ವೆಬ್ಸೈಟ್ ಗಳಿಂದ ‘ಲಿಂಗ ಸಿದ್ಧಾಂತ’ವನ್ನು ತೆಗೆದುಹಾಕಲು ಏಜೆನ್ಸಿಗಳಿಗೆ ಆದೇಶ ನೀಡಿದ ಟ್ರಂಪ್

ಕೇವಲ ಎರಡು ಲಿಂಗಗಳನ್ನು ಮಾತ್ರ ಗುರುತಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಂಬಂಧಪಟ್ಟಂತೆ ಇದೀಗ ಟ್ರಂಪ್ ಆಡಳಿತವು ಫೆಡರಲ್ ಏಜೆನ್ಸಿಗಳಿಗೆ ಒಪ್ಪಂದಗಳು, ಉದ್ಯೋಗ ವಿವರಣೆಗಳು ಮತ್ತು ವೆಬ್ಸೈಟ್ ನಲ್ಲಿರುವ "ಲಿಂಗ ಸಿದ್ಧಾಂತ" ದ ಉಲ್ಲೇಖಗಳನ್ನು ತೆಗೆದುಹಾಕುವಂತೆ ಆದೇಶ ನೀಡಿದೆ. ಈ ಬಗ್ಗೆ ಇಲ್ಲಿದೆ ವರದಿ

ವೆಬ್ಸೈಟ್ ಗಳಿಂದ ಲಿಂಗ ಸಿದ್ಧಾಂತವನ್ನು ತೆಗೆದುಹಾಕಲು ಏಜೆನ್ಸಿಗಳಿಗೆ ಆದೇಶ ನೀಡಿದ ಟ್ರಂಪ್
ಟ್ರಂಪ್
Edited By:

Updated on: Feb 01, 2025 | 5:58 PM

ತೃತೀಯ ಲಿಂಗ ಹೊರತು ಪಡಿಸಿ ಎರಡು ಲಿಂಗಗಳನ್ನು ಮಾತ್ರ ಗುರುತಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅನುಗುಣವಾಗಿ ಇದೀಗ ಟ್ರಂಪ್ ಆಡಳಿತವು ಫೆಡರಲ್ ಏಜೆನ್ಸಿಗಳಿಗೆ ಒಪ್ಪಂದಗಳು, ಉದ್ಯೋಗ ವಿವರಣೆಗಳು ಮತ್ತು ಇಮೇಲ್ ಸಹಿಯಲ್ಲಿ “ಲಿಂಗ ಸಿದ್ಧಾಂತ” (Gender Ideology) ದ ಉಲ್ಲೇಖಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.

ಸಿಡಿಸಿಯ ಮುಖ್ಯ ಮಾಹಿತಿ ಅಧಿಕಾರಿ ಜೇಸನ್ ಬೊನಾಂಡರ್ ಅವರು, ಲಿಂಗ ಸಿದ್ಧಾಂತ ಹಾಗೂ ಈ ನೀತಿಯಲ್ಲಿ ಅನುಮತಿಸದ ಯಾವುದೇ ಇತರ ಮಾಹಿತಿಯನ್ನು ಉದ್ಯೋಗಿಗಳು ಸಹಿಯಿಂದ ಲಿಂಗ ಸಿದ್ಧಾಂತ (Gender Ideology) ಶುಕ್ರವಾರ ಸಂಜೆ ಐದು ಗಂಟೆಯೊಳಗೆ ತೆಗೆದುಹಾಕಬೇಕು” ಎಂದು ಶುಕ್ರವಾರ ಬೆಳಗ್ಗೆ ಸಂದೇಶ ಕಳುಹಿಸಿದ್ದಾರೆ. ಸರ್ಕಾರಿ ಅನುದಾನದ ಅರ್ಜಿಗಳಿಂದ ಹಿಡಿದು ಇಲಾಖೆಯಾದ್ಯಂತ ಇಮೇಲ್ ಸಹಿಗಳವರೆಗೆ ಲಿಂಗಸಿದ್ಧಾಂತ ತೆಗೆದುಹಾಕಲು ನೌಕರರಿಗೆ ಸೂಚಿಸಲಾಗಿದೆ ಎಂದು ಮೂಲಗಳು ಎಬಿಸಿ ನ್ಯೂಸ್‌ಗೆ ತಿಳಿಸಿವೆ.

ಇದನ್ನೂ ಓದಿ: ಟ್ರಂಪ್ ಒಂದೇ ಕಲ್ಲಿಗೆ ಎರಡು ಹಕ್ಕಿ; ಅಮೆರಿಕ ಅಧ್ಯಕ್ಷರ ಮುಂದಿನ ನಡೆಯಿಂದ ಭಾರತ, ಚೀನಾಗೆ ಆತಂಕ

ಗುರುವಾರ ಇದೇ ರೀತಿಯ ಸೂಚನೆಯನ್ನು ಸ್ವೀಕರಿಸಿದ ಇಂಧನ ಇಲಾಖೆಯ ಉದ್ಯೋಗಿಗಳಿಗೆ ಟ್ರಂಪ್‌ರ ಕಾರ್ಯನಿರ್ವಾಹಕ ಆದೇಶ ಪಾಲಿಸುವ ಸಲುವಾಗಿ ಡಿಇಐ ತೆಗೆದು ಹಾಕಲು ತಿಳಿಸಲಾಗಿದೆ. ಇತರ ಫೆಡರಲ್ ಏಜೆನ್ಸಿಗಳಲ್ಲಿನ ಉದ್ಯೋಗಿಗಳು ಇದೇ ರೀತಿಯ ಸಂದೇಶಗಳನ್ನು ಸ್ವೀಕರಿಸಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:57 pm, Sat, 1 February 25