ನನಗೆ ನಾಲ್ಕು ಗುಂಡು ತಾಗಿತ್ತು: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ದಾಳಿಯ ಹಿಂದಿನ ದಿನ ವಜೀರಾಬಾದ್‌ನಲ್ಲಿ ಅಥವಾ ಗುಜರಾತ್‌ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ನನಗೆ ತಿಳಿದಿತ್ತು

ಲಾಹೋರ್: ಪಾಕಿಸ್ತಾನದ (Pakistan) ಪಂಜಾಬ್‌ನ ವಜೀರಾಬಾದ್ ಪಟ್ಟಣದಲ್ಲಿ ಗುರುವಾರ ನಡೆದ ಹತ್ಯೆಯ ಪ್ರಯತ್ನದಲ್ಲಿ ತನಗೆ ನಾಲ್ಕು ಬುಲೆಟ್‌ಗಳು ತಾಗಿತ್ತು ಎಂದು ಇಮ್ರಾನ್ ಖಾನ್ (Imran Khan) ಶುಕ್ರವಾರ ಹೇಳಿದ್ದಾರೆ. “ದಾಳಿಯ ಹಿಂದಿನ ದಿನ ವಜೀರಾಬಾದ್‌ನಲ್ಲಿ ಅಥವಾ ಗುಜರಾತ್‌ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ನನಗೆ ತಿಳಿದಿತ್ತು” ಎಂದು ಪಾಕ್ ಮಾಜಿ ಪ್ರಧಾನಿ ವಿಡಿಯೊದಲ್ಲಿ ಹೇಳಿದ್ದಾರೆ. ತಮ್ಮ ಮೇಲೆ ದಾಳಿ ನಡೆದ ನಂತರ ಲಾಹೋರ್ ಆಸ್ಪತ್ರೆಯಿಂದ ಇದೇ ಮೊದಲ ಬಾರಿ ಅವರು ಮಾತನಾಡಿದ್ದಾರೆ. ವಜೀರಾಬಾದ್ ಮತ್ತು ಗುಜರಾತ್ ಸೈನ್ಯ ಸ್ಥಾಪನೆ ಬೆಂಬಲಿತ ಫೆಡರಲ್ ಸರ್ಕಾರದ ವಿರುದ್ಧ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಸಾಗುವ ಮಾರ್ಗದಲ್ಲಿ ಬರುವ ಪಟ್ಟಣಗಳಾಗಿವೆ. ನನಗೆ ನಾಲ್ಕು ಗುಂಡು ತಾಗಿದೆ ಎಂದು ಖಾನ್ ತಮ್ಮ ಕಾಲಿನ ಮೇಲಿನ ಹೊಲಿಗೆಗಳನ್ನು ತೋರಿಸುತ್ತಾ, ಗಾಲಿಕುರ್ಚಿಯಲ್ಲಿ ಕುಳಿತು ಹೇಳಿದ್ದಾರೆ. ಅವರು ಆಸ್ಪತ್ರೆಯ ನೀಲಿ ಗೌನ್ ಧರಿಸಿದ್ದರು.
ಇಬ್ಬರು ಶೂಟರ್‌ಗಳಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಒಬ್ಬ ವ್ಯಕ್ತಿ ಮತ್ತು ಇತರ ಇಬ್ಬರು “ಅನುಮಾನಿತರನ್ನು” ಬಂಧಿಸಿದ್ದಾರೆ. ಖಾನ್ “ಅಪಾಯದಿಂದ ಪಾರಾಗಿದ್ದಾರೆ” ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಅವರ ಬೆಂಬಲಿಗರೊಬ್ಬರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಪಕ್ಷದ ಮುಖಂಡರು ಸೇರಿದಂತೆ ಕನಿಷ್ಠ 13 ಜನರು ಗುರುವಾರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಬಂಧಿತ ದಾಳಿಕೋರನು ಕ್ಯಾಮರಾದಲ್ಲಿ ಪೊಲೀಸರಲ್ಲಿ ಇಮ್ರಾನ್ ಖಾನ್ ಜನರನ್ನು ದಾರಿತಪ್ಪಿಸುತ್ತಾನೆ ಮತ್ತು ಇಸ್ಲಾಂನ ಸಿದ್ಧಾಂತಗಳಿಂದ ದೂರವಿಡುವುದರಿಂದ ನಾನು ಅಸಮಾಧಾನಗೊಂಡಿದ್ದೇನೆ” ಎಂದಿದ್ದಾನೆ. ಆದರೆ ಖಾನ್ ಮೂರು ನಾಯಕರನ್ನು ನಿರ್ದಿಷ್ಟವಾಗಿ ದೂಷಿಸಿದ್ದಾರೆ. ಪಿಎಂ ಶೆಹಬಾಜ್ ಷರೀಫ್, ಆಂತರಿಕ ಭದ್ರತಾ ಸಚಿವ ರಾಣಾ ಸನಾವುಲ್ಲಾ ಮತ್ತು ಗುಪ್ತಚರ ಸಂಸ್ಥೆ ISI ಯನ್ನು ಮುನ್ನಡೆಸುವ ಮೇಜರ್ ಜನರಲ್ ಫೈಸಲ್ ನಸೀರ್ ಇದರ ಹಿಂದೆ ಇದ್ದಾರೆ ಎಂದು ಇಮ್ರಾನ್ಖಾನ್ ಆರೋಪಿಸಿದ್ದಾರೆ
ಆದಾಗ್ಯೂ ಸರ್ಕಾರ ಈ ಆರೋಪ ನಿರಾಕರಿಸಿದ್ದು ನ್ಯಾಯಯುತ ತನಿಖೆಗೆ ಭರವಸೆ ನೀಡಿದೆ.




