ಟರ್ಕಿಯ ಸ್ಕಿ ರೆಸಾರ್ಟ್​​ನಲ್ಲಿ ಅಗ್ನಿ ಅವಘಡ; 66 ಜನ ಸಾವು

|

Updated on: Jan 21, 2025 | 8:05 PM

ಟರ್ಕಿಯ ಸ್ಕಿ ರೆಸಾರ್ಟ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಭಾರಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ 66 ಜನ ಮೃತಪಟ್ಟಿದ್ದಾರೆ. ಈ ಅಗ್ನಿ ಅವಘಡದಲ್ಲಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟರ್ಕಿಯ ಬೋಲು ಪ್ರಾಂತ್ಯದಲ್ಲಿ 234 ಅತಿಥಿಗಳಿದ್ದ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ 66 ಮಂದಿ ಸಾವನ್ನಪ್ಪಿದ್ದಾರೆ. 32 ಮಂದಿಗೆ ಗಾಯಗಳಾಗಿವೆ.

ಟರ್ಕಿಯ ಸ್ಕಿ ರೆಸಾರ್ಟ್​​ನಲ್ಲಿ ಅಗ್ನಿ ಅವಘಡ; 66 ಜನ ಸಾವು
Turkiye Fire Attack
Follow us on

ಟರ್ಕಿ: ಟರ್ಕಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಜನರು ಬೆಂಕಿ ಹರಡುತ್ತಿರುವುದನ್ನು ಗಮನಿಸಿದ ನಂತರ ಮುನ್ನೆಚ್ಚರಿಕೆಯಾಗಿ ರೆಸಾರ್ಟ್‌ನಲ್ಲಿರುವ ಇತರ ಹೋಟೆಲ್‌ಗಳ ಜನರನ್ನು ಸ್ಥಳಾಂತರಿಸಲಾಯಿತು. ಟರ್ಕಿಯ ಬೋಲು ಪ್ರಾಂತ್ಯದ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಅತಿಥಿಗಳನ್ನು ಇರಿಸಲಾಯಿತು. ಇಂದು ವಾಯುವ್ಯ ಟರ್ಕಿಯಲ್ಲಿರುವ ಸ್ಕೀ ರೆಸಾರ್ಟ್‌ನ ಹೋಟೆಲ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದಾರೆ. ಸುಮಾರು 32 ಮಂದಿ ಗಾಯಗೊಂಡಿದ್ದಾರೆ.

ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ಬೆಂಕಿಗೆ ಆಹುತಿಯಾಯಿತು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.


ಇದನ್ನೂ ಓದಿ:ಹತೋಟಿಗೆ ಬಂದ ಮಹಾ ಕುಂಭಮೇಳ ಅಗ್ನಿ ದುರಂತ: ಯಾವುದೇ ಸಾವುನೋವುಗಳಾಗಿಲ್ಲ ಎಂದ ಎಡಿಜಿಪಿ

ರೆಸಾರ್ಟ್​ನಲ್ಲಿದ್ದ ಇಬ್ಬರು ಭಯಭೀತರಾಗಿ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಕೆಲವು ಜನರು ಬೆಡ್​ರೂಂನ ಬೆಡ್​ಶೀಟ್​ಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ಬದುಕುಳಿದವರು ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ

ಬೆಂಕಿಯಿಂದ ಹೋಟೆಲ್ ಹೊಗೆಯಿಂದ ಆವೃತವಾಗಿತ್ತು, ಅತಿಥಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳುವ ಸ್ಥಳವನ್ನು ಹುಡುಕಾಡುತ್ತಿದ್ದರು. ಕಾರ್ತಲ್ಕಯಾ ಇಸ್ತಾನ್‌ಬುಲ್‌ನಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಪರ್ವತದಲ್ಲಿರುವ ಜನಪ್ರಿಯ ಸ್ಕೀ ರೆಸಾರ್ಟ್ ಆಗಿದೆ. ಬೆಂಕಿ ಅವಘಡ ಸಂಭವಿಸಿದ ಸಮಯದಲ್ಲಿ ಈ ಪ್ರದೇಶದಲ್ಲಿ ಹೋಟೆಲ್‌ಗಳು ಜನರಿಂದ ತುಂಬಿದ್ದವು. 30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ