ಲಾಟರಿಯಲ್ಲಿ ರೂ. 50,000 ಗೆದ್ದಿರುವೆ ಅಂದುಕೊಂಡಿದ್ದ ವ್ಯಕ್ತಿ ಹಣ ಪಡೆಯಲು ಹೋದಾಗ ಸಿಕ್ಕಿದ್ದು ಮಾತ್ರ ಊಹಿಸಲಾಗದ ಮೊತ್ತ!

ಅನ್ನಂಡೇಲ್‌ನ ಜೋಸ್ ಫ್ಲೋರೆಸ್ ವೆಲಾಸ್ಕ್ವೆಜ್ ಹೆಸರಿನ ಅದೃಷ್ಟವಂತ ಸೋಡಾ ಬಾಟಲಿ ಖರೀದಿಸುವಾಗ ಟಿಕೆಟ್ ತೆಗೆದುಕೊಂಡಿದ್ದು ಅಂತ ವರ್ಜೀನಿಯಾ ಲಾಟರಿ ಅಧಿಕಾರಿಗಳಿಗೆ ಹೇಳಿದ್ದಾರೆ.

ಲಾಟರಿಯಲ್ಲಿ ರೂ. 50,000 ಗೆದ್ದಿರುವೆ ಅಂದುಕೊಂಡಿದ್ದ ವ್ಯಕ್ತಿ ಹಣ ಪಡೆಯಲು ಹೋದಾಗ ಸಿಕ್ಕಿದ್ದು ಮಾತ್ರ ಊಹಿಸಲಾಗದ ಮೊತ್ತ!
ಜೋಸ್ ಫ್ಲೋರೆಸ್ ವೆಲಾಸ್ಕ್ವೆಜ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2022 | 8:08 AM

ಅದೃಷ್ಟವೆಂದರೆ ಇದೇ ಇರಬೇಕು ಮಾರಾಯ್ರೇ. ಅಸಲಿಗೆ ಆಗಿದ್ದೇನೆಂದರೆ ಅಮೆರಿಕದ ವರ್ಜಿನಿಯ ನಿವಾಸಿಯೊಬ್ಬರು ಲಾಟರಿಯಲ್ಲಿ ಬಂದ 600 ಡಾಲರ್ ಗಳ (ಸುಮಾರು 48,000 ಸಾವಿರ ರೂ.) ಮೊತ್ತವನ್ನು ಪಡೆಯಲು ಲಾಟರಿ ಆಫೀಸಿಗೆ ಹೋಗಿದ್ದಾರೆ. ಆದರೆ ಅಲ್ಲಿಗೆ ಹೋದ ನಂತರವೇ ಅವರಿಗೆ ಗೊತ್ತಾಗಿದ್ದು, ತನ್ನ ಟಿಕೆಟ್ ಗೆ ಹೊಡೆದಿರೋದು 600 ಡಾಲರ್ ಗಳ ಬಹುಮಾನವಲ್ಲ ಬದಲಿಗೆ ಒಂದು ಮಿಲಿಯನ್ ಡಾಲರ್ (ಸುಮಾರು 8 ಕೋಟಿ ರೂ.) ಅಂತ!

ಅನ್ನಂಡೇಲ್‌ನ ಜೋಸ್ ಫ್ಲೋರೆಸ್ ವೆಲಾಸ್ಕ್ವೆಜ್ ಹೆಸರಿನ ಅದೃಷ್ಟವಂತ ಸೋಡಾ ಬಾಟಲಿ ಖರೀದಿಸುವಾಗ ಟಿಕೆಟ್ ತೆಗೆದುಕೊಂಡಿದ್ದು ಅಂತ ವರ್ಜೀನಿಯಾ ಲಾಟರಿ ಅಧಿಕಾರಿಗಳಿಗೆ ಹೇಳಿದ್ದಾರೆ.

ವರ್ಜೀನಿಯಾ ಲಾಟರಿ ಸಂಸ್ಥೆಯು ವಿಜೇತ ಟಿಕೆಟ್ ಮಾರಾಟ ಮಾಡಿದ ಸೂಪರ್ಮಾರ್ಕೆಟ್ ಅಂಗಡಿಗೆ 10,000 ಡಾಲರ್ ಬೋನಸ್ ನೀಡುತ್ತದೆ.

ವಿಜೇತ ಟಿಕೆಟ್ 600 ಡಾಲರ್ ಮೌಲ್ಯದ್ದಾಗಿದೆ ಎಂದು ನಂಬಿದ್ದ ವೆಲಾಸ್ಕ್ವೆಜ್, ವರ್ಜೀನಿಯಾ ಲಾಟರಿಯ ವುಡ್‌ಬ್ರಿಡ್ಜ್ ಕಸ್ಟಮರ್ ಕೇರ್ ಕಚೇರಿಗೆ ತಮ್ಮ ಅಲ್ಪ ಮೊತ್ತದ ಹಣ ಕಲೆಕ್ಟ್ ಮಾಡಲು ಹೋಗಿದ್ದರು.

ಕೇಂದ್ರದ ಸಿಬ್ಬಂದಿ ತನ್ನ ಟಿಕೆಟ್ ಅನ್ನು ಪರಿಶೀಲಿಸಿ ಅದು $ 1 ಮಿಲಿಯನ್ ಬಹುಮಾನ ಗೆದ್ದಿದೆ ಅಂತ ಹೇಳಿದಾಗ ತಾನು ಶಾಕ್ ಗೊಳಗಾಗಿದ್ದೆ ಅಂತ ಅವರು ಹೇಳಿದ್ದಾರೆ ಸ್ಕ್ರ್ಯಾಚ್-ಆಫ್ ಆಟದ ನೂತನ ಆವೃತ್ತಿಯಲ್ಲಿ ಎರಡನೇ ಅತಿ ದೊಡ್ಡ ಬಹುಮಾನವನ್ನು ವೆಲಾಸ್ಕ್ವೆಜ್ ಪಡೆದಿದ್ದಾರೆ. ಅವರು $1 ಮಿಲಿಯನ್‌ ಬಹುಮಾನದ ಮೊತ್ತದ ಪೈಕಿ 6 ಕೋಟಿ ರೂ. ಗಳನ್ನು ನಗದು ರೂಪದಲ್ಲಿ ಪಡೆದರು.

ಗೆದ್ದ ಹಣವನ್ನು ವೆಲಾಸ್ಕ್ವೆಜ್ ತನ್ನ ಕುಟುಂಬವನ್ನು ಬೆಂಬಲಿಸಲು ಮತ್ತು ಪ್ರಾಯಶಃ ತನ್ನ ಸ್ವಂತ ವ್ಯವಹಾರ ಪ್ರಾರಂಭಿಸುವುದಕ್ಕೋಸ್ಕರ ಬಳಸಲು ಉದ್ದೇಶಿಸಿದ್ದಾರೆ.

ಬಹುಮಾನಗಳನ್ನು ಗೆದ್ದ ವರದಿಗಳ ಪರಿಣಾಮವಾಗಿ, ಅಮೆರಿಕನ್ನರು ಟಿಕೆಟ್ ಖರೀದಿಸಲು ಗ್ಯಾಸ್ ಸ್ಟೇಷನ್‌ಗಳು ಮತ್ತು ತಮಗೆ ಹತ್ತಿರವಿರುವ ಅಂಗಡಿಗಳ ಮುಂದೆ ಘೇರಾಯಿಸುತ್ತಿದ್ದಾರೆ.

ಮಿಚಿಗನ್ ಲಕ್ಕಿ ಫಾರ್ ಲೈಫ್ ಲಾಟರಿ ಸ್ಕೀಮ್ ನಲ್ಲಿ ಒಂದು ಸಂಖ್ಯಾ ಸರಣಿಯನ್ನು ಫಾಲೋ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಗಸ್ಟ್ 7 ರಂದು ಪ್ರತಿವರ್ಷ 20 ಲಕ್ಷ ರೂ. ಸಿಗುವ ಬಹುಮಾನವನ್ನು ಗೆದ್ದುಬಿಟ್ಟರು. ಜೀಲ್ಯಾಂಡ್ ನಿವಾಸಿ 55-ವರ್ಷ-ವಯಸ್ಸಿನ ಸ್ಕಾಟ್ ಸ್ನೈಡರ್ ಗ್ಯಾಸ್ ಸ್ಟೇಷನ್ ಒಂದರಲ್ಲಿ ಟಿಕೆಟ್ ಖರೀದಿಸಿದ್ದರು.

ಆದರೆ ಅವರು 20 ವರ್ಷಗಳವರೆಗೆ (ಅಥವಾ ಅವರು ಬದುಕಿರುವವರೆಗೆ) ಪ್ರತಿವರ್ಷ 20 ಲಕ್ಷ ಪಡೆಯುವ ಬದಲು ಒಂದೇ ಸಲಕ್ಕೆ ಒಟ್ಟು ಮೊತ್ತವನ್ನು ಪಡೆಯುವ ಆದ್ಯತೆಯನ್ನು ಆಯ್ಕೆ ಮಾಡಿಕೊಂಡ ಕಾರಣ ಅವರಿಗೆ 390,000 ಡಾಲರ್ ಸಿಕ್ಕಿತು!

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್