ಢಾಕಾ ಅಕ್ಟೋಬರ್23: ಬಾಂಗ್ಲಾದೇಶದಲ್ಲಿ (Bangladesh )ಸೋಮವಾರ ಎರಡು ರೈಲುಗಳು ಡಿಕ್ಕಿ ಹೊಡೆದು 15 ಜನರು ಸಾವಿಗೀಡಾಗಿದ್ದು , ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಧಾನಿ ಢಾಕಾದಿಂದ (Dhaka) ಸುಮಾರು 80 ಕಿಲೋಮೀಟರ್ (50 ಮೈಲಿ) ದೂರದಲ್ಲಿರುವ ಭೈರಬ್‌ನಲ್ಲಿ (Bhairab) ಪ್ರಯಾಣಿಕ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸಿರಾಜುಲ್ ಇಸ್ಲಾಂ ತಿಳಿಸಿದ್ದಾರೆ.
ನಾವು 15 ಶವಗಳನ್ನು ಹೊರತೆಗೆದಿದ್ದೇವೆ, ಅನೇಕರು ಗಾಯಗೊಂಡಿದ್ದಾರೆ” ಎಂದು ಭೈರಬ್‌ನ ಸರ್ಕಾರಿ ಆಡಳಿತಾಧಿಕಾರಿ ಸಾದಿಕುರ್ ರೆಹಮಾನ್ ಎಎಫ್ಪಿಗೆ ತಿಳಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತದೆೆ. ಕನಿಷ್ಠ 100 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಸಂಜೆ 4:00 ಗಂಟೆಗೆ (1000 GMT) ಸಂಭವಿಸಿದ ಈ ಅಪಘಾತವು ಒಂದು ರೈಲು ಇನ್ನೊಂದು ಮಾರ್ಗವನ್ನು ಪ್ರವೇಶಿಸಿದಾಗ ಸಂಭವಿಸಿದೆ ಎಂದು ರೆಹಮಾನ್ ಹೇಳಿದರು.
ರೈಲು ಅಪಘಾತಗಳು ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಕಳಪೆ ಸಿಗ್ನಲಿಂಗ್, ನಿರ್ಲಕ್ಷ್ಯ, ಹಳೆಯ ಟ್ರ್ಯಾಕ್‌ಗಳು ಅಥವಾ ಇತರ ಕಡಿಮೆ ಮೂಲಸೌಕರ್ಯಗಳಿಂದ ಉಂಟಾಗುತ್ತದೆ.
ವರದಿಗಳ ಪ್ರಕಾರ, ಹಾನಿಗೊಳಗಾದ ಕೋಚ್‌ಗಳ ಕೆಳಗೆ ಗಾಯಗೊಂಡ ವ್ಯಕ್ತಿಗಳು ಇದ್ದು ಹಲವಾರು ಜನರು ರೈಲಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆಯನ್ನು ಕೂಲ್ ವೃತ್ತಿ ಎಂದ ಕಾಮಿಡಿಯನ್ ವಿದುಷಿ ಸ್ವರೂಪ್; ಜನರಿಂದ ಟೀಕೆ
ಎಗರೋಸಿಂಧೂರು ಗೋಧೂಳಿ ರೈಲಿನ ಎರಡು ಹಿಂಬದಿ ಬೋಗಿಗಳಿಗೆ ಹಾನಿಯಾಗಿದೆ. “ಘಟನೆಯು ಮಧ್ಯಾಹ್ನ 3.30 ರ ಸುಮಾರಿಗೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಢಾಕಾದಿಂದ ಚಿತ್ತಗಾಂಗ್, ಸಿಲ್ಹೆಟ್ ಮತ್ತು ಕಿಶೋರ್ಗಂಜ್ಗೆ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ” ಎಂದು ಭೈರಬ್ ಸ್ಟೇಷನ್ ಮಾಸ್ಟರ್ ಯೂಸುಫ್ ಹೇಳಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Mon, 23 October 23