ಲಂಡನ್ ಟ್ಯೂಬ್ ಸ್ಟೇಷನ್‌ನಲ್ಲಿ poppies ಹೂಗಳನ್ನು ಮಾರಾಟ ಮಾಡಿದ ಯುಕೆ ಪ್ರಧಾನಿ ರಿಷಿ ಸುನಕ್, ಅಚ್ಚರಿಗೊಂಡ ಜನ
ಲಂಡನ್ ಟ್ಯೂಬ್ ಸ್ಟೇಷನ್‌ನಲ್ಲಿ ಪ್ರಯಾಣಿಕರಿಗೆ ಶಾಂತಿಯ ಸಂಕೇತವಾದ poppies ಹೂಗಳನ್ನು ನೀಡುವ ಮೂಲಕ ಬ್ರಿಟನ್ ಶಾಂತಿಗಾಗಿ ಎಲ್ಲರೂ ಒಂದಾಗಬೇಕು ಎಂದು ಈ ಮೂಲಕ ತಿಳಿಸಿದ್ದಾರೆ. ಇದರ ಜೊತೆಗೆ poppies ಹೂಗಳನ್ನು 462.5 ರೂ.ಗೆ ಮಾರಾಟ ಮಾಡಿದ್ದಾರೆ.
ಯುಕೆ: ಬ್ರಿಟನ್ನಲ್ಲಿ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದೆ. ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಪಕ್ಷದ ಶ್ರೇಣಿಯಲ್ಲಿನ ಅಸಮಾಧಾನ ಹೀಗೆ ಹಲವು ವಿಚಾರಗಳು, ಹೊಸ ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ತಟ್ಟೆಯಲ್ಲಿದೆ. ಆದರೆ ಈ ತಲೆಬಿಸಿಗಳನ್ನು ಬದಿಗಿಟ್ಟು ಲಂಡನ್ ಟ್ಯೂಬ್ ಸ್ಟೇಷನ್‌ನಲ್ಲಿ ಪ್ರಯಾಣಿಕರಿಗೆ ಶಾಂತಿಯ ಸಂಕೇತವಾದ poppies ಹೂಗಳನ್ನು ನೀಡುವ ಮೂಲಕ ಬ್ರಿಟನ್ ಶಾಂತಿಗಾಗಿ ಎಲ್ಲರೂ ಒಂದಾಗಬೇಕು ಎಂದು ಈ ಮೂಲಕ ತಿಳಿಸಿದ್ದಾರೆ. ಇದರ ಜೊತೆಗೆ poppies ಹೂಗಳನ್ನು 462.5 ರೂ.ಗೆ ಮಾರಾಟ ಮಾಡಿದ್ದಾರೆ.
ವೆಸ್ಟ್‌ಮಿನಿಸ್ಟರ್ ಟ್ಯೂಬ್ ಸ್ಟೇಷನ್‌ನಲ್ಲಿ ಸಂಚಾರಿಸುತ್ತಿದ್ದ ಜನರಿಗೆ ಬ್ರಿಟನ್ ಶಾಂತಿಗಾಗಿ ಎಲ್ಲರೂ ದುಡಿಯಬೇಕು ಎಂದು ಗುರುವಾರ ಬೆಳಗ್ಗೆ poppies ವರ್ಣದ ಹೂವುಗಳನ್ನು ತುಂಬಿದ ಟ್ರೇಗಳನ್ನು ನೀಡಿದ್ದಾರೆ, ಆದರೆ ಇನ್ನು ಕಂಡು ಅಲ್ಲಿಯ ಜನರು ಆಶ್ಚರ್ಯಚಕಿತರಾಗಿದ್ದಾರೆ
ಯುಕೆ ಪ್ರಧಾನಿ ರಿಷಿ ಇಂದು ಬೆಳಿಗ್ಗೆ ವೆಸ್ಟ್‌ಮಿನ್‌ಸ್ಟರ್ ಟ್ಯೂಬ್ ಸ್ಟೇಷನ್‌ನಲ್ಲಿ poppies ವರ್ಣದ ಹೂವುಗಳನ್ನು ಜನರಿಗೆ ನೀಡುತ್ತಿದ್ದಾರೆ ಎಂದು pic.twitter.com/wyUEKFfkYZ — Calgie (@christiancalgie) ನವೆಂಬರ್ 3ರಂದು ಟ್ವಿಟ್ ಮಾಡಿದ್ದಾರೆ.
ಇದನ್ನು ಓದಿ: ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?
poppies ವರ್ಣದ ಹೂವುಗಳನ್ನು ಒಂದು ಬಾಕ್ಸ್ನಲ್ಲಿ ಹಾಕಿ ಅದನ್ನು ಮಾರಾಟ ಮಾಡಲಾಗಿದೆ. ಇದನ್ನು ಬ್ರಿಟನ್ ಪ್ರಧಾನಿ ಮಾಡಿರುವುದು ಇನ್ನೂ ವಿಶೇಷವಾಗಿದೆ. ಒಂದು ಮಗುವಿಗಾಗಿ ನಿಧಿಸಂಗ್ರಹಣೆ ಮಾಡುವ ಮೂಲಕ ಈ ಹೂವನ್ನು ತಲಾ 462.5 ರೂ. ಮಾರಾಟ ಮಾಡಿದರು ಎಂದು ಬಿಬಿಸಿ ವರದಿ ಮಾಡಿದೆ. ಬ್ರಿಟನ್ ಪ್ರಧಾನಿ ಬ್ರಿಟಿಷ್ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸೈನಿಕರೊಂದಿಗೆ ಸೇರಿಕೊಂಡು ದೇಣಿಗೆ ಪಡೆಯಲು ಮನೆ ಮನೆಗೆ ಹೋಗುತ್ತಿದ್ದಾರೆ.
Rishi out selling poppies in Westminster Tube Station this morning pic.twitter.com/wyUEKFfkYZ
— Calgie (@christiancalgie) November 3, 2022
ಸುನಕ್ ಅವರನ್ನು ಕಂಡು ಅಲ್ಲಿಯ ಜನ ಅವರೊಂದಿಗೆ ವೈಯಕ್ತಿಕವಾಗಿ ಇರಲು ಅವಕಾಶವನ್ನು ನೀಡಿತು. ಸೆಲ್ಫಿ ಕ್ಲಿಕ್ಕಿಸಿಕೊಂಡರು, ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಂತರ ಭಾರತೀಯ ಮೂಲದ ಜನರು ದೇಶದ ಮೊದಲ ಪ್ರಧಾನ ಮಂತ್ರಿಯೊಂದಿಗಿನ ತಮ್ಮ ಮೊದಲ ಭೇಟಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಹೂವನ್ನು ಖರೀದಿ ಮಾಡುವ ಮೂಲಕ ಸುಮಾರು ಹಣಗಳನ್ನು ಸಂಗ್ರಹವಾಗಿದೆ, ನಿಮ್ಮ ಉದಾರ ಮನಸ್ಸಿಗೆ ನಮ್ಮ ಧನ್ಯವಾಗಳು ಎಂದು ಪ್ರಧಾನ ಮಂತ್ರಿಗೆ ಕೃತಜ್ಞರಾಗಿರುತ್ತೇವೆ ಎಂದು ರಾಯಲ್ ಬ್ರಿಟಿಷ್ ಲೀಜನ್ ಹೇಳಿದೆ.
ಮಾಧ್ಯಮವನ್ನು ಆಹ್ವಾನಿಸದ ಬ್ರಿಟಿಷ್ ಪ್ರಧಾನಿಯ ಪೂರ್ವಸಿದ್ಧತೆಯಿಲ್ಲದ ಬಂದಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಇತರರು ಇದನ್ನು ದೇಶಭಕ್ತಿಯ ದೃಗ್ವಿಜ್ಞಾನಕ್ಕೆ ಕ್ರಾಸ್ ಫೋಟೋ ಅವಕಾಶ ಎಂದು ಕರೆದರು ಮತ್ತು ಪ್ರಧಾನ ಮಂತ್ರಿಗೆ ಕಾಳಜಿ ವಹಿಸಬೇಕಾದ ಹಲವು ವಿಚಾರಗಳು ಇದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಆಶ್ಚರ್ಯವು ಹೌದು ಎಂದು ಹೇಳಿದ್ದಾರೆ.
Published On - 11:53 am, Fri, 4 November 22