ನಾನು ಅತ್ಯಂತ ಸುಂದರವಾಗಿರುವುದರಿಂದಲೇ ಏರ್​ಪೋರ್ಟ್​ನಲ್ಲಿ ನನ್ನನ್ನು ಬಂಧಿಸಲಾಗಿದೆ; ಯುವತಿ ಹೀಗೆ ಹೇಳಿದ್ದೇಕೆ?

ವಿಮಾನ ನಿಲ್ದಾಣದಲ್ಲಿ ಆ ಯುವತಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೋಲಿಸ್ ಘಟನಾ ಸ್ಥಳಕ್ಕೆ ಕರೆಯಲಾಯಿತು. ಆದರೆ, ಹೆಂಡ್ ಬುಸ್ತಮಿ ಎಂಬ ಮಹಿಳೆಯನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ.

ನಾನು ಅತ್ಯಂತ ಸುಂದರವಾಗಿರುವುದರಿಂದಲೇ ಏರ್​ಪೋರ್ಟ್​ನಲ್ಲಿ ನನ್ನನ್ನು ಬಂಧಿಸಲಾಗಿದೆ; ಯುವತಿ ಹೀಗೆ ಹೇಳಿದ್ದೇಕೆ?
ಲಾಸ್ ವೇಗಾಸ್ ವಿಮಾನ ನಿಲ್ದಾಣ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 10, 2022 | 2:36 PM

ನವದೆಹಲಿ: ಕೆಲವೊಂದು ಸುದ್ದಿಗಳು ಅಚ್ಚರಿ ಮೂಡಿಸಿದರೆ ಇನ್ನು ಕೆಲವು ನಗು ಬರಿಸುವಂತಿರುತ್ತವೆ. ಅಮೆರಿಕಾದ ಲಾಸ್ ವೇಗಾಸ್ (Las Vegas) ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಇತ್ತೀಚೆಗೆ ರೆಸ್ಟೋರೆಂಟ್‌ನಿಂದ ಬಿಲ್ ಪಾವತಿಸದೆ ಪರಾರಿಯಾಗಿದ್ದಕ್ಕೆ ಮತ್ತು ವಿಮಾನ ನಿಲ್ದಾಣದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ, ಆ 28 ವರ್ಷದ ಯುವತಿ ಆ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚಿದ್ದು, ತಾನು ತುಂಬಾ ಸುಂದರವಾಗಿರುವುದರಿಂದ ತನ್ನನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಆಕೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೋಲಿಸ್ ಘಟನಾ ಸ್ಥಳಕ್ಕೆ ಕರೆಯಲಾಯಿತು. ಆದರೆ, ಹೆಂಡ್ ಬುಸ್ತಮಿ ಎಂಬ ಮಹಿಳೆಯನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ. ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗೆ ಬೇಕಾಗಿದ್ದ ಯುವತಿಯನ್ನು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: Viral Video: ಜೈಪುರ ವಿಮಾನ ನಿಲ್ದಾಣದಲ್ಲಿ ಕಲಾವಿದರ ಜೊತೆ ಡ್ಯಾನ್ಸ್​ ಮಾಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ವಿಡಿಯೋ ವೈರಲ್

ಕೊನೆಗೂ ಪೋಲೀಸರು 28 ವರ್ಷದ ಯುವತಿಯನ್ನು ಲಗೇಜ್ ಕ್ಲೈಮ್ ಪ್ರದೇಶದಲ್ಲಿ ಪತ್ತೆಹಚ್ಚಿದರು. ಆದರೆ, ಆಕೆ ಪೊಲೀಸರಿಗೆ ಸಹಕರಿಸದೆ ಗಲಾಟೆ ಮಾಡಿದಳು. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆ ಯುವತಿ, ನಾನು ಬಹಳ ಸುಂದರವಾಗಿದ್ದರಿಂದ ನನ್ನನ್ನು ಬಂಧಿಸಿದ್ದಾರೆ. ಆ ಪೊಲೀಸರು ನನ್ನನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು. ಅವರು ವಿಕೃತ ಮನಸ್ಥಿತಿಯವರಾಗಿದ್ದರು. ನನ್ನಷ್ಟು ಸುಂದರಿಯನ್ನು ಅವರು ಬೇರೆಲ್ಲೂ ನೋಡದ ಕಾರಣ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ