ಟರ್ಕಿಯಲ್ಲಿ ಎರಡು ದಿನಗಳಲ್ಲಿ ನಾಲ್ಕನೇ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಸೋಮವಾರ ಟರ್ಕಿಯಲ್ಲಿ ಮೂರು ಭೂಕಂಪಗಳು ಸಂಭವಿಸಿತ್ತು, 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು, ಕಟ್ಟಡ ಅವಶೇಷಗಳಡಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದೆ.
2020 ರ ಜನವರಿಯಲ್ಲಿ ಮತ್ತೊಂದು ದೊಡ್ಡ ಭೂಕಂಪದಿಂದ ಟರ್ಕಿಯು ಅಪ್ಪಳಿಸಿತ್ತು, ಇದು 6.7 ರ ತೀವ್ರತೆಯು ದೇಶದ ಪೂರ್ವ ಭಾಗದಲ್ಲಿ ಗಮನಾರ್ಹ ಹಾನಿಯನ್ನುಂಟುಮಾಡಿತು. 1999 ರಲ್ಲಿ, ಇಸ್ತಾನ್‌ಬುಲ್ ಬಳಿ 7.4 ತೀವ್ರತೆಯ ಭೂಕಂಪ ಸಂಭವಿಸಿತು ಮತ್ತು ಅಂದಾಜು 18,000 ಜನರು ಸಾವನ್ನಪ್ಪಿದರು.
ಈ ವಾರದ ಪ್ರಮುಖ ಭೂಕಂಪದ ನಂತರ ಟರ್ಕಿಯ ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ಚೀನಾ ಮೊದಲ ಕಂತು 40 ಮಿಲಿಯನ್ ಯುವಾನ್ ($5.9 ಮಿಲಿಯನ್) ತುರ್ತು ಸಹಾಯವನ್ನು ನೀಡುತ್ತದೆ ಹೇಳಲಾಗಿದೆ.
ಭೂಕಂಪವು ಟರ್ಕಿ ಮತ್ತು ಸಿರಿಯಾ ನಡುವಿನ ಗಡಿಯ ಎರಡೂ ಬದಿಯ ನಿವಾಸಿಗಳ ನಿದ್ದೆ ಕಸಿದು ಸಾವಿನ ಭಯ ಹುಟ್ಟಿಸುವಂತೆ ಮಾಡಿದೆ. ಒಂದೆಡೆ ಕಟ್ಟಡಗಳು ವಾಲಿವೆ, ಇನ್ನೊಂದೆಡೆ, ಮಳೆ, ಹಿಮಪಾತದಿಂದ ಜನರು ರಾತ್ರಿ ಬಯಲು ಪ್ರದೇಶದಲ್ಲಿ ಕಾಲ ಕಳೆಯುವಂತಾಗಿತ್ತು.
ಕೈರೋದವರೆಗೂ ಕಂಪನದ ಅನುಭವವಾಯಿತು. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ಕೇಂದ್ರಬಿಂದು ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಮೀ ದೂರದಲ್ಲಿ 18 ಕಿಮೀ ಆಳದಲ್ಲಿತ್ತು.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಮೊದಲ ಭೂಕಂಪದ ಕೇಂದ್ರಬಿಂದುವು ಟರ್ಕಿಯ ಕಹ್ರಮನ್ಮರಸ್ ಪ್ರಾಂತ್ಯದ ಗಾಜಿಯಾಂಟೆಪ್ ನಗರದಿಂದ 30 ಕಿಲೋಮೀಟರ್ ದೂರದಲ್ಲಿದೆ ಮತ್ತು ನೆಲದಿಂದ ಸುಮಾರು 24 ಕಿಲೋಮೀಟರ್ ಆಳದಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Tue, 7 February 23