ಅಮೆರಿಕದಲ್ಲಿ ಕೃಷಿ ಭಯೋತ್ಪಾದನೆ ಹರಡಲು ಹೊರಟಿತ್ತೇ ಚೀನಾ? ಇಬ್ಬರನ್ನು ಬಂಧಿಸಿದ ಎಫ್‌ಬಿಐ
ಚೀನಾವು ಅಮೆರಿಕದಲ್ಲಿ ಕೃಷಿ ಭಯೋತ್ಪಾದನೆ ಹರಡಲು ಯತ್ನಿಸಿತ್ತೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅದಕ್ಕೆ ಕಾರಣ ಕೂಡ ಇದೆ. ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕಗಳನ್ನು ಕಳ್ಳಸಾಗಣೆ ಮಾಡಿರುವ ಆರೋಪದ ಮೇಲೆ ಚೀನಾದ ಪ್ರಜೆಯನ್ನು ಬಂಧಿಸಿದೆ. ಬಂಧಿತ ಚೀನೀ ಪ್ರಜೆಯ ಹೆಸರು ಯುನ್‌ಕಿಂಗ್ ಜಿಯಾನ್. ಜಿಯಾನ್ ವಿರುದ್ಧ ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು ಕಳ್ಳಸಾಗಣೆ ಮಾಡಿದ ಆರೋಪವಿದೆ. ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಅವರೇ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಪ್ರಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್, ಜೂನ್ 04: ಅಮೆರಿಕದ ಕೇಂದ್ರ ತನಿಖಾ ಸಂಸ್ಥೆಯಾದ ಎಫ್‌ಬಿಐ, ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕಗಳನ್ನು ಕಳ್ಳಸಾಗಣೆ ಮಾಡಿರುವ ಆರೋಪದ ಮೇಲೆ ಚೀನಾದ ಪ್ರಜೆಯನ್ನು ಬಂಧಿಸಿದೆ. ಬಂಧಿತ ಚೀನೀ ಪ್ರಜೆಯ ಹೆಸರು ಯುನ್‌ಕಿಂಗ್ ಜಿಯಾನ್. ಜಿಯಾನ್ ವಿರುದ್ಧ ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು ಕಳ್ಳಸಾಗಣೆ ಮಾಡಿದ ಆರೋಪವಿದೆ. ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಪ್ರಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಂಧಿತ ಮಹಿಳೆ ಯುನ್ಕಿಂಗ್ ಜಿಯಾನ್ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪಟೇಲ್ ಹೇಳಿದ್ದಾರೆ.ಈ ಶಿಲೀಂಧ್ರದ ಮೇಲೆ ಕೆಲಸ ಮಾಡಲು ಚೀನಾ ಸರ್ಕಾರದಿಂದ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಚೀನೀ ಮಹಿಳೆ ಕಳ್ಳಸಾಗಣೆ ಆರೋಪ ಹೊತ್ತಿರುವ ರೋಗಕಾರಕವನ್ನು ವಿಜ್ಞಾನ ಜಗತ್ತಿನಲ್ಲಿ ಸಂಭಾವ್ಯ ಕೃಷಿ ಭಯೋತ್ಪಾದನಾ ಅಸ್ತ್ರ ಎಂದು ಕರೆಯಲಾಗುತ್ತದೆ.
ಶಿಲೀಂಧ್ರ ಕಳ್ಳಸಾಗಣೆ ಪಟೇಲ್ ಪ್ರಕಾರ, ಜಿಯಾನ್ ಫ್ಯುಸಾರಿಯಮ್ ಗ್ರಾಮಿನೇರಮ್ ಎಂಬ ಅಪಾಯಕಾರಿ ಶಿಲೀಂಧ್ರವನ್ನು ಅಮೆರಿಕಕ್ಕೆ ತಂದು ಸಂಶೋಧನೆಗಾಗಿ ಬಳಸಿದರು.ಈ ಶಿಲೀಂಧ್ರವನ್ನು ಕೃಷಿ-ಭಯೋತ್ಪಾದನಾ ಏಜೆಂಟ್ ಎಂದು ಪರಿಗಣಿಸಲಾಗುತ್ತದೆ, ಇದು ಗೋಧಿ, ಬಾರ್ಲಿ, ಮೆಕ್ಕೆಜೋಳ ಮತ್ತು ಭತ್ತದಂತಹ ಪ್ರಮುಖ ಬೆಳೆಗಳಲ್ಲಿ ಹೆಡ್ ಬ್ಲೈಟ್ ಎಂಬ ರೋಗವನ್ನು ಹರಡುತ್ತದೆ.
ಇದು ಬೆಳೆಗಳಿಗೆ ಭಾರಿ ಹಾನಿಯನ್ನುಂಟುಮಾಡುವುದಲ್ಲದೆ, ಮಾನವ ಮತ್ತು ಪ್ರಾಣಿಗಳ ಆರೋಗ್ಯಕ್ಕೂ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಶಿಲೀಂಧ್ರವು ಪ್ರತಿ ವರ್ಷ ವಿಶ್ವಾದ್ಯಂತ ಶತಕೋಟಿ ಡಾಲರ್ ಆರ್ಥಿಕ ಹಾನಿಯನ್ನುಂಟುಮಾಡಲು ಕಾರಣವಾಗಿದೆ ಎಂದು ಪಟೇಲ್ ಬರೆದಿದ್ದಾರೆ.
ಮತ್ತಷ್ಟು ಓದಿ: Kash Patel: ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ನೇಮಕಗೊಂಡ ಕಾಶ್ ಪಟೇಲ್ ಯಾರು?
ಈ ಪ್ರಕರಣದಲ್ಲಿ ಚೀನಾದ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡುತ್ತಿರುವ ಜಿಯಾನ್‌ನ ಗೆಳೆಯ ಜುನ್ಯಾಂಗ್ ಲಿಯು ವಿರುದ್ಧವೂ ತನಿಖಾ ಸಂಸ್ಥೆಗಳು ಆರೋಪ ಹೊರಿಸಿವೆ. ಮೊದಲು ಸುಳ್ಳು ಹೇಳಿದ್ದ ಆದರೆ ನಂತರ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಲು ಡೆಟ್ರಾಯಿಟ್ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣದ ಮೂಲಕ ಅಮೆರಿಕಕ್ಕೆ ಅದೇ ಶಿಲೀಂಧ್ರವನ್ನು ತಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
New… I can confirm that the FBI arrested a Chinese national within the United States who allegedly smuggled a dangerous biological pathogen into the country.
The individual, Yunqing Jian, is alleged to have smuggled a dangerous fungus called “Fusarium graminearum,” which is an…
— FBI Director Kash Patel (@FBIDirectorKash) June 3, 2025
ಜಿಯಾನ್ ಮತ್ತು ಲಿಯು ಇಬ್ಬರ ಮೇಲೂ ಪಿತೂರಿ, ಅಮೆರಿಕಕ್ಕೆ ಅಕ್ರಮ ಸರಕುಗಳನ್ನು ಕಳ್ಳಸಾಗಣೆ ಮಾಡುವುದು, ಸುಳ್ಳು ಹೇಳಿಕೆ ನೀಡುವುದು ಮತ್ತು ವೀಸಾ ವಂಚನೆ ಮುಂತಾದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಇಡೀ ಪ್ರಕರಣವನ್ನು ಎಫ್‌ಬಿಐ ಮತ್ತು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಜಂಟಿಯಾಗಿ ತನಿಖೆ ನಡೆಸಿವೆ.
ಚೀನೀ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ನಿರಂತರವಾಗಿ ಏಜೆಂಟರು ಮತ್ತು ಸಂಶೋಧಕರನ್ನು ಅಮೆರಿಕದ ಸಂಸ್ಥೆಗಳಿಗೆ ಕಳುಹಿಸುತ್ತಿದೆ, ಅವರ ಗುರಿ ನಮ್ಮ ಆಹಾರ ಪೂರೈಕೆ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ. ಇದು ಅಮೆರಿಕದ ನಾಗರಿಕರು ಮತ್ತು ಆರ್ಥಿಕತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಕಾಶ್ ಪಟೇಲ್ ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ನಿರಂತರವಾಗಿ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಚೀನಾದ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಬಿಗಿಗೊಳಿಸುವುದಾಗಿ ಟ್ರಂಪ್ ಆಡಳಿತ ಇತ್ತೀಚೆಗೆ ಘೋಷಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ