಅಸ್ತಿತ್ವದಲ್ಲಿ ಇತ್ತು ಎಂಬ ಹೇಳಿಕೆ ನೀಡಿದೆ.
ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿಲ್ಲ, ಕೊವಿಡ್ ಮೂಲ ಚೀನಾ ಅಲ್ಲ ಎಂಬ ಚೀನಾ ವಿಜ್ಞಾನಿಗಳ ವಾದವನ್ನು ಒಪ್ಪುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕರು ಚೀನಾ ವಾದ ತುಂಬಾ ಊಹಾತ್ಮಕವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಕಳೆದ ವರ್ಷ, ಡಿಸೆಂಬರ್ನಲ್ಲಿ ವುಹಾನ್ ನಗರದ ಆಹಾರ ಮಾರುಕಟ್ಟೆಯಲ್ಲಿ ಮೊತ್ತ ಮೊದಲ ಕೊರೊನಾ ಪ್ರಕರಣ ಕಂಡುಬಂದಿತ್ತು. ಆದರೆ ಈಗ ಚೀನಾ, ತನಗಿಂತ ಮೊದಲು ಇತರೆ ದೇಶಗಳಲ್ಲಿ ಕೊರೊನಾ ವೈರಾಣು ಅಸ್ತಿತ್ವದಲ್ಲಿ ಇತ್ತು ಎಂದು ಹೇಳಿಕೆ ನೀಡಿದೆ. ಹೊರದೇಶದಿಂದ ಆಮದು ಮಾಡಿಕೊಂಡ ಆಹಾರ ಪೊಟ್ಟಣದ ಮೂಲಕ ಕೊರೊನಾ ವೈರಸ್ ಹರಡಿದೆ ಎಂದು ತಿಳಿಸಿದೆ.
ಕೊವಿಡ್, ಚೀನಾದ ಹೊರತಾಗಿ ಇತರ ದೇಶದಲ್ಲಿ ಹುಟ್ಟಿಕೊಂಡಿರುವ ಸಾಧ್ಯತೆಯ ಬಗ್ಗೆ ಜಿನೀವಾದ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮೈಕ್ ರಯಾನ್, ಕೊರೊನಾ ವೈರಾಣು ಚೀನಾದಲ್ಲಿ ಹುಟ್ಟಿಕೊಂಡಿಲ್ಲ ಎಂದು ಹೇಳುವುದು ಕಷ್ಟ ಎಂದಿದ್ದಾರೆ. ಮೊದಲ ಪ್ರಕರಣ ಎಲ್ಲಿ ಪತ್ತೆಯಾಯಿತು ಎಂಬುದನ್ನು ಅವಲಂಬಿಸಿ ವೈರಾಣುವಿನ ಬಗ್ಗೆ ತನಿಖೆ ನಡೆಸುವುದು ವಿಧಾನ ಎಂದು ಹೇಳಿರುವ ಅವರು WHO ವುಹಾನ್ಗೆ ಸಂಶೋಧಕರನ್ನು ಕಳಿಸಲು ಉದ್ದೇಶಿಸಿದೆ ಎಂದಿದ್ದಾರೆ.
ಇದನ್ನೂ ಓದಿ ಕೊರೊನಾ ಹುಟ್ಟಿದ್ದು ಭಾರತದದಲ್ಲಿಯೇ ಅಂತೆ.. ಚೀನಾ ಸಂಶೋಧಕರ ಹೊಸ ವಾದ!
Published On - 5:05 pm, Sat, 28 November 20