ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 37 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲವು ಮಂದಿ ಪವಾಡವೆಂಬಂತೆ ಬದುಕಿ ಬಂದಿದ್ದಾರೆ. ಎನ್ಡಿಆರ್ಎಫ್ನ ರೋಮಿಯೋ ಹಾಗೂ ಜೂಲಿ ಶ್ವಾನದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಭೂಕಂಪ ಸಂಭವಿಸಿ ಸತತ 80 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ನರಳುತ್ತಿದ್ದ 6 ವರ್ಷದ ಬಾಲಕಿಯನ್ನು ಹುಡುಕಿ ಜೀವಂತವಾಗಿ ರಕ್ಷಿಸಲು ಈ ಶ್ವಾನಗಳು ಸಹಾಯ ಮಾಡಿವೆ.
ಇವರಿಬ್ಬರ ಜೋಡಿ ಟರ್ಕಿಯ 6 ವರ್ಷದ ಬಾಲಕಿಯ ಜೀವ ಉಳಿಸಿದೆ. ಇಬ್ಬರ ಸಹಾಯದಿಂದ 80 ಗಂಟೆಗಳ ನಂತರ ಬಾಲಕಿಯನ್ನು ಅವಶೇಷಗಳಿಂದ ಹೊರತೆಗೆಯಲಾಯಿತು. ಮೂರು ದಿನಗಳ ಕಾಲ ಟನ್ಗಟ್ಟಲೆ ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: Turkey Earthquake: ಸಾವಿನ ಸಂಖ್ಯೆ 37,000ಕ್ಕೂ ಹೆಚ್ಚು; ಟರ್ಕಿಗೆ ಆದ ನಷ್ಟ ಎಷ್ಟು?
ರೋಮಿಯೋ ಹಾಗೂ ಜೂಲಿ ಎಂಬ ಎರಡು ಸ್ನಿಫರ್ ಡಾಗ್ಗಳು ಭಾರತೀಯ ಎನ್ಡಿಆರ್ಎಫ್ ತಂಡದ ಭಾಗವಾಗಿದ್ದವು. ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದವು.
7.8 ತೀವ್ರತೆಯ ಭೂಕಂಪದಿಂದ ದೇಶವು ನಲುಗಿದ ನಂತರ ಎನ್ಡಿಆರ್ಎಫ್ ಟರ್ಕಿಗೆ ತೆರಳಿದೆ. ಅಲ್ಲಿ ವಿಪತ್ತು ಕಾರ್ಯಾಚರಣೆ ನಡೆಸುತ್ತಿದೆ.
ನಿವೇಶನವೊಂದರಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದುಬಿದ್ದಿತ್ತು, ಜೂಲಿ, ರೋಮಿಯೋ ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು.
ಜೂಲಿಯನ್ನು ಅವಶೇಷಗಳಡಿ ಹೋಗಲು ಸೂಚನೆ ನೀಡಲಾಗಿತ್ತು, ಒಳಗೆ ಹೋದ ಶ್ವಾನವು ಬೊಗಳಲು ಶುರು ಮಾಡಿತ್ತು.
#IndianArmy & National Disaster Response Force #NDRF In Turkey.
Saving Life’s
Proud to be an Indian. #TurkeySyriaEarthquake #earthquakeinturkey #OperationDost #HelpTurkey pic.twitter.com/yvEXr0UUlg
— Pankaj Mishra (@nn_pankaj) February 9, 2023
ಬಳಿಕ ಮತ್ತೊಂದು ಶ್ವಾನವನ್ನು ದೃಢೀಕರಣಕ್ಕಾಗಿ ಕಳುಹಿಸಲಾಗಿತ್ತು. ಬಾಲಕಿ ಜೀವಂತವಾಗಿರುವುದನ್ನು ದೃಢಪಡಿಸಿದ್ದವು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿ ಬೆರೆನ್ನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ