ಯುಕೆ ಪ್ರಧಾನಿ ಚುನಾವಣೆ: ಎರಡನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್ ಮುಂಚೂಣಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 14, 2022 | 8:54 PM

Rishi Sunak ರಿಷಿ ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ

ಯುಕೆ ಪ್ರಧಾನಿ ಚುನಾವಣೆ: ಎರಡನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್ ಮುಂಚೂಣಿ
ರಿಷಿ ಸುನಕ್
Follow us on

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕ (Conservative Party) ಮತ್ತು  ಬ್ರಿಟನ್ ಪ್ರಧಾನಿ (UK PM)
ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗುರುವಾರ ನಡೆದ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಒಬ್ಬ ಅಭ್ಯರ್ಥಿ ಚುನಾವಣಾ ಸುತ್ತಿನಿಂದ ಹೊರ ಬಿದ್ದಿದ್ದಾರೆ.  ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ . ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸುತ್ತಿನಿಂದ ಔಟ್ ಆಗಿದ್ದಾರೆ. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದರು.

ಮೊದಲ ಸುತ್ತಿನ ಮತದಾನದಲ್ಲಿ ರಿಷಿ 88 ಮತಗಳೊಂದಿಗೆ ಮುಂಚೂಣಿಯಲ್ಲಿದ್ದರು.  ಮೊದಲ ಸುತ್ತಿನಲ್ಲಿ ಎಂಟು ಮಂದಿ ಕಣದಲ್ಲಿದ್ದು ಒಬ್ಬರು ಹೊರ ಬಿದ್ದಿದ್ದರು. ಇನ್ಪೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್ ನಾರಾಯಣ ಮೂರ್ತಿ ಅವರ ಅಳಿಯ, ಬ್ರಿಟನ್ ನಲ್ಲಿ ಪ್ರಭಾವಿ ರಾಜಕಾರಣಿ ಆಗಿರುವ ರಿಷಿ ಕಳೆದ ವಾರ ಪಕ್ಷದ ಸಂಸದರಿಗೆ ತಮ್ಮ ಆದ್ಯತೆ ತಿಳಿಸಿದ್ದರು.

Published On - 8:44 pm, Thu, 14 July 22