BIG NEWS: ಶ್ರೀಲಂಕಾ ಅಧ್ಯಕ್ಷರದ್ದು ಖಾಸಗಿ ಭೇಟಿ, ನಾವು ಆಶ್ರಯ ನೀಡಿಲ್ಲ: ಸಿಂಗಾಪುರ

ಖಾಸಗಿ ಭೇಟಿಯಲ್ಲಿ ಶ್ರೀಲಂಕಾ ಅಧ್ಯಕ್ಷರು, ಆಶ್ರಯ ನೀಡಿಲ್ಲ ಎಂದು ಸಿಂಗಾಪುರ ಹೇಳಿದೆ.

BIG NEWS: ಶ್ರೀಲಂಕಾ ಅಧ್ಯಕ್ಷರದ್ದು ಖಾಸಗಿ ಭೇಟಿ, ನಾವು ಆಶ್ರಯ ನೀಡಿಲ್ಲ: ಸಿಂಗಾಪುರ
Sri Lankan President
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 14, 2022 | 6:48 PM

ಶ್ರೀಲಂಕಾದ (Sri Lanka) ಅಧ್ಯಕ್ಷ  ಗೊಟಬಯ ರಾಜಪಕ್ಸ(Gotabaya Rajapaksa)  ಅವರನ್ನು ಖಾಸಗಿ ಭೇಟಿಗಾಗಿ ನಮ್ಮ ದೇಶಕ್ಕೆ ಅನುಮತಿಸಲಾಗಿದೆ ಎಂದು ಸಿಂಗಾಪುರ (Singapore) ಸರ್ಕಾರ ಗುರುವಾರ ಹೇಳಿದೆ. ಅವರು ಆಶ್ರಯಕ್ಕಾಗಿ ನಮ್ಮಲ್ಲಿ ಕೇಳಿಲ್ಲ, ನಾವು ಆಶ್ರಯ ನೀಡುವುದಾಗಿ ಅನುಮತಿಸಿಲ್ಲ. ಸಿಂಗಾಪುರ  ಸಾಮಾನ್ಯವಾಗಿ ಆಶ್ರಯದ ಮನವಿ ಸ್ವೀಕರಿಸುವುದಿಲ್ಲ ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಿನ್ನಲೆಯಲ್ಲಿ ಜನಾಕ್ರೋಶ ಸಿಡಿದೆದ್ದಾಗ ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿ ಮಾಲ್ಡೀವ್ಸ್ ನಲ್ಲಿ ನೆಲೆಸಿದ್ದರು. ರಾಜಪಕ್ಸ ಅವರು ಮಾಲ್ಡೀವ್ಸ್ ನಿಂದ ಸೌದಿ ಏರ್ ಲೈನ್ ವಿಮಾನ ಎಸ್ ವಿ788ನಲ್ಲಿ ಸಿಂಗಾಪುರಕ್ಕೆ ಹೋಗಿದ್ದಾರೆ. 73ರ ಹರೆಯದ ಗೊಟಬಯ ದೇಶದಿಂದ ಪಲಾಯನ ಮಾಡಿದ ಮೇಲೆ ಬುಧವಾರದಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಸದ್ಯ ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು ಮುಂದಿನ ಅಧ್ಯಕ್ಷರ ಆಯ್ಕೆ ವರೆಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಗೊಟಬಯ ಅವರು ಬುಧವಾರ ಸೌದಿ ಏರ್ ಲೈನ್ಸ್ ವಿಮಾನ ಹತ್ತಿದ್ದು, ಅವರು ಸಿಂಗಾಪುರಕ್ಕೆ ಹೋಗಲಿದ್ದಾರೆ. ಅಲ್ಲಿಂದ ಅವರು ಜೆದ್ದಾ ನಂತರ ಸೌದಿ ಅರೇಬಿಯಾಕ್ಕೆ ಹೋಗಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳು ಹೇಳಿದ್ದರು.

ರಾಜಪಕ್ಸ ಅವರು ಗುರುವಾರ ಮಧ್ಯಾಹ್ನ   ಸೌದಿಯಾ ಏರ್ ಲೈನ್ಸ್  ವಿಮಾನದಲ್ಲಿ ಬಂದಿಳಿದಿದ್ದಾರೆ. ಲಂಕಾ ಅಧ್ಯಕ್ಷರು ಮಂಗಳವಾರ ಸಂಜೆ ಕೊಲಂಬೊದಿಂದ ಮಾಲ್ಡೀನ್ಸ್  ಗೆ ಪ್ರಯಾಣ ಬೆಳೆಸಿದ್ದರು.

ರಾಜಪಕ್ಸ ಅವರು ಗುರುವಾರ ಮಧ್ಯಾಹ್ನ ಸೌದಿಯಾ ಏರ್ ಲೈನ್ಸ್ ವಿಮಾನದಲ್ಲಿ ಬಂದಿಳಿದಿದ್ದಾರೆ. ಲಂಕಾ ಅಧ್ಯಕ್ಷರು ಮಂಗಳವಾರ ಸಂಜೆ ಕೊಲಂಬೊದಿಂದ ಮಾಲ್ಡೀನ್ಸ್ ಗೆ ಪ್ರಯಾಣ ಬೆಳೆಸಿದ್ದರು. ನಿನ್ನೆ ರಾತ್ರಿ ಅವರು ಮಾಲ್ಡೀವ್ಸ್ ಸರ್ಕಾರಕ್ಕೆ ಮನವಿ ಮಾಡಿ ಸಿಂಗಾಪುರಕ್ಕೆ ಹೋಗಲು ಖಾಸಗಿ ವಿಮಾನ ವ್ಯವಸ್ಥೆ ಮಾಡುವಂತೆ ಕೇಳಿದ್ದರು ಎಂದು ಮೂಲಗಳು ಹೇಳಿವೆ. ಕೊಲಂಬೊದಿಂದ ಹೊರ ಹೋಗುವಾಗ ಅವರು ಬುಧವಾರ ರಾತ್ರಿಯೊಳಗೆ ರಾಜೀನಾಮೆ ಸಲ್ಲಿಸುತ್ತೇನ ಎಂದು ಹೇಳಿದ್ದರು. ಆದರೆ ಅವರು ಇಲ್ಲಿಯವರೆಗೆ ರಾಜೀನಾಮೆ ಸಲ್ಲಿಸಿಲ್ಲ.

ಇದನ್ನೂ ಓದಿ
Image
ನನ್ನ ವಿರುದ್ಧ ಮಾಡಿರುವ ಲೈಂಗಿಕ ಅತ್ಯಾಚಾರದ ಆರೋಪಗಳು ಸುಳ್ಳು, ನಾನು ಅಮಾಯಕ: ಕೆವಿನ್ ಸ್ಪೇಸಿ, ಖ್ಯಾತ ಹಾಲಿವುಡ್ ನಟ
Image
Big News: ಮಾಲ್ಡೀವ್ಸ್​ನಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ ಗೊಟಬಯ ರಾಜಪಕ್ಸ
Image
Shocking Video: ಫೋಟೋ ಆಸೆಯಿಂದ ಸಮುದ್ರದಲ್ಲಿ ಕೊಚ್ಚಿ ಹೋದ ಕುಟುಂಬ; ಶಾಕಿಂಗ್ ವಿಡಿಯೋ ವೈರಲ್

ರಾಜೀನಾಮೆ ನೀಡಿ ಇಲ್ಲವೇ ನಾವು ಬೇರೆ ಆಯ್ಕೆ ಕಂಡುಕೊಳ್ಳುತ್ತೇವೆ: ಸ್ಪೀಕರ್

ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಗೊಟಬಯ ರಾಜಪಕ್ಸ ಇನ್ನೂ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಲಂಕಾ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಆದಷ್ಟು ಬೇಗ ರಾಜೀನಾಮೆ ಸಲ್ಲಿಸಿ ಇಲ್ಲವೇ ನಾವು ನಿಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವ ಆಯ್ಕೆ ಪರಿಗಣಿಸುತ್ತೇವೆ ಎಂದು ಹೇಳಿರುವುದಾಗಿ ನ್ಯೂಸ್ ಫಸ್ಟ್ ಲಂಕಾ ವರದಿ ಮಾಡಿದೆ.

Published On - 6:25 pm, Thu, 14 July 22

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?