AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಬರ್ ಬಳಸಿ ಅಮೆರಿಕಕ್ಕೆ 800ಕ್ಕೂ ಅಧಿಕ ಭಾರತೀಯರ ಕಳ್ಳಸಾಗಣೆ: ಭಾರತ ಮೂಲದ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ

ಕ್ಯಾಲಿಫೋರ್ನಿಯಾದ ನಿವಾಸಿ ರಾಜಿಂದರ್ ಪಾಲ್ ಸಿಂಗ್ ಎಂಬಾತನಿಗೆ ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅಮೆರಿಕ ಜಿಲ್ಲಾ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಊಬರ್ ಬಳಸಿ ಅಮೆರಿಕಕ್ಕೆ 800ಕ್ಕೂ ಅಧಿಕ ಭಾರತೀಯರ ಕಳ್ಳಸಾಗಣೆ: ಭಾರತ ಮೂಲದ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ
ಪೊಲೀಸ್Image Credit source: NDTV
ನಯನಾ ರಾಜೀವ್
|

Updated on: Jun 29, 2023 | 8:23 AM

Share

ಕ್ಯಾಲಿಫೋರ್ನಿಯಾದ ನಿವಾಸಿ ರಾಜಿಂದರ್ ಪಾಲ್ ಸಿಂಗ್ ಎಂಬಾತನಿಗೆ ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅಮೆರಿಕ ಜಿಲ್ಲಾ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರೈಡ್ ಹೈಲಿಂಗ್ ಊಬರ್ ಆ್ಯಪ್ ಬಳಸಿ 800ಕ್ಕೂ ಹೆಚ್ಚು ಜನರನ್ನು ಕಳ್ಳಸಾಗಣೆ ಮಾಡಿದ್ದ. ಆರೋಪಿ ರಾಜಿಂದರ್ ಪಾಲ್ ಸಿಂಗ್ ಅಲಿಯಾಸ್ ಜಸ್ಪಾಲ್ ಗಿಲ್ ಫೆಬ್ರವರಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದೆ.

ಅವರು ನೂರಾರು ಭಾರತೀಯ ಪ್ರಜೆಗಳಿಗೆ ಕೆನಡಾದಿಂದ ಗಡಿ ದಾಟಲು ಸಹಾಯ ಮಾಡಿದ್ದ, ಈ ಸಮಯದಲ್ಲಿ ನಾಗರಿಕರಿಂದ 500,000 ಯುಎಸ್​ ಡಾಲರ್​ಗಿಂತ ಹೆಚ್ಚು ತೆಗೆದುಕೊಂಡಿದ್ದರು ಎನ್ನಲಾಗಿದೆ. ಭಾರತದಿಂದ ಅಮೇರಿಕಾಕ್ಕೆ ಸಾಗುವ ಕಳ್ಳಸಾಗಾಣಿಕೆ ಮಾರ್ಗದ ಮೂಲಕ ದೇಶಕ್ಕೆ ಮಾತ್ರವಲ್ಲದೆ ಜನರ ಸುರಕ್ಷತೆಗೂ ಅಪಾಯವಿದೆ.

ಮತ್ತಷ್ಟು ಓದಿ: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ಜಾಲ ಬಹಿರಂಗ

ಸಿಯಾಟಲ್ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ದಾಟುವ ಜನರಿಗೆ ಉಬರ್ ಬಳಸಲಾಗಿದೆ. 2018 ಮತ್ತು 2022 ರ ನಡುವೆ, ಸಿಂಗ್ 600 ಜನರನ್ನು ಕಳ್ಳಸಾಗಣೆ ಮಾಡಿದ್ದ.

ಆರೋಪಿಯ ನಿವಾಸದಿಂದ USD 45,000 ಮತ್ತು ಕೆಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆರಾಜಿಂದರ್ ಸಿಂಗ್ ಕೂಡ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು, ಜೈಲು ಶಿಕ್ಷೆ ಮುಗಿದ ಬಳಿಕ ಅವರನ್ನು ಗಡಿಪಾರು ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ