2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸುವುದಿಲ್ಲ ಎಂದು ಅವರ ಸೋದರ ಸಂಬಂಧಿ ಮೇರಿ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಡೆನ್ ವಿರುದ್ಧ ಮತ್ತೊಮ್ಮೆ ಸೋಲುವ ಹೆದರಿಕೆ ಅವರನ್ನು ಕಾಡುತ್ತಿದೆ ಎಂಬ ಆಂತರಿಕ ಗುಟ್ಟೊಂದನ್ನು ಹೊರಹಾಕಿದ್ದಾರೆ.
ಮೂಲಗಳ ಪ್ರಕಾರ ಡೊನಾಲ್ಡ್ ಟ್ರಂಪ್ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ. ಆದರೆ ಬಿಡೆನ್ ಭಯ ಅವರನ್ನು ಮುಂದಿನ ಬಾರಿಯೂ ಕಾಡಲಿದೆ. ಜೊತೆಗೆ ಟ್ರಂಪ್ ಜೀವನ ಶೈಲಿ ಉತ್ತಮವಾಗಿಲ್ಲ. 2024ರ ವೇಳೆಗೆ ಅವರು ವಿಪರೀತ ಅನಾರೋಗ್ಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ ಎಂದು ಮೇರಿ ತಿಳಿಸಿದ್ದಾರೆ. ಟ್ರಂಪ್ 2024ರಲ್ಲೂ ಸ್ಪರ್ಧಿಸುತ್ತಾರೆ ಎಂದು ಟ್ರಂಪ್ ಅವರ ಅಧಿಕೃತ ವಕ್ತಾರರು ಇತ್ತೀಚಿಗೆ ತಿಳಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮೇರಿ ರಹಸ್ಯ ಬಿಚ್ಚಿಟ್ಟಿದ್ದಾರೆ.
ವೈಟ್ ಹೌಸ್ನಲ್ಲೇ ಝಾಂಡಾ ಊರುವ ಆಸೆಯಿಂದ ಅಧ್ಯಕ್ಷ ಪಟ್ಟ ಬಿಡಲು ನಿರಾಕರಿಸುತ್ತಿರುವ ಟ್ರಂಪ್ರನ್ನು ಕಾನೂನಿನ ಉರುಳೂ ಸುತ್ತಿಕೊಳ್ಳಲಿದೆ. ಹೀಗಾಗಿ 2024ರಲ್ಲಿ ಸ್ಪರ್ಧಿಸುವ ಆಸೆಯನ್ನು ಅವರು ತ್ಯಜಿಸುವುದೊಳಿತು ಎಂದೇ ಮೇರಿ ಹೇಳಿದ್ದಾರೆ.
ಅರಿಜೋನಾದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾರಣ ಡೆಮೊಕ್ರೆಟಿಕ್ ಪಾರ್ಟಿಗೆ 290 ಎಲೆಕ್ಟೋರಲ್ ಮತಗಳು ಲಭಿಸಲಿವೆ. ಈ ಗೆಲುವನ್ನೇ ಮುಂದಿಟ್ಟುಕೊಂಡು ಟ್ರಂಪ್ ತಮ್ಮ ಹಠ ಸಾಧಿಸಲಿದ್ದಾರೆ ಎಂದು ವಿಶ್ಲೇಷಣೆಗಳು ಕೇಳಿಬಂದಿವೆ. ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡದ ಅವರು ಭಯಾನಕ ಡಯಟ್ ಮಾಡುತ್ತಾರೆ.
ಈ ಜೀವನಶೈಲಿ ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಲಿದೆ. ಬಿಡೆನ್ ವಿರುದ್ಧ ಸೋಲಿನಿಂದ ಕಂಗೆಟ್ಟಿದ್ದಾರೆ. ಅವರ ಮನಸ್ಥಿತಿ ಈಗಲೇ ಉದ್ವಿಗ್ನವಾಗಿದೆ. ಅಸಹಾಯಕ ಮನಸ್ಥಿತಿಯಲ್ಲಿ ಅವರಿದ್ದಾರೆ ಎಂದು ಮೂಲಗಳು ತಿಳಿಸಿವೆ.