ಮದ್ಯದ ದೊರೆ ಮಲ್ಯ ಮಗನ ವಿಹಾರ ನೌಕೆ ಸೇಲ್!

ಸಾವಿರಾರು ಕೋಟಿ ಸಾಲದ ಸುಳಿಗೆ ಸಿಲುಕಿ ದೇಶ ತೊರೆದ ವಿಜಯ್ ಮಲ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಒಡೆತನದ ವಿಹಾರ ನೌಕೆ ಮಾರಾಟಕ್ಕೆ ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಕತಾರ್ ಬ್ಯಾಂಕ್​ನ 47 ಕೋಟಿ ಸಾಲ ತೀರಿಸಲು ಮಲ್ಯ ವಿಹಾರ ನೌಕೆ ಮಾರಾಟಕ್ಕೆ ಅನುವು ನೀಡಲಾಗಿದೆ. ಭಾರತೀಯರನ್ನು ಕರೆತರಲು ಸಿದ್ಧತೆ: ಕೊರೊನಾ ವೈರಸ್ ಪೀಡಿತ ಚೀನಾದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಯತ್ನಗಳು ಆರಂಭವಾಗಿವೆ. ಕೇಂದ್ರ ಸರ್ಕಾರ ಈ ಬಗ್ಗೆ […]

ಮದ್ಯದ ದೊರೆ ಮಲ್ಯ ಮಗನ ವಿಹಾರ ನೌಕೆ ಸೇಲ್!
ಸಾಧು ಶ್ರೀನಾಥ್​

Updated on: Jan 28, 2020 | 7:41 AM

ಸಾವಿರಾರು ಕೋಟಿ ಸಾಲದ ಸುಳಿಗೆ ಸಿಲುಕಿ ದೇಶ ತೊರೆದ ವಿಜಯ್ ಮಲ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಒಡೆತನದ ವಿಹಾರ ನೌಕೆ ಮಾರಾಟಕ್ಕೆ ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಕತಾರ್ ಬ್ಯಾಂಕ್​ನ 47 ಕೋಟಿ ಸಾಲ ತೀರಿಸಲು ಮಲ್ಯ ವಿಹಾರ ನೌಕೆ ಮಾರಾಟಕ್ಕೆ ಅನುವು ನೀಡಲಾಗಿದೆ.

ಭಾರತೀಯರನ್ನು ಕರೆತರಲು ಸಿದ್ಧತೆ:
ಕೊರೊನಾ ವೈರಸ್ ಪೀಡಿತ ಚೀನಾದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಯತ್ನಗಳು ಆರಂಭವಾಗಿವೆ. ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ವೈರಸ್ ತೀವ್ರವಾಗಿ ಹರಡಿರುವ ವುಹಾನ್ ಸೇರಿದಂತೆ ಚೀನಾದ ಹಲವೆಡೆ ಇರುವ ಭಾರತೀಯರನ್ನ ಕರೆತರಲು ವಿಶೇಷ ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ರೋಗ ನಿಯಂತ್ರಣಕ್ಕೆ ಹರಸಾಹಸ!
ಮತ್ತೊಂದ್ಕಡೆ ಕೊರೊನಾ ವೈರಾಣು ಹರದಂತೆ ತೀವ್ರ ಕ್ರಮಗಳನ್ನ ಕೈಗೊಳ್ಳುತ್ತಿರುವ ಚೀನಾ ಸರ್ಕಾರ, ಸುಮಾರು 62 ಸಾವಿರ ಕೋಟಿ ರಿಲೀಸ್ ಮಾಡಿದೆ. ಈಗಾಗಲೇ 80ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್​ಗೆ ಬಲಿಯಾಗಿದ್ದು, ಈ ರೋಗ ಪೀಡಿತರ ಸಂಖ್ಯೆ 3 ಸಾವಿರದ ಆಸುಪಾಸು ತಲುಪಿದೆ.

‘ಹಸಿರು ವಲಯ’ದ ಮೇಲೆ ಮತ್ತೆ ದಾಳಿ?
ಎಲ್ಲಾ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮತ್ತೆ ಅಮೆರಿಕ-ಇರಾನ್ ನಡವೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಕೆಲ ದಿನಗಳ ಕಾಲ ಸುಮ್ಮನಿದ್ದ ಇರಾನ್ ಮತ್ತೆ ರಾಕೆಟ್ ದಾಳಿ ನಡೆಸುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇರಾಕ್​ನ ರಾಜಧಾನಿ ಬಾಗ್​ದಾದ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಮೀಪ ರಾಕೆಟ್ ದಾಳಿ ನಡೆದಿದೆ ಎನ್ನಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us