ರಾಣಿ ಎಲಿಜಬೆತ್ರ 70-ವರ್ಷ ಆಳ್ವಿಕೆ ನಂತರ ಚಾರ್ಲ್ಸ್ lll ಬ್ರಿಟನ್ ದೊರೆಯೆಂದು ಅಧಿಕೃತವಾಗಿ ಘೋಷಿಸಲಾಯಿತು
ತಮ್ಮ ತಾಯಿ ರಾಣಿ ಎಲಿಜಬೆತ್ lI ಅವರ ಉತ್ತರಾಧಿಕಾರಿಯಾಗಿದ್ದ ರಾಜಕುಮಾರ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ಅವರ ಮರಣದ ನಂತರ ಸ್ವಾಭಾವಿಕವಾಗಿ ಬ್ರಿಟನ್ನಿನ ದೊರೆಯಾದರಾದರೂ, ಅಕ್ಸೆಷನ್ ಕೌನ್ಸಿಲ್ ಅದನ್ನು ವಿದ್ಯುಕ್ತವಾಗಿ ಮತ್ತು ಸಾಂಪ್ರದಾಯಿಕವಾಗಿ ಅವರನ್ನು ಹೊಸ ದೊರೆ ಎಂದು ಘೋಷಿಸಿತು.
ಲಂಡನಲ್ಲಿರುವ ಸೆಂಟ್ ಜೇಮ್ಸ್ ಅರಮನೆಯ (St James Palace) ಶನಿವಾರ ನಡೆದ ಸಿಂಹಾಸನಾರೋಹಣ ಸಭೆಯಲ್ಲಿ ಚಾರ್ಲ್ಸ್ llI (Charles llI) ಅವರು ಬ್ರಿಟನ್ನಿನ ದೊರೆ ಎಂದು ಘೋಷಿಸಲಾಗಿದ್ದು ಸದರಿ ವಿಷಯವನ್ನು ಟೆಲಿವಿಷನ್ ಮೂಲಕ ಬಿತ್ತರಿಸಲಾಗಿದೆ ಪ್ರಿನ್ಸ್ ವಿಲಿಯಮ್ಸ್, ಪ್ರಧಾನ ಮಂತ್ರಿ ಲಿಜ್ ಟ್ರಸ್, ಆರ್ಚ್ ಬಿಷಪ್ ಜಸ್ಟಿನ್ ವೆಬ್ಲಿ ಅವರ ಸಮ್ಮುಖದಲ್ಲಿ ಬ್ರಿಟನ್ನಿನ ದೊರೆ ಅಧಿಕೃತ ಘೋಷಣೆಯ ಮೇಲೆ ಚಾರ್ಲ್ಸ್ llI ಸಹಿ ಹಾಕಿದರು.
ತಮ್ಮ ತಾಯಿ ರಾಣಿ ಎಲಿಜಬೆತ್ lI ಅವರ ಉತ್ತರಾಧಿಕಾರಿಯಾಗಿದ್ದ ರಾಜಕುಮಾರ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ಅವರ ಮರಣದ ನಂತರ ಸ್ವಾಭಾವಿಕವಾಗಿ ಬ್ರಿಟನ್ನಿನ ದೊರೆಯಾದರಾದರೂ, ಅಕ್ಸೆಷನ್ ಕೌನ್ಸಿಲ್ ಅದನ್ನು ವಿದ್ಯುಕ್ತವಾಗಿ ಮತ್ತು ಸಾಂಪ್ರದಾಯಿಕವಾಗಿ ಅವರನ್ನು ಹೊಸ ದೊರೆ ಎಂದು ಘೋಷಿಸಿತು.
ಅಕ್ಸೆಷನ್ ಕೌನ್ಸಿಲ್ ಅನ್ನೋದು ಪ್ರಿವಿ ಕೌನ್ಸಿಲ್ ಸದಸ್ಯರನ್ನು ಒಳಗೊಂಡಿರುತ್ತದೆ. ಈ ಗುಂಪಿನಲ್ಲಿ ಹಿರಿಯ ಮಾಜಿ ಮತ್ತು ಹಾಲಿ ಸಂಸತ್ ಸದಸ್ಯರು, ರಾಜಮನೆತನದ ಆಪ್ತರು, ನಾಗರಿಕ ಸೇವೆ ಅಧಿಕಾರಿಗಳು, ಕಾಮನ್ ವೆಲ್ ಹೈ ಕಮೀಶನರ್ಗಳು ಮತ್ತು ಲಂಡನ್ ಮೇಯರ್ ಇರುತ್ತಾರೆ.
ಬೆಳಗ್ಗೆ 11 ಗಂಟೆಯಿಂದ ಧ್ವಜಗಳು ಧ್ವಜಸ್ತಂಭದ ತುದಿಯಲ್ಲಿ ಹಾರಿದವು ಮತ್ತು ರಾಯಲ್ ತೋಪುಗಳನ್ನು ಸಿಡಿಸಲಾಯಿತು. ಹೌಸ್ ಆಫ್ ಕಾಮನ್ಸ್ ನಲ್ಲಿ ಹಿರಿಯ ಸರ್ಕಾರೀ ಅಧಿಕಾರಿಗಳು ಸಹ ಕಿಂಗ್ ಚಾರ್ಲ್ಸ್ llI ಹೆಸರಲ್ಲಿ ಪ್ರಮಾಣ ಮಾಡಿದರು.
ಶುಕ್ರವಾರದಂದು ಬ್ರಿಟನ್ ಅರಸೊತ್ತಿಗೆಯ ಪ್ರತಿನಿಧಿಯಾಗಿ ಮೊದಲ ಭಾಷಣ ಮಾಡಿದ ಕಿಂಗ್ ಚಾರ್ಲ್ಸ್ ಅವರು ರಾಣಿ ಎಲಿಜಬೆತ್ ಅವರನ್ನು ಅಪ್ಯಾಯತೆಯಿಂದ ನೆನೆದರು. ತಾನು ಬದುಕಿರುವವರೆಗೆ ದೇಶಕ್ಕೆ ನಿಷ್ಠೆ, ಗೌರವ ಮತ್ತು ಪ್ರೀತಿಯಿಂದ ಸೇವೆ ಸಲ್ಲಿಸುವುದಾಗಿ ಅವರು ಹೇಳಿದರು.
ಗುರುವಾರದಂದು ಸುದೀರ್ಘ 70 ವರ್ಷಗಳವರೆಗೆ ಬ್ರಿಟನ್ನಿನ ಮಹಾರಾಣಿಯಾಗಿದ್ದ 96-ವರ್ಷ-ವಯಸ್ಸಿನವರಾಗಿದ್ದ ರಾಣಿ ಎಲಿಜಮೆತ್ ಅವರು ನಿಧನ ಹೊಂದಿದ ಮೇಲೆ ಯುನೈಟೆಡ್ ಕಿಂಗ್ಡಮ್ ಶೋಕಾಚರಣೆಯಲ್ಲಿ ಮುಳುಗಿದೆ. ರಾಣಿಯ ಅಂತ್ಯಸಂಸ್ಕಾರ ಮುಂದಿನ ವಾರದಲ್ಲಿ ನಡೆಯಲಿದೆ.