AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧ್ಯಯನವೊಂದರ ಪ್ರಕಾರ ಕಳೆದ ಮೂರು ದಶಕಗಳಲ್ಲಿ 11 ಲಕ್ಷಕ್ಕಿಂತ ಹೆಚ್ಚು ಕಡಲಾಮೆಗಳನ್ನ ಕೊಲ್ಲಲಾಗಿದೆ

ವಿಶ್ವಸಂಸ್ಥೆಯಿಂದ ಹೊರಬಿದ್ದಿರುವ ವರದಿಯೊಂದರ ಪ್ರಕಾರ ಕಡಲಾಮೆಗಳನ್ನು ಹೆಚ್ಚಾಗಿ ಮಾಂಸ ಮತ್ತು ಚಿಪ್ಪುಗಳಿಗಾಗಿ ಕೊಲ್ಲಲಾಗುತ್ತದೆ ಮತ್ತು ದೇಹದ ಭಾಗಗಳನ್ನು ಆಭರಣ, ಆಟಿಕೆ ಮತ್ತು ಸಾಂಪ್ರದಾಯಿಕ ಶೈಲಿ ಔಷಧಿ ತಯಾರಿಸಲು ಉಪಯೋಗಿಸಲಾಗುತ್ತದೆ.

ಅಧ್ಯಯನವೊಂದರ ಪ್ರಕಾರ ಕಳೆದ ಮೂರು ದಶಕಗಳಲ್ಲಿ 11 ಲಕ್ಷಕ್ಕಿಂತ ಹೆಚ್ಚು ಕಡಲಾಮೆಗಳನ್ನ ಕೊಲ್ಲಲಾಗಿದೆ
ಕಡಲಾಮೆ
TV9 Web
| Edited By: |

Updated on: Sep 11, 2022 | 8:01 AM

Share

ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ (ASU) ವಿಜ್ಞಾನಿಗಳು ನಡೆಸಿರುವ ಒಂದು ಆಧ್ಯಯನದ ಪ್ರಕಾರ 1990 ರಿಂದ 2020 ರವರೆಗಿನ ಮೂರು ದಶಕಗಳ ಅವಧಿಯಲ್ಲಿ 11 ಲಕ್ಷಕ್ಕಿಂತ ಹೆಚ್ಚು ಕಡಲಾಮೆಗಳನ್ನು (sea turtles) ಅಕ್ರಮವಾಗಿ ಕೊಲ್ಲಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಕಳ್ಳಸಾಗಾಣಿಕೆ ಮಾಡಲಾಗಿದೆ. ಸದರಿ ವರದಿಯನ್ನು ಗ್ಲೋಬಲ್ ಚೇಂಜ್ ಬಯಾಲಜಿಯಲ್ಲಿ (Global Change Biology) ಪ್ರಕಟಿಸಲಾಗಿದೆ. ಕಳೆದೊಂದು ದಶಕದ ಅವಧಿಯಲ್ಲಿ, 65 ರಾಷ್ಟ್ರಗಳು ಅಥವಾ ಪ್ರಾಂತ್ಯಗಳಲ್ಲಿ ವಾರ್ಷಿಕವಾಗಿ 44,000 ಸಮುದ್ರ ಆಮೆಗಳನ್ನು ಕೊಲ್ಲಲಾಗಿದೆ ಮತ್ತು ಪ್ರಪಂಚದಾದ್ಯಂತ ಆಮೆ ಜನಸಂಖ್ಯೆಯ 58 ಪ್ರಮುಖ ಸಮುದ್ರಗಳ ಪೈಕಿ 44 ರಿಂದ ಆಮೆಗಳನ್ನು ಕೊಲ್ಲಲಾಗಿದೆ ಎಂದು ಅಧ್ಯಯನ ಹೇಳಿದೆ. ಅವುಗಳನ್ನು ವಶಕ್ಕೆ ಪಡೆಯುವುದು ಮತ್ತು ಬಳಕೆಯನ್ನು ನಿಷೇಧಿಸುವ ಕಾನೂನುಗಳು ಜಾರಿಯಲ್ಲಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವುಗಳ ಬೇಟೆ ನಡೆದಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ (ASU) ಸಹಾಯಕ ಸಂಶೋಧನಾ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಜೆಸ್ಸೆ ಸೆಂಕೊ ಅವರು ದಿ ಗಾರ್ಡಿಯನ್‌ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ, ‘ಅಸಲಿಗೆ ಈ ಸಂಖ್ಯೆಗಳು ಮತ್ತಷ್ಟು ದೊಡ್ಡವು ಅನ್ನೋದು ನಿಸ್ಸಂದೇಹ. ಬಹಳಷ್ಟು ವರದಿಗಳಲ್ಲಿ ನಿಖರವಾದ ಸತ್ಯಕ್ಕೆ ಹತ್ತಿರವಿರಬಹುದಾದ ಅಂಕಿ ಅಂಶಗಳನ್ನು ನೀಡಿಲ್ಲ. ಇದಕ್ಕೆ ಕಾರಣವೂ ಇದೆ. ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಡಾಟಾ ಬಗ್ಗೆ ನಿಖರವಾಗಿ ಹೇಳುವುದು ಬಹಳ ಕಷ್ಟ,’ ಅಂತ ಹೇಳಿದ್ದಾರೆ.

ವಿಶ್ವಸಂಸ್ಥೆಯಿಂದ ಹೊರಬಿದ್ದಿರುವ ವರದಿಯೊಂದರ ಪ್ರಕಾರ ಕಡಲಾಮೆಗಳನ್ನು ಹೆಚ್ಚಾಗಿ ಮಾಂಸ ಮತ್ತು ಚಿಪ್ಪುಗಳಿಗಾಗಿ ಕೊಲ್ಲಲಾಗುತ್ತದೆ ಮತ್ತು ದೇಹದ ಭಾಗಗಳನ್ನು ಆಭರಣ, ಆಟಿಕೆ ಮತ್ತು ಸಾಂಪ್ರದಾಯಿಕ ಶೈಲಿ ಔಷಧಿ ತಯಾರಿಸಲು ಉಪಯೋಗಿಸಲಾಗುತ್ತದೆ. ಕಡಲಾಮೆಗಳ ಬೇಟೆ ಮತ್ತು ಕಳ್ಳಸಾಗಣೆಯೂ ಭಾಗವಾಗಿರುವ ಅಕ್ರಮ ವನ್ಯಜೀವಿ ವ್ಯಾಪಾರ ವಹಿವಾಟು ಸುಮಾರು 2 ಲಕ್ಷ ಕೋಟಿ ರೂ. ಗಳಷ್ಟು ಬೃಹತ್ತಾಗಿದೆ.

ಆದರೆ ವಿಜ್ಞಾನಿಗಳಲ್ಲಿ ಸೋಜಿಗ ಹುಟ್ಟಿಸಿರುವ ಸಂಗತಿಯೇನೆಂದರೆ ಇಷ್ಟು ಭಾರಿ ಪ್ರಮಾಣದಲ್ಲಿ ಕಡಲಾಮೆಗಳ ಬೇಟೆ, ಹತ್ಯೆ ನಡೆಯುತ್ತಿದ್ದರೂ, ಕಳೆದ ದಶಕದಲ್ಲಿ ಅವುಗಳ ಅಕ್ರಮ ಶೋಷಣೆ ಶೇಕಡ 28 ರಷ್ಟು ಕಡಿಮೆಯಾಗಿರುವ ಬಗ್ಗೆ ವರದಿಯಾಗಿರೋದು! ಕಡಲಾಮೆಗಳ ಬೇಟೆ ಹೆಚ್ಚಾಗಿರುತ್ತದೆ ಅಂದುಕೊಂಡಿದ್ದ ವಿಜ್ಞಾನಿಗಳಿಗಳಲ್ಲಿ ಈ ಸಂಗತಿ ಸಖೇದಾಶ್ಚರ್ಯ ಉಂಟು ಮಾಡಿದೆ.

ಅಧ್ಯಯನವನ್ನು ಮಂಡಿಸಿದವರಲ್ಲಿ ಒಬ್ಬರಾಗಿರುವ ಮತ್ತು ಸ್ಕೂಲ್ ಆಫ್ ಲೈಫ್ ಸೈನ್ಸಸ್‌ ವಿಭಾಗದ ಎ ಎಸ್ ಯು ನ ಪರಿಸರ ಜೀವ ವಿಜ್ಞಾನ ಪ್ರೊಗ್ರಾಮ್ ನಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿಯಾಗಿರುವ ಕೈಲಾ ಬರ್ಗರ್ ಹೇಳಿರುವ ಪ್ರಕಾರ, ‘ಕಳೆದ ದಶಕದಲ್ಲಿನ ಕಡಲಾಮೆಗಳ ಬೇಟೆಯಲ್ಲಿ ಕಂಡುಬಂದಿರುವ ಕುಸಿತವು ವನ್ಯಜೀವಗಳ ರಕ್ಷಣೆಗೆ ಶಾಸನ ಮತ್ತಷ್ಟು ಕಠಿಣಗೊಳಿಸಿರುವುದು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಿದ್ದು ಕಾರಣವಾಗುರಬಹುದು,’ ಎಂದು ಹೇಳಿದ್ದಾರೆ.

ಕಳೆದ ದಶಕದಲ್ಲಿ ವರದಿಯಾಗಿರುವ ಕಡಲಾಮೆಗಳ ಹೆಚ್ಚಿನ ಅಕ್ರಮ ಶೋಷಣೆಯು ದೊಡ್ಡಗಾತ್ರದ, ಸ್ಥಿರ ಮತ್ತು ತಳೀಯವಾಗಿ ಭಿನ್ನವಾದ ಸಮುದ್ರ ಆಮೆಗಳ ಜನಸಂಖ್ಯೆಯಲ್ಲಿ ಸಂಭವಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್