AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶಾನ್ಯ ಖಾರ್ಕಿವ್‌ನಲ್ಲಿ ಉಕ್ರೇನ್‌ನ ಪ್ರತಿದಾಳಿ ನಂತರ ಸೇನಾ ಪಡೆಗಳನ್ನು ಹಿಂಪಡೆದ ರಷ್ಯಾ

ಸುಮಾರು ಏಳು ತಿಂಗಳ ಯುದ್ಧದ ಪ್ರಾರಂಭದಲ್ಲಿ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ರಷ್ಯನ್ನರ ಹಿಮ್ಮೆಟ್ಟುವಿಕೆಯು ಉಕ್ರೇನಿಯನ್ ಪಡೆಗಳಿಗೆ ಅತಿದೊಡ್ಡ ಯಶಸ್ಸಾಗಿದೆ.

ಈಶಾನ್ಯ ಖಾರ್ಕಿವ್‌ನಲ್ಲಿ ಉಕ್ರೇನ್‌ನ ಪ್ರತಿದಾಳಿ ನಂತರ ಸೇನಾ ಪಡೆಗಳನ್ನು ಹಿಂಪಡೆದ ರಷ್ಯಾ
TV9 Web
| Edited By: |

Updated on:Sep 11, 2022 | 7:18 PM

Share

ಕೈವ್: ಉಕ್ರೇನಿಯನ್ (Ukraine) ಪಡೆಗಳು ಭಾನುವಾರ ದೇಶದ ಪೂರ್ವದಲ್ಲಿ ಪ್ರತಿದಾಳಿ ನಡೆಸಿದ್ದು, ಇದು ಸಂಘರ್ಷದ ಹಾದಿಯನ್ನು ತೀವ್ರವಾಗಿ ಬದಲಾಯಿಸಿದೆ. ಈಶಾನ್ಯ ಖಾರ್ಕಿವ್ (Kharkiv) ಪ್ರದೇಶದಲ್ಲಿ ರಷ್ಯಾ-ಆಕ್ರಮಿತ ಪ್ರದೇಶಗಳನ್ನು ಮರುಪಡೆಯುವುದಕ್ಕಾಗಿ ಉಕ್ರೇನ್‌ನ ತ್ವರಿತ ಕ್ರಮವು ಮಾಸ್ಕೋ ತನ್ನ ಪಡೆಗಳನ್ನು ಸುತ್ತುವರಿಯದಂತೆ ತಡೆದವು. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಭಾನುವಾರ 200 ದಿನಗಳನ್ನು ಪೂರೈಸಿದ್ದು ಆತುರದ ಹಿಮ್ಮೆಟ್ಟುವಿಕೆಯಲ್ಲಿ ಗಮನಾರ್ಹ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ತಡರಾತ್ರಿ ನೀಡಿದ ವಿಡಿಯ ಸಂದೇಶದಲ್ಲಿ ರಷ್ಯನ್ನರನ್ನು ಲೇವಡಿ ಮಾಡಿದ್ದುಈ ದಿನಗಳಲ್ಲಿ ರಷ್ಯಾದ ಸೈನ್ಯವು ತಾನು ಮಾಡಬಹುದಾದ ಅತ್ಯುತ್ತಮವಾದುದನ್ನು ಪ್ರದರ್ಶಿಸುತ್ತಿದೆ, ಅದು ಹಿಂದಡಿಯಿಡುತ್ತಿದೆ ಎಂದು ಹೇಳಿದರು. ಭಾನುವಾರ ಝೆಲೆನ್ಸ್ಕಿ ಉಕ್ರೇನಿಯನ್ ಸೈನಿಕರು ಚ್ಕಾಲೋವ್ಸ್ಕೆ ಮೇಲೆ ರಾಷ್ಟ್ರ  ಧ್ವಜವನ್ನು ಹಾರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದರು. ಈ ಪಟ್ಟಣವನ್ನು ಪ್ರತಿದಾಳಿಯಲ್ಲಿ ರಷ್ಯನ್ನರಿಂದ ಉಕ್ರೇನ್ ಸೈನಿಕರು ಮರುಪಡೆದಿದ್ದಾರೆ.

ಸೆಪ್ಟೆಂಬರ್ ಆರಂಭದಿಂದ ಉಕ್ರೇನ್ ಸುಮಾರು 3,000 ಚದರ ಕಿಮೀ (ಸುಮಾರು 1,160 ಚದರ ಮೈಲುಗಳು) ವಿಮೋಚನೆಗೊಳಿಸಿದೆ ಎಂದು ಉಕ್ರೇನ್‌ನ ಮಿಲಿಟರಿ ಮುಖ್ಯಸ್ಥ ಜನರಲ್ ವ್ಯಾಲೆರಿ ಜಲುಜ್ನಿ ಭಾನುವಾರ ಹೇಳಿದ್ದಾರೆ. ಉಕ್ರೇನಿಯನ್ ಪಡೆಗಳು ಈಗ ರಷ್ಯಾದ ಗಡಿಯಿಂದ ಕೇವಲ 50 ಕಿಮೀ (ಸುಮಾರು 30 ಮೈಲುಗಳು) ದೂರದಲ್ಲಿವೆ ಎಂದು ಅವರು ಹೇಳಿದ್ದಾರೆ.

ಸುಮಾರು ಏಳು ತಿಂಗಳ ಯುದ್ಧದ ಪ್ರಾರಂಭದಲ್ಲಿ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ರಷ್ಯನ್ನರ ಹಿಮ್ಮೆಟ್ಟುವಿಕೆಯು ಉಕ್ರೇನಿಯನ್ ಪಡೆಗಳಿಗೆ ಅತಿದೊಡ್ಡ ಯಶಸ್ಸಾಗಿದೆ. ಖಾರ್ಕಿವ್ ಪ್ರದೇಶದಲ್ಲಿ ಉಕ್ರೇನ್‌ನ ದಾಳಿಯು ಮಾಸ್ಕೋಗೆ ಅಚ್ಚರಿಯನ್ನುಂಟು ಮಾಡಿದೆ. ಇದರ ಬೆನ್ನಲ್ಲೇ ರಷ್ಯಾ ತನ್ನ ಅನೇಕ ಸೈನ್ಯವನ್ನು ಪ್ರದೇಶದಿಂದ ದಕ್ಷಿಣಕ್ಕೆ ಸ್ಥಳಾಂತರಿಸಿತು.

ರಷ್ಯಾದ ರಕ್ಷಣಾ ಸಚಿವಾಲಯವು ಶನಿವಾರ ಖಾರ್ಕಿವ್ ಪ್ರದೇಶದ ಇಝಿಯಂ ಮತ್ತು ಇತರ ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಂಡಿದ್ದು ದಕ್ಷಿಣಕ್ಕೆ ನೆರೆಯ ಡೊನೆಟ್ಸ್ಕ್ ಪ್ರದೇಶದಲ್ಲಿ ರಷ್ಯಾದ ಪಡೆಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ಈ ವರ್ಷದ ಆರಂಭದಲ್ಲಿ ಅವರು ರಾಜಧಾನಿಯನ್ನು ವಶಕ್ಕೆ ಪಡೆಯಲು ವಿಫಲವಾದಾಗ ಕೈವ್ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಲು ರಷ್ಯಾ ನೀಡಿದ ಸಮರ್ಥನೆಯಂತೆ ಇದು ಕಾಣುತ್ತಿದೆ. ಡೊನೆಟ್ಸ್ಕ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಮಾಸ್ಕೋದ ಪ್ರಯತ್ನದಲ್ಲಿ ಇಝಿಯಂ ಸುತ್ತಲಿನ ರಷ್ಯಾದ ಪಡೆಗಳ ಗುಂಪು ಪ್ರಮುಖ ಪಾತ್ರವಹಿಸಿವೆ. ಸೇನಾ ಪಡೆಯ  ಹಿಂತೆಗೆದುಕೊಳ್ಳುವಿಕೆಯು ಈಗ ಉಕ್ರೇನಿಯನ್ ಭದ್ರಕೋಟೆಗಳಾದ ಸ್ಲೋವಿಯನ್ಸ್ಕ್ ಮತ್ತು ಕ್ರಾಮಾಟೋರ್ಸ್ಕ್ಗೆ  ಮೇಲೆ  ರಷ್ಯಾದ ಆಕ್ರಮಣವನ್ನು ದುರ್ಬಲಗೊಳಿಸಲಿದೆ.

Published On - 7:13 pm, Sun, 11 September 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ