
ವಾಷಿಂಗ್ಟನ್, ಸೆಪ್ಟೆಂಬರ್ 04: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ.
ಅಮೆರಿಕ ಇನ್ನೂ ಹಂತ-2, ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದ ಟ್ರಂಪ್
ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ.
ಈ ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ. 25 ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ. 50 ಕ್ಕೆ ತಲುಪಿದೆ.
ಮತ್ತಷ್ಟು ಓದಿ: ಭಾರತದ ಕ್ಷಮೆಯಾಚಿಸಿ; ಟ್ರಂಪ್ ಸುಂಕ ನೀತಿಗೆ ಅಮೆರಿಕದ ತಜ್ಞರಿಂದಲೇ ಟೀಕೆ
ಆದರೆ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ರೈತರ ಸುರಕ್ಷತೆಯೇ ತನಗೆ ಮುಖ್ಯ ಅವರನ್ನು ಉಳಿಸಿಕೊಳ್ಳಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಹೇಳಿದ್ದರು.
ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು, ತಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಹಸ ಮಾಡಿದ್ದೇನೆ. ನಂತರ ಬೈಡನ್ ಆಡಳಿತದಲ್ಲಿ ಯುಎಸ್ ಅವನತಿ ಹೊಂದಲು ಪ್ರಾರಂಭಿಸಿತು.
ಇದಾದ ಬಳಿಕ ನಾನು ಆಡಳಿತಲ್ಲಿ ನಾನು ಅಂದುಕೊಂಡ ಮಟ್ಟಕ್ಕೆ ಅದನ್ನು ಕೊಂಡೊಯ್ದಿದ್ದೇನೆ. ನಾವು ತುಂಬಾ ಉತ್ಸಾಹಿಗಳು, ಸುಂಕಗಳು ಮತ್ತು ಇತರ ಮೂಲಕ ಬರುವ ಹಣವು ನಮಗೆ ತುಂಬಾ ದೊಡ್ಡದು ಎಂದಿದ್ದಾರೆ.ನಾವು ಭಾರತದೊಂದಿಗೆ ಹೊಂದಿಕೊಳ್ಳುತ್ತೇವೆ. ಆದರೆ, ಭಾರತ ಹಲವು ವರ್ಷಗಳಿಂದ ಅದು ಏಕಪಕ್ಷೀಯ ಸಂಬಂಧವಾಗಿತ್ತು.
ಹಾಗೇ ಇದು ನಮ್ಮಿಂದ ಅಗಾಧ ಸುಂಕವನ್ನು ವಿಧಿಸುತ್ತಿತ್ತು. ಆದರಿಂದ ನಾವು ಭಾರತದೊಂದಿಗೆ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ ಅವರು ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದರು ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ