AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವಣ್ಣನಿಗೆ ಗೌರವ ನಮನ ಸಲ್ಲಿಸಲು ಬ್ರಿಟಿಷ್ ಪ್ರಧಾನಿಗೆ ಆಹ್ವಾನ

ಭಾರತೀಯ ಸಮುದಾಯದೊಂದಿಗೆ ಬಸವೇಶ್ವರ ದೇವರನ್ನು ಗೌರವಿಸಲು ಯುಕೆ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರಿಗೆ ಆಹ್ವಾನ ನೀಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ 12ನೇ ಶತಮಾನದ ಪೂಜ್ಯ ಕವಿ-ಸಂತ ಭಗವಾನ್ ಬಸವೇಶ್ವರರಿಗೆ ಗೌರವ ಸಲ್ಲಿಸಲು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಬ್ರಿಟಿಷ್ ಭಾರತೀಯ ಸಮುದಾಯದಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ.

ಬಸವಣ್ಣನಿಗೆ ಗೌರವ ನಮನ ಸಲ್ಲಿಸಲು ಬ್ರಿಟಿಷ್ ಪ್ರಧಾನಿಗೆ ಆಹ್ವಾನ
ಬಸವಣ್ಣ
ಸುಷ್ಮಾ ಚಕ್ರೆ
|

Updated on: Sep 26, 2024 | 7:26 PM

Share

ನವದೆಹಲಿ: 12ನೇ ಶತಮಾನದ ಕವಿ-ಸಂತ ಬಸವಣ್ಣನನ್ನು ಗೌರವಿಸಲು ಬ್ರಿಟಿಷ್ ಭಾರತೀಯ ಸಮುದಾಯದಿಂದ ಯುಕೆ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರನ್ನು ಆಹ್ವಾನಿಸಲಾಗಿದೆ. ಬ್ರಿಟಿಷ್ ಸಂಸತ್ತಿನ ಬಳಿ ಬಸವಣ್ಣನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಪರವಾಗಿ ಡಾ. ನೀರಜ್ ಪಾಟೀಲ್ ಅವರು ನೀಡಿದ ಆಮಂತ್ರಣವು ಬಸವೇಶ್ವರರ ಸಾಮಾಜಿಕ ನ್ಯಾಯದ ಕೊಡುಗೆಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ.

ಲಂಡನ್ ಬ್ಯೂರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಬ್ರಿಟಿಷ್ ಭಾರತೀಯ ಸಮುದಾಯ ಮತ್ತು ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪರವಾಗಿ ಇತ್ತೀಚೆಗೆ ಆಹ್ವಾನವನ್ನು ನೀಡಿದರು. ಬ್ರಿಟಿಷ್ ಸಂಸತ್ತಿನ ಎದುರು ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸಲು ಅನುಕೂಲ ಮಾಡಿದ ಪ್ರತಿಷ್ಠಾನವು ಅವರ ಮೌಲ್ಯಗಳು ಮತ್ತು ಪರಂಪರೆಯನ್ನು ಸ್ಮರಿಸುವ ಗುರಿಯನ್ನು ಇದು ಹೊಂದಿದೆ.

ಇದನ್ನೂ ಓದಿ: ಮೋದಿ ದೇವರಲ್ಲ; ರಾಜೀನಾಮೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಮೊದಲ ವಿಧಾನಸಭಾ ಭಾಷಣ

ಯುಕೆಯಲ್ಲಿರುವ ಭಾರತೀಯ ಸಮುದಾಯಕ್ಕೆ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ಈ ಬಸವಣ್ಣನ ಪ್ರತಿಮೆಯು 2013ರಲ್ಲಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಪರಿಕಲ್ಪನಾ ಅನುಮೋದನೆಯನ್ನು ಪಡೆದ ಮೊದಲನೆಯ ಪ್ರತಿಮೆಯಾಗಿದೆ. ಇದನ್ನು 2015ರಲ್ಲಿ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಬಸವಣ್ಣನ ಬೋಧನೆಗಳು ಮತ್ತು ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲ ಕಾರ್ಯ ನಿರ್ವಹಿಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ