Turkey Earthquake: 3 ಪ್ರಬಲ ಭೂಕಂಪಗಳಿಂದ ನಲುಗಿದ ಟರ್ಕಿ ಹಾಗೂ ಸಿರಿಯಾ, 4,000 ಕ್ಕೂ ಹೆಚ್ಚು ಮಂದಿ ಸಾವು

|

Updated on: Feb 07, 2023 | 8:01 AM

ಟರ್ಕಿ ಹಾಗೂ ಸಿರಿಯಾದಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಪ್ರಬಲ ಭೂಕಂಪವು ಭಾರಿ ಸಾವು ನೋವನ್ನು ಉಂಟು ಮಾಡಿದೆ. ಇಲ್ಲಿಯವರೆಗೆ 4000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Turkey Earthquake: 3 ಪ್ರಬಲ ಭೂಕಂಪಗಳಿಂದ ನಲುಗಿದ ಟರ್ಕಿ ಹಾಗೂ ಸಿರಿಯಾ, 4,000 ಕ್ಕೂ ಹೆಚ್ಚು ಮಂದಿ ಸಾವು
ಭೂಕಂಪ
Follow us on

ಟರ್ಕಿ ಹಾಗೂ ಸಿರಿಯಾದಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಪ್ರಬಲ ಭೂಕಂಪವು ಭಾರಿ ಸಾವು ನೋವನ್ನು ಉಂಟು ಮಾಡಿದೆ. ಇಲ್ಲಿಯವರೆಗೆ 4000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಟರ್ಕಿಯ ನೂರ್ಡಗಿಯಿಂದ ಪೂರ್ವಕ್ಕೆ 23 ಕಿ.ಮೀ ದೂರದಲ್ಲಿ ಕಂಪನದ ಅನುಭವವಾಗಿದೆ. ನೋಡ ನೋಡುತ್ತಿದ್ದಂತೆ ಹಲವು ಕಟ್ಟಡಗಳು ನೆಲ ಕಚ್ಚಿವೆ. ಭೂಕಂಪದ ತೀವ್ರತೆಯನ್ನು 7.8 ಎಂದು ಅಳೆಯಲಾಗಿದೆ. ಇನ್ನೂ ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಟರ್ಕಿಯಲ್ಲಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 3800 4000 ಜನರು ಸಾವನ್ನಪ್ಪಿದ್ದಾರೆ ಮತ್ತು 15000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 10 ನಗರಗಳಲ್ಲಿ 1,700ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೀಡಾಗಿವೆ ಎಂದು ದೇಶದ ಉಪಾಧ್ಯಕ್ಷ ಫಿಯೆಟ್ ಒಕ್ಟೇ ಅವರನ್ನು ಉಲ್ಲೇಖಿಸಿ ವರದಿ ಹೇಳಿದೆ. ಅದೇ ಸಮಯದಲ್ಲಿ, ಸಿರಿಯಾದಲ್ಲಿ ಕನಿಷ್ಠ 783 ಜನರು ಸಾವನ್ನಪ್ಪಿದರು ಮತ್ತು 639 ಜನರು ಗಾಯಗೊಂಡರು. ಇಸ್ರೇಲ್ ಮತ್ತು ಲೆಬನಾನ್‌ನಲ್ಲಿ ಅನೇಕ ಸಾವುಗಳು ಸಂಭವಿಸುವ ಭಯವಿದೆ.

ಮತ್ತಷ್ಟು ಓದಿ: Turkey Earthquake: ಟರ್ಕಿಯಲ್ಲಿ 6.0 ತೀವ್ರತೆಯ ಮತ್ತೊಂದು ಭೂಕಂಪ

ಸಾಧ್ಯವಿರುವ ಎಲ್ಲ ಸಹಾಯವನ್ನು ಟರ್ಕಿಗೆ ಭಾರತ ಭರವಸೆ ನೀಡಿದೆ. ಇದರ ಅಡಿಯಲ್ಲಿ, NDRF ತಂಡ ಮತ್ತು ವಿಶೇಷವಾಗಿ ತರಬೇತಿ ಪಡೆದ ಶ್ವಾನ ದಳವನ್ನು ಟರ್ಕಿಗೆ ಕಳುಹಿಸಲಾಗಿದೆ. ಈ ತಂಡವು 47 ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುವ ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ ಎಂದು ಉಪ ಕಮಾಂಡೆಂಟ್ ದೀಪಕ್ ತಲ್ವಾರ್ ಹೇಳಿದ್ದಾರೆ.

ಭೂಕಂಪವು ಟರ್ಕಿ ಮತ್ತು ಸಿರಿಯಾ ನಡುವಿನ ಗಡಿಯ ಎರಡೂ ಬದಿಯ ನಿವಾಸಿಗಳ ನಿದ್ದೆ ಕಸಿದು ಸಾವಿನ ಭಯ ಹುಟ್ಟಿಸುವಂತೆ ಮಾಡಿದೆ.
ಒಂದೆಡೆ ಕಟ್ಟಡಗಳು ವಾಲಿವೆ, ಇನ್ನೊಂದೆಡೆ, ಮಳೆ, ಹಿಮಪಾತದಿಂದ ಜನರು ರಾತ್ರಿ ಬಯಲು ಪ್ರದೇಶದಲ್ಲಿ ಕಾಲ ಕಳೆಯುವಂತಾಗಿತ್ತು.

ಕೈರೋದವರೆಗೂ ಕಂಪನದ ಅನುಭವವಾಯಿತು. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ಕೇಂದ್ರಬಿಂದು ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಮೀ ದೂರದಲ್ಲಿ 18 ಕಿಮೀ ಆಳದಲ್ಲಿತ್ತು.

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಮೊದಲ ಭೂಕಂಪದ ಕೇಂದ್ರಬಿಂದುವು ಟರ್ಕಿಯ ಕಹ್ರಮನ್ಮರಸ್ ಪ್ರಾಂತ್ಯದ ಗಾಜಿಯಾಂಟೆಪ್ ನಗರದಿಂದ 30 ಕಿಲೋಮೀಟರ್ ದೂರದಲ್ಲಿದೆ ಮತ್ತು ನೆಲದಿಂದ ಸುಮಾರು 24 ಕಿಲೋಮೀಟರ್ ಆಳದಲ್ಲಿದೆ.

ಸ್ಥಳೀಯ ಸಮಯದ ಪ್ರಕಾರ, ಈ ಭೂಕಂಪವು 4:17 ಕ್ಕೆ ಸಂಭವಿಸಿದೆ. 11 ನಿಮಿಷಗಳ ನಂತರ 6.7 ತೀವ್ರತೆಯ ಎರಡನೇ ನಂತರದ ಆಘಾತವು ಅಪ್ಪಳಿಸಿತು, ಅದರ ಕೇಂದ್ರಬಿಂದುವು ನೆಲದ ಕೆಳಗೆ 9.9 ಕಿಲೋಮೀಟರ್‌ನಲ್ಲಿತ್ತು. 19 ನಿಮಿಷಗಳ ನಂತರ ಅಂದರೆ ಸಂಜೆ 4:47 ಕ್ಕೆ 5.6 ತೀವ್ರತೆಯ ಮೂರನೇ ಭೂಕಂಪವೂ ಸಂಭವಿಸಿದೆ.

ಸಿರಿಯಾದ ಡಮಾಸ್ಕಸ್, ಅಲೆಪ್ಪೊ, ಹಮಾ, ಲಟಾಕಿಯಾ ಸೇರಿದಂತೆ ಹಲವಾರು ನಗರಗಳಲ್ಲಿ ಕಟ್ಟಡಗಳು ಕುಸಿದಿರುವ ವರದಿಗಳಿವೆ. ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿನ ಹಲವು ಪ್ರದೇಶಗಳಲ್ಲಿ ಸುಮಾರು 40 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.
ಹಿಂದೆ

1939 ರಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಲ್ಲಿ 30 ಸಾವಿರ ಜನರು ಸಾವನ್ನಪ್ಪಿದ್ದರು, 1999 ರಲ್ಲಿ, ಟರ್ಕಿಯಲ್ಲಿ 7.2 ತೀವ್ರತೆಯ ಭೂಕಂಪವು 845 ಜನರನ್ನು ಬಲಿ ಪಡೆದಿತ್ತು. 2017 ರಲ್ಲಿ ಇರಾನ್-ಇರಾಕ್‌ನಲ್ಲಿ ಗಡಿಯಾಚೆಗಿನ ಭೂಕಂಪ ಸಂಭವಿಸಿದೆ. ಇರಾಕ್‌ನ ಕುರ್ದಿಶ್ ನಗರವಾದ ಹಲಾಬ್ಜಾದಿಂದ ಇರಾನ್‌ನ ಕೆರ್ಮಾನ್‌ಶಾ ಪ್ರಾಂತ್ಯದವರೆಗೆ ಕಂಪನದ ಅನುಭವವಾಗಿದೆ. ಇದರಲ್ಲಿ 630 ಮಂದಿ ಸಾವನ್ನಪ್ಪಿದ್ದರು, 8 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ