ಟಿವಿ9 ನೆಟ್ವರ್ಕ್ ಜರ್ಮನಿಯಲ್ಲಿ ಆಯೋಜಿಸುತ್ತಿರುವ ನ್ಯೂಸ್9 ಜಾಗತಿಕ ಶೃಂಗಸಭೆಗೆ ವೇದಿಕೆ ಸಿದ್ಧವಾಗಿದೆ. ಶೃಂಗಸಭೆಯ ಮೂಲಕ ಭಾರತ ಮತ್ತು ಜರ್ಮನಿಯ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳು ಇನ್ನೂ ಹೆಚ್ಚಿನ ಎತ್ತರವನ್ನು ತಲುಪಲಿವೆ.
ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಮಾರ್ಕ್ಯೂ ಶೃಂಗಸಭೆಯ ಮುಂದಿನ ಆವೃತ್ತಿಯನ್ನು ನವೆಂಬರ್ 21ರಿಂದ 23ರವರೆಗೆ ಸ್ಟಟ್ಗರ್ಟ್ನ ಎಂಎಚ್ಪಿ ಅರೆನಾದಲ್ಲಿ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಗಳ ವಿವರ
ನವೆಂಬರ್ 21 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ನ್ಯೂಸ್ 9 ಗ್ಲೋಬಲ್ ಶೃಂಗಸಭೆಯ ಭವ್ಯ ವೇದಿಕೆಯಲ್ಲಿ ಸಂಜೆ 5.30 ಕ್ಕೆ ಭಾರತ ಮತ್ತು ಜರ್ಮನಿ: ಸುಸ್ಥಿರ ಅಭಿವೃದ್ಧಿಗಾಗಿ ಮಾರ್ಗಸೂಚಿ ಎಂಬ ವಿಷಯದ ಕುರಿತು ಚರ್ಚಿಸಲಿದ್ದಾರೆ.
ಇದಾದ ತಕ್ಷಣ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಜೆ 5.50 ಕ್ಕೆ ಇದೇ ವಿಷಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಂಜೆ 6:05 ಶ್ರೀನಗರದಿಂದ ಸ್ಟಟ್‌ಗಾರ್ಟ್‌ಗೆ: ಮರ್ಸಿಡಿಸ್ ಬೆಂಜ್ ಇಂಡಿಯಾದ ಸಿಇಒ ಸಂತೋಷ್ ಅಯ್ಯರ್ ಅವರು ಗ್ರಾಹಕ ಕಾರಿಡಾರ್ ವಿಷಯದ ಕುರಿತು ಮಾತನಾಡಲಿದ್ದಾರೆ. ಸಂಜೆ 7:40ಕ್ಕೆ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾಷಣ ಮಾಡಲಿದ್ದಾರೆ.
ಎರಡನೇ ದಿನ ಏನೇನು ನಡೆಯಲಿವೆ?
ನವೆಂಬರ್ 22 ರಂದು, ನ್ಯೂಸ್9 ಜಾಗತಿಕ ಶೃಂಗಸಭೆಯ ಎರಡನೇ ದಿನ, Tv9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರ ಸ್ವಾಗತ ಭಾಷಣದ ನಂತರ ಅಂದಿನ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಎರಡೂ ದೇಶಗಳ ಸುಸ್ಥಿರ ಮತ್ತು ಶಾಶ್ವತ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ. ರ್ಮನಿಯ ಆಹಾರ ಮತ್ತು ಕೃಷಿ ಸಚಿವ ಸೆಮ್ ಒಜ್ಡೆಮಿರ್ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇದಾದ ಬಳಿಕ ಗ್ರೀನ್ ಎನರ್ಜಿ, ಎಐ, ಡಿಜಿಟಲ್ ಎಕಾನಮಿ ಕೌಶಲ್ಯ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಭಾರತದ ರಕ್ಷಣಾ ಉದ್ಯಮ ಮತ್ತು ಇಂದಿನ ಯುನಿಕಾರ್ನ್ ಕುರಿತು ಚರ್ಚೆ ನಡೆಯಲಿದೆ.
ಮತ್ತಷ್ಟು ಓದಿ: ಜರ್ಮನಿಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಭಾರತ-ಜರ್ಮನಿ ಸಂಬಂಧ ಗಟ್ಟಿಗೊಳಿಸಲು ಯೋಜನೆ; ಪ್ರಧಾನಿ ಮೋದಿಯೂ ಭಾಗಿ
ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿ
ನವೆಂಬರ್ 22 ರಂದು ಸಂಜೆ 4.30 ಕ್ಕೆ ಇಂಡಿಯಾ: ಇನ್ಸೈಡ್ ದಿ ಗ್ಲೋಬಲ್ ಬ್ರೈಟ್ ಸ್ಪಾಟ್ ಎಂಬ ವಿಷಯದ ಮೇಲೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಪೋಷೆ, ಮಾರುತಿ, ಸುಜುಕಿ, ಮರ್ಸಿಡಿಸ್ ಬೆಂಜ್, ಭಾರತ್ ಫೋರ್ಸ್, ಭಾರತ ಮತ್ತು ಜರ್ಮನಿಯ ಅನೇಕ ವ್ಯಾಪಾರ ಸಂಸ್ಥೆಗಳು, ಇಂಡೋ ಜರ್ಮನ್ ಚೇಂಬರ್ ಆಫ್ ಕಾಮರ್ಸ್ ಮತ್ತು ASSOCHAM ನಂತಹ ವ್ಯಾಪಾರ ಸಂಘಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಚರ್ಚಿಸಲಿದ್ದಾರೆ.
ಟೆಕ್ ಮಹೀಂದ್ರಾದ ಹರ್ಷುಲ್ ಅಸ್ನಾನಿ, ಮೈಕ್ರಾನ್ ಇಂಡಿಯಾದ ಆನಂದ್ ರಾಮಮೂರ್ತಿ, ಎಂಎಚ್‌ಪಿಯ ಸ್ಟೀಫನ್ ಬೇಯರ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಥ್ರೊಪೊಮೆಟ್ರಿಕ್ಸ್‌ನ ಡಾ.ಜಾನ್ ನಿಹುಯಿಸ್ ಅವರು ಕೃತಕ ಬುದ್ಧಿಮತ್ತೆ: ಅಡ್ವಾಂಟೇಜ್ ಇಂಡಿಯಾ ವಿಷಯದ ಕುರಿತು ಚರ್ಚಿಸಲಿದ್ದಾರೆ.
ಬ್ರಿಡ್ಜಿಂಗ್ ದಿ ಸ್ಕಿಲ್ ಗ್ಯಾಪ್: ಕ್ರಾಫ್ಟಿಂಗ್ ಎ ವಿನ್-ವಿನ್? ಕ್ವೆಸ್ ಕಾರ್ಪೊರೇಷನ್‌ನ ಅಜಿತ್ ಐಸಾಕ್, ಪೀಪಲ್‌ಸ್ಟ್ರಾಂಗ್‌ನ ಪಂಕಜ್ ಬನ್ಸಾಲ್, ಡಾ. ಫ್ಲೋರಿಯನ್ ಸ್ಟೆಗ್‌ಮನ್ (ರಾಜ್ಯ ಮಂತ್ರಿ ಮತ್ತು ರಾಜ್ಯ ಚಾನ್ಸೆಲರಿ ಮುಖ್ಯಸ್ಥ, ಬಾಡೆನ್-ವುರ್ಟೆಂಬರ್ಗ್), ಫಿಂಟಿಬಾದ ಜೊನಾಸ್ ಮಾರ್ಗಾಫ್ ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಇದರ ಹೊರತಾಗಿ, ಡೆವಲಪ್ಡ್ ವರ್ಸಸ್ ಡೆವಲಪಿಂಗ್: ದಿ ಗ್ರೀನ್ ಡಿಲೆಮಾ ಎಂಬ ವಿಷಯದ ಕುರಿತು, ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್‌ನ ಅಜಯ್ ಮಾಥುರ್, TERI ನ ಡಾ. ವಿಭಾ ಧವನ್, ಹೀರೋ ಫ್ಯೂಚರ್ ಎನರ್ಜಿಯ ರಾಹುಲ್ ಮುಂಜಾಲ್, ಫ್ರೌನ್‌ಹೋಫರ್ ISE ನ ಪ್ರೊಫೆಸರ್ ಆಂಡ್ರಿಯಾಸ್ ಬೇಟ್, ಡಾ. ಜೂಲಿಯನ್ ಹೊಚ್‌ಚಾರ್ಫ್ ಹೆಪ್ ಸೋಲಾರ್ ಮತ್ತು ಡಾ. ಪೀಟರ್ ಹಾರ್ಟ್‌ಮನ್ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Wed, 20 November 24