Turkey Earthquake: 1939ರ ದುರಂತಕ್ಕಿಂತಲೂ ಭೀಕರ; ಟರ್ಕಿಯಲ್ಲಿ 8 ದಿನಗಳ ಬಳಿಕವೂ ಜೀವಂತ ಸಿಗುತ್ತಿರುವ ಜನರು

Death Toll Crosses 41,000: ಫೆಬ್ರುವರಿ 6ರಂದು ಸಂಭವಿಸಿದ 7.5ಕ್ಕೂ ಹೆಚ್ಚಿನ ತೀವ್ರತೆಯ ಭಾರೀ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 41 ಸಾವಿರ ಗಡಿದಾಟಿ ಹೋಗಿದೆ. ಟರ್ಕಿಯಲ್ಲಿ 1939ರಲ್ಲಿ ಸಂಭವಿಸಿದ ಭೂಕಂಪಕ್ಕಿಂತಲೂ ಈ ಬಾರಿ ಹೆಚ್ಚು ಹಾನಿ ಮಾಡಿದೆ.

Turkey Earthquake: 1939ರ ದುರಂತಕ್ಕಿಂತಲೂ ಭೀಕರ; ಟರ್ಕಿಯಲ್ಲಿ 8 ದಿನಗಳ ಬಳಿಕವೂ ಜೀವಂತ ಸಿಗುತ್ತಿರುವ ಜನರು
ಟರ್ಕಿ ಭೂಕಂಪ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 15, 2023 | 7:07 AM

ಇಸ್ತಾಂಬುಲ್: ಟರ್ಕಿ ಭೂಕಂಪದಲ್ಲಿ (Turkey earthquake 2023) ಸಾವಿನ ಸಂಖ್ಯೆ ಏರಿಕೆಯ ಗತಿ ಇಳಿಯುವ ಲಕ್ಷಣ ಕಾಣುತ್ತಿಲ್ಲ. ದಿನವೂ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಫೆ. 6ರಂದು ಸಂಭವಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಸಾವಿನ ಸಂಖ್ಯೆ 41 ಸಾವಿರ ಗಡಿ ದಾಟಿ ಹೋಗಿದೆ. ಟರ್ಕಿಯೊಂದರಲ್ಲೇ ಕನಿಷ್ಠ 36 ಸಾವಿರ ಮಂದಿ ಅಸು ನೀಗಿದ್ದಾರೆ. ಅರಾಜಕ ಸ್ಥಿತಿಯಲ್ಲಿರುವ ಸಿರಿಯಾದಲ್ಲಿ ಸಾವಿನ ಲೆಕ್ಕ ಸಿಗುತ್ತಿಲ್ಲ. ಅಲ್ಲಿ ಸುಮಾರು 4 ಸಾವಿರ ಮಂದಿ ಸತ್ತಿದ್ದಾರೆಂದು ಹೇಳಲಾಗುತ್ತಿದ್ದರೂ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.

ಅದೃಷ್ಟವಶಾತ್, ಭೂಕಂಪ ಸಂಭವಿಸಿ ಕಟ್ಟಡ ಅವಶೇಷಗಳಡಿ ಹುದುಗಿಹೋಗಿ 8-9 ದಿನಗಳಾದರೂ ಹಲವರು ಜೀವಂತ ಸಿಕ್ಕಿರುವ ಘಟನೆಗಳು ನಡೆಯುತ್ತಿವೆ. ಇದು ತೀವ್ರ ಮಳೆ, ಗಾಳಿ, ಚಳಿಯಲ್ಲೂ ರಕ್ಷಣಾ ಕಾರ್ಯಾಚರಣೆಯ ಉತ್ಸಾಹವನ್ನು ತುಸು ಹೆಚ್ಚಿಸಿದೆ. ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆಯ ವೇಳೆ ಕಟ್ಟಡಗಳ ಅವಶೇಷಗಳಡಿಯಲ್ಲಿ 6ಕ್ಕೂ ಹೆಚ್ಚು ಜನರು ಜೀವಂತ ಸಿಕ್ಕಿದ್ದಾರೆ. ಇದರಲ್ಲಿ 65 ವರ್ಷದ ಒಬ್ಬ ವೃದ್ಧ ಹಾಗೂ ಒಬ್ಬ ಪುಟ್ಟ ಬಾಲಕಿಯೂ ಸೇರಿದ್ದಾರೆ. ಮೊನ್ನೆ ಎಳೆಯ ಮಗುವೊಂದು 5 ದಿನಗಳ ಕಾಲ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜೀವ ಉಳಿಸಿಕೊಂಡು ಕೂತಿದ್ದು ಸಿಕ್ಕಿತ್ತು.

ಟರ್ಕಿಗೆ ಮರ್ಮಾಘಾತ

1939ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಘಟನೆಯೊಂದರಲ್ಲಿ 33 ಸಾವಿರ ಮಂದಿ ಸತ್ತಿದ್ದರು. ಈಗಿನ ಭೂಕಂಪದಲ್ಲಿ ಟರ್ಕಿಯಲ್ಲಿ ಸಾವಿನ ಸಂಖ್ಯೆ ಅದನ್ನು ದಾಟಿ ಹೋಗಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಟರ್ಕಿಯಲ್ಲಿ 47 ಸಾವಿರ ಕಟ್ಟಡಗಳು ಹಾನಿಗೊಂಡಿವೆ ಎಂದು ನಿನ್ನೆ ಅಧ್ಯಕ್ಷ ಎರ್ಡೋಗನ್ ಮಾಹಿತಿ ನೀಡಿದ್ದರು. ಭೂಕಂಪದಿಂದ ಸಂಪೂರ್ಣ ನೆಲಸಮಗೊಂಡಿರುವ ಕಟ್ಟಡಗಳು ಮತ್ತು ಬಹುತೇಕ ಕುಸಿತದ ಹಂತಕ್ಕೆ ಬಂದಿರುವ ಕಟ್ಟಡಗಳು ಈ ಲೆಕ್ಕದಲ್ಲಿವೆ. ಸಾವಿರಾರು ಜನರು ರೈಲು ಬೋಗಿಗಳಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ಇದೆ.

ಇದನ್ನೂ ಓದಿ: Turkey Earthquake: ಅವಶೇಷಗಳಡಿ ಸಿಲುಕಿದ್ದ 6ರ ಬಾಲಕಿ 80 ಗಂಟೆಗಳ ಬಳಿಕವೂ ಬದುಕಿ ಬಂದಿದ್ದು ಹೇಗೆ?

ಟರ್ಕಿಯಲ್ಲಿ ಈಗ ರಕ್ಷಣಾ ಕಾರ್ಯಾಚರಣೆಗಳ ಬಳಿಕ ಪುನರ್ನಿರ್ಮಾಣದ ಕಾರ್ಯ ಬಹುದೊಡ್ಡ ಸವಾಲಾಗಿದೆ. ಭೂಕಂಪಪೀಡಿತ ಪ್ರದೇಶಗಳಲ್ಲಿ ವಿದ್ಯುತ್, ನೀರು ಇತ್ಯಾದಿ ವ್ಯವಸ್ಥೆ ನಿರ್ನಾಮವಾಗಿದೆ. ಕಟ್ಟಡಗಳನ್ನು ಮತ್ತೆ ನಿರ್ಮಿಸುವುದರಿಂದ ಹಿಡಿದು ಎಲ್ಲಾ ಖರ್ಚು 7 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ತಗುಲಬಹುದು ಎಂದು ಅಂದಾಜು ಮಾಡಲಾಗಿದೆ.

ಇನ್ನು ಸಿರಿಯಾದಂತೂ ವಿಚಿತ್ರ ಸ್ಥಿತಿ. ಅಲ್ಲಿ ನಿರಂತರ ನಾಗರಿಕ ಯುದ್ಧದಿಂದಾಗಿ ಅರಾಜಕ ಪರಿಸ್ಥಿತಿ ಇದೆ. ಭಾರತವೂ ಸೇರಿದಂತೆ ಹಲವು ದೇಶಗಳು ರಕ್ಷಣಾ ಸಾಮಗ್ರಿಗಳ ನೆರವನ್ನು ಸಿರಿಯಾಗೆ ಕಳುಹಿಸಿಕೊಟ್ಟಿವೆಯಾದರೂ ಅವು ಸಂತ್ರಸ್ತರನ್ನು ತಲುಪಿವೆಯಾ ಎಂದು ಯಾರೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಅಲ್ಲಿ ಸಾವು ನೋವಿನ ಅಧಿಕೃತ ಲೆಕ್ಕ ಸಿಗುವುದೂ ದುಸ್ತರವಾಗಿದೆ. ಮೇಲ್ನೋಟಕ್ಕೆ 3-4 ಸಾವಿರ ಮಂದಿ ಸತ್ತಿದ್ದಾರೆಂದು ಹೇಳಲಾಗುತ್ತಿದ್ದರೂ ಸಂಖ್ಯೆ ಬಹಳ ಹೆಚ್ಚಿರಬಹುದು.

Published On - 7:07 am, Wed, 15 February 23

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ