Tsunami Warning: ಇಂಡೋನೇಷ್ಯಾದಲ್ಲಿ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ

ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪ ವರದಿಯಾಗುತ್ತಲೇ ಇದೆ.

Tsunami Warning: ಇಂಡೋನೇಷ್ಯಾದಲ್ಲಿ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ
ಭೂಕಂಪ (ಸಂಗ್ರಹ ಚಿತ್ರ)
Edited By:

Updated on: Sep 11, 2022 | 7:36 AM

ಜಕಾರ್ತಾ: ಇಂಡೋನೇಷ್ಯಾದ ಈಸ್ಟ್​ ಪಪುವಾ ಮತ್ತು ಆಸ್ಟ್ರೇಲಿಯಾದ ನ್ಯೂ ಗಿನಿಯಾ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.6 ರಷ್ಟು ಇತ್ತು. ಭೂಕಂಪದ ನಂತರ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಎಚ್ಚರಿಕೆಯ ಸಂದೇಶ ನೀಡಿದೆ. ‘ಕೈನಂಟು ಪಟ್ಟಣಕ್ಕೆ 67 ಕಿಲೋಮೀಟರ್ ದೂರದಲ್ಲಿ ಭೂಮಿಯ 61 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಸುತ್ತಲ 1,000 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಅಪ್ಪಳಿಸಬಹುದು ಎಂದು ಜಿಯಾಲಾಜಿಕಲ್ ಸರ್ವೇ ಎಚ್ಚರಿಸಿದೆ.

ಇಂಡೋನೇಷ್ಯಾದ ವೆಸ್ಟ್​ ಪಪುವಾ ಪ್ರಾಂತ್ಯದಲ್ಲಿ ನಿನ್ನೆಯಷ್ಟೇ (ಸೆ.10) 6.2 ಹಾಗೂ 5.5 ತೀವ್ರತೆಯ ಎರಡು ಭೂಕಂಪಗಳು ವರದಿಯಾಗಿದ್ದವು. ಭೂಮಿಯಿಂದ 16 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು. ನಿನ್ನೆಯ ಭೂಕಂಪದಿಂದ ಸುನಾಮಿ ಆತಂಕ ಇಲ್ಲ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ಹೇಳಿತ್ತು. ಆಸ್ತಿಪಾಸ್ತಿಗೆ ಆದ ಹಾನಿ ಹಾಗೂ ಜೀವಹಾನಿಯ ಬಗ್ಗೆಯೂ ಯಾವುದೆ ಮಾಹಿತಿ ಲಭ್ಯವಾಗಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪ ವರದಿಯಾಗುತ್ತಲೇ ಇದೆ. ಸುಮಾರು 2.70 ಕೋಟಿ ಜನಸಂಖ್ಯೆಯ ದೇಶದಲ್ಲಿ ಜ್ವಾಲಾಮುಖಿ ಮತ್ತು ಸುನಾಮಿಗಳೂ ಆಗಾಗ ವರದಿಯಾಗುತ್ತಿವೆ. ಇಂಡೋನೇಷ್ಯಾ ದೇಶವು ಭೌಗೋಳಿಕವಾಗಿ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದಲ್ಲಿ ಬರುತ್ತದೆ. ಇಲ್ಲಿ ಭೂಗರ್ಭದಲ್ಲಿರುವ ವೈವಿಧ್ಯಮಯ ಟೆಕ್ಟೊನಿಕ್ ಪ್ಲೇಟ್​ಗಳು ಸಂಧಿಸುತ್ತವೆ. ಇದರಿಂದ ಸರಪಳಿ ಪ್ರಕ್ರಿಯೆಗಳು ನಡೆದು, ಹಲವು ಸಂದರ್ಭದಲ್ಲಿ ಭೂಕಂಪಕ್ಕೆ ಕಾರಣವಾಗುತ್ತದೆ. ಇಂಡೋನೇಷ್ಯಾದ ಪಾಪುವಾ ಪ್ರದೇಶದಲ್ಲಿ ಜನಸಂಖ್ಯೆ ವಿರಳವಾಗಿದೆ. ಹೀಗಾಗಿ ಹೆಚ್ಚಿನ ಸಾವುನೋವು, ಅಪಾಯ ವರದಿಯಾಗಿಲ್ಲ.

Published On - 7:36 am, Sun, 11 September 22