Toronto Mass Shooting: ಕೆನಡಾದ ಟೊರೊಂಟೊದಲ್ಲಿ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು

ಕೆನಡಾದ ಟೊರೊಂಟೊದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ನಾರ್ತ್ ಯಾರ್ಕ್‌ನ ಲಾರೆನ್ಸ್ ಹೈಟ್ಸ್ ನೆರೆಹೊರೆಯಲ್ಲಿ ಗುಂಡಿನ ದಾಳಿ ನಡೆದಿದೆ.ಫ್ಲೆಮಿಂಗ್ಟನ್ ರಸ್ತೆ ಮತ್ತು ಜಕಾರಿ ಕೋರ್ಟ್ ಬಳಿ ರಾತ್ರಿ 8.40 ಕ್ಕೆ ಗುಂಡಿನ ದಾಳಿ ನಡೆದ ವರದಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಟೊರೊಂಟೊ ಪೊಲೀಸರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಂದೂಕುಧಾರಿಗಾಗಿ ಹುಡುಕಾಟ ಇನ್ನೂ ಮುಂದುವರೆದಿದೆ.

Toronto Mass Shooting: ಕೆನಡಾದ ಟೊರೊಂಟೊದಲ್ಲಿ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು
ಗುಂಡಿನ ದಾಳಿ

Updated on: Jun 04, 2025 | 10:06 AM

ಟೊರೊಂಟೊ, ಜೂನ್ 04: ಕೆನಡಾದ ಪ್ರಸಿದ್ಧ ನಗರ ಟೊರೊಂಟೊದ ಲಾರೆನ್ಸ್​ ಹೈಟ್ಸ್​ ಪ್ರದೇಶದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Mass Shooting)ಯಲ್ಲಿ ಓರ್ವ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಉತ್ತರ ಯಾರ್ಕ್‌ನ ಲಾರೆನ್ಸ್ ಹೈಟ್ಸ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಗುಂಡುಗಳಿಂದ ಗಾಯಗೊಂಡ ಕನಿಷ್ಠ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೊರೊಂಟೊ ಪೊಲೀಸರು ದೃಢಪಡಿಸಿದ್ದಾರೆ.

ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಫ್ಲೆಮಿಂಗ್ಟನ್ ರಸ್ತೆ ಮತ್ತು ಜಕಾರಿ ಕೋರ್ಟ್ ಬಳಿ ರಾತ್ರಿ 8.40 ಕ್ಕೆ ಗುಂಡಿನ ದಾಳಿ ನಡೆದ ವರದಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಟೊರೊಂಟೊ ಪೊಲೀಸರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಂದೂಕುಧಾರಿಗಾಗಿ ಹುಡುಕಾಟ ಇನ್ನೂ ಮುಂದುವರೆದಿದೆ.

ಮತ್ತಷ್ಟು ಓದಿ: ದೆಹಲಿ: ಮೆಟ್ರೋ ನಿಲ್ದಾಣದ ಬಳಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಒಬ್ಬರಿಗೆ ಗಂಭೀರ ಗಾಯ

ಲಾರೆನ್ಸ್ ಹೈಟ್ಸ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ಸುದ್ದಿಯಿಂದ ವಿಚಲಿತಗೊಂಡಿದ್ದೇನೆ ಎಂದು ಟೊರೊಂಟೊ ಮೇಯರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನನ್ನ ಕಚೇರಿ ಟೊರೊಂಟೊ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇತರ ಐದು ಮಂದಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪೊಲೀಸರು ಇನ್ನೂ ಯಾವುದೇ ಶಂಕಿತರನ್ನು ಬಂಧಿಸಿಲ್ಲ, ದಾಳಿಕೋರನನ್ನು ಹುಡುಕುತ್ತಿದ್ದೇವೆ.  ದಾಳಿಯ ಹಿಂದಿನ ಉದ್ದೇಶವೂ ಇನ್ನೂ ತಿಳಿದುಬಂದಿಲ್ಲ. ಆ ಪ್ರದೇಶದಲ್ಲಿ ಕಮಾಂಡ್ ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ತನಿಖೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ