Mali Gold Mine Collapse: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ, 70 ಮಂದಿ ಸಾವು

|

Updated on: Jan 25, 2024 | 9:05 AM

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು 70 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಣಿಕುಸಿತದ ಅಪಾಯವಿರುವ ಪ್ರದೇಶದಲ್ಲೇ ಈ ಅವಘಡ ಸಂಭವಿಸಿದೆ. ನೈಋತ್ಯ ಕೌಲಿಕೊರೊ ಪ್ರದೇಶದ ಕಂಗಾಬಾ ಜಿಲ್ಲೆಯಲ್ಲಿ ಹಲವಾರು ಗಣಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

Mali Gold Mine Collapse: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ, 70 ಮಂದಿ ಸಾವು
ಚಿನ್ನದಗಣಿ
Image Credit source: NDTV
Follow us on

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ(Gold Mine) ಕುಸಿದು 70 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಣಿಕುಸಿತದ ಅಪಾಯವಿರುವ ಪ್ರದೇಶದಲ್ಲೇ ಈ ಅವಘಡ ಸಂಭವಿಸಿದೆ. ನೈಋತ್ಯ ಕೌಲಿಕೊರೊ ಪ್ರದೇಶದ ಕಂಗಾಬಾ ಜಿಲ್ಲೆಯಲ್ಲಿ ಹಲವಾರು ಗಣಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಅಪಘಾತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಮಾಲಿ ಸಚಿವಾಲಯವು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಕೇಳಿಕೊಂಡಿದೆ.

ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಗಣಿಗಾರರು ಗ್ಯಾಲರಿಯನ್ನು ಅಗೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಸಚಿವಾಲಯ ವಕ್ತಾರ ಬೇ ಕೌಲಿಬಾಲಿ ಹೇಳಿದ್ದಾರೆ.

ಇದಕ್ಕೂ ಮೊದಲು ಸುರಕ್ಷತಾ ಮಾನದಂಡಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಹಲವು ಬಾರಿ ಕಾರ್ಮಿಕರಿಗೆ ಸಲಹೆ ನೀಡಲಾಗಿತ್ತು ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಅಲ್​ಜಜೀರಾ ವರದಿ ಪ್ರಕಾರ, ಗಣಿಗಾರಿಕೆ ಸ್ಥಳಗಳ ಸಮೀಪ ವಾಸಿಸುವ ಸಮುದಾಯಗಳು ಹಾಗೂ ಚಿನ್ನದ ಗಣಿಯಲ್ಲಿ ಕೆಲಸ ಮಾಡುವವರು ಪ್ರಾಮಾಣಿಕವಾಗಿ ಸುರಕ್ಷತಾ ಮಾನದಂಡಗಳನ್ನು ಪೂರೈಸುವಂತೆ ಸರ್ಕಾರ ಮನವಿ ಮಾಡಿದೆ.

ಮತ್ತಷ್ಟು ಓದಿ:ಕೆಆರ್​​​​ಎಸ್ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ನಿರ್ಬಂಧ: ಕರ್ನಾಟಕ ಹೈಕೋರ್ಟ್ ಆದೇಶ

ವಿಶ್ವದ ಬಡ ದೇಶಗಳಲ್ಲಿ ಒಂದಾಗಿರುವ ಮಾಲಿ, ಆಫ್ರಿಕಾದ ಪ್ರಮುಖ ಚಿನ್ನದ ಉತ್ಪಾದಕರಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ 200ಕ್ಕೂ ಅಧಿಕ ಕಾರ್ಮಿಕರಿದ್ದರು. ಹುಡುಕಾಟ ಮುಂದುವರೆದಿದೆ. ಮಾಲಿಯ ಗಣಿ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ಹಲವಾರು ಗಣಿಗಾರರ ಸಾವನ್ನು ಘೋಷಿಸಿದೆ ಆದರೆ ನಿಖರವಾದ ಅಂಕಿಅಂಶಗಳನ್ನು ನೀಡಿಲ್ಲ.
ಸಹೇಲ್ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ತುಂಬಾ ಅಪಾಯಕಾರಿಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ