ಉಗಾಂಡಾದಲ್ಲಿ ಹೆಚ್ಚಿದ ಎಬೋಲಾ ಪ್ರಕರಣ, ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ

ಕಂಪಾಲಾ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಭಾನುವಾರದಂದು ಒಂಬತ್ತು ಜನರಿಗೆ ಎಬೋಲಾಗೆ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಜೇನ್ ರುತ್ ಅಸೆಂಗ್...

ಉಗಾಂಡಾದಲ್ಲಿ ಹೆಚ್ಚಿದ ಎಬೋಲಾ ಪ್ರಕರಣ, ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 24, 2022 | 3:41 PM

ಕಂಪಾಲಾ(ಉಗಾಂಡಾ) – ಉಗಾಂಡಾದ (Uganda) ಅಧಿಕಾರಿಗಳು ಶುಕ್ರವಾರದಿಂದ ರಾಜಧಾನಿಯಲ್ಲಿ 14 ಎಬೋಲಾ (Ebola) ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಪೂರ್ವ ಆಫ್ರಿಕಾದ ಒಳ ಪ್ರದೇಶದಲ್ಲಿ ಈ ರೋಗ ಏಕಾಏಕಿ ಕಾಣಿಸಿಕೊಂಡ ಒಂದು ತಿಂಗಳ ನಂತರ ಸೋಂಕಿನಲ್ಲಿ ಆತಂಕಕಾರಿ ಹೆಚ್ಚಳವಾಗಿದೆ. ಕಂಪಾಲಾ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಭಾನುವಾರದಂದು ಒಂಬತ್ತು ಜನರಿಗೆ ಎಬೋಲಾಗೆ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಜೇನ್ ರುತ್ ಅಸೆಂಗ್ ಸೋಮವಾರ ಹೇಳಿದ್ದಾರೆ. ಆಫ್ರಿಕಾದ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಕಳೆದ ವಾರ ಉಗಾಂಡಾದಲ್ಲಿ ಎಬೋಲಾ ವೇಗವಾಗಿ ವಿಕಸನಗೊಳ್ಳುತ್ತಿದ್ದು ಇದು ಆರೋಗ್ಯ ಕಾರ್ಯಕರ್ತರಿಗೆ ಸವಾಲಿನ ಪರಿಸ್ಥಿತಿ ತಂದೊಡ್ಡಿದೆ ಎಂದಿದ್ದಾರೆ. ಉಗಾಂಡಾದ ಆರೋಗ್ಯ ಅಧಿಕಾರಿಗಳು ಸೆಪ್ಟೆಂಬರ್ 20 ರಿಂದ 75 ಎಬೋಲಾ ಪ್ರಕರಣಗಳನ್ನು ದೃಢಪಡಿಸಿದ್ದಾರೆ. ಈವರೆಗೆ 28 ಸಾವು ವರದಿ ಆಗಿದ್ದು 19 ಸಕ್ರಿಯ ಪ್ರಕರಣಗಳಿವೆ. ಕಂಪಾಲಾದಿಂದ ಪಶ್ಚಿಮಕ್ಕೆ 150 ಕಿಲೋಮೀಟರ್ (93 ಮೈಲುಗಳು) ಕೃಷಿ ಸಮುದಾಯದಲ್ಲಿ ಏಕಾಏಕಿ ದೃಢೀಕರಿಸುವ ಮೊದಲು ಎಬೋಲಾದಿಂದ ಯಾವುದೇ ಸಾವು ವರದಿ ಆಗಿಲ್ಲ.

ಏಕಾಏಕಿ ಎಬೋಲಾ ಹರಡಬಹುದೆಂಬ ಭಯದಿಂದಾಗಿ ಎಬೋಲಾ ಪ್ರಕರಣಗಳಿದ್ದ ಐದು ಜಿಲ್ಲೆಗಳ ಪೈಕಿ ಎರಡರಲ್ಲಿ ರಾತ್ರಿಯ ಕರ್ಫ್ಯೂ ಸೇರಿದಂತೆ ಲಾಕ್ ಡೌನ್ ಮಾಡಲಾಗಿದೆ. ಎಬೋಲಾ ಸೋಂಕಿತ ವ್ಯಕ್ತಿಯೊಬ್ಬರು ಕಂಪಾಲಾದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಈ ಕ್ರಮಗಳನ್ನು ಕೈಗೊಳ್ಳಲಾಯಿತು.

ಸೋಮವಾರ ವರದಿಯಾದ ಒಂಬತ್ತು ಹೊಸ ಪ್ರಕರಣಗಳು ಇದೇ ಮಾದರಿಯನ್ನು ಅನುಸರಿಸುತ್ತವೆ. ಏಕೆಂದರೆ ಅವರೆಲ್ಲರೂ ಎಬೋಲಾ ಹಾಟ್‌ಸ್ಪಾಟ್‌ನಿಂದ ಪ್ರಯಾಣಿಸಿದ ಮತ್ತು ಮುಲಾಗೊ ಎಂದು ಕರೆಯಲ್ಪಡುವ ಕಂಪಾಲಾದ ಉನ್ನತ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಬೋಲಾ-ಸೋಂಕಿತ ರೋಗಿಯ ಸಂಪರ್ಕದಲ್ಲಿದ್ದವರಾಗಿದ್ದಾರೆ.

ಉಗಾಂಡಾದಲ್ಲಿರುವ ಎಬೋಲಾದ ಸುಡಾನ್ ತಳಿಗೆ ಸದ್ಯ ಯಾವುದೇ ಲಸಿಕೆ ಇಲ್ಲ.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್