ಯುಕೆಯ ಎಸ್ಸೆಕ್ಸ್ ನಲ್ಲಿ ಗರ್ಭಿಣಿಯಾಗಿದ್ದ ಕಾರಣಕ್ಕೆ ಕೆಲಸ ಕಳೆದುಕೊಂಡ ಮಹಿಳೆಗೆ ರೂ. 15 ಲಕ್ಷ ಪರಿಹಾರ ಧನ ಸಿಕ್ಕಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 30, 2022 | 3:32 PM

ಸಿಐಎಸ್ ಸರ್ವಿಸಸ್ ಸಂಸ್ಥೆಯಲ್ಲಿ ಲೀಚ್ ಮೇ 2021 ರಲ್ಲಿ ಆಡಳಿತಾತ್ಮಕ ಸಹಾಯಕಳಾಗಿ ಕೆಲಸಕ್ಕೆ ಸೇರಿದಳು. ಆಕೆಯ ವಾರ್ಷಿಕ ಸಂಬಳ 20,000 ಪೌಂಡ್ಸ್ (ಸುಮಾರು ರೂ. 20 ಲಕ್ಷ) ಆಗಿತ್ತು.

ಯುಕೆಯ ಎಸ್ಸೆಕ್ಸ್ ನಲ್ಲಿ ಗರ್ಭಿಣಿಯಾಗಿದ್ದ ಕಾರಣಕ್ಕೆ ಕೆಲಸ ಕಳೆದುಕೊಂಡ ಮಹಿಳೆಗೆ ರೂ. 15 ಲಕ್ಷ ಪರಿಹಾರ ಧನ ಸಿಕ್ಕಿದೆ!
ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್
Follow us on

ತಾನು ಗರ್ಭಿಣಿ ಅಂತ ಮೇಲಾಧಿಕಾರಿಗಳಿಗೆ ತಿಳಿಸಿದ ಕೂಡಲೇ ಕೆಲಸದಿಂದ ವಜಾಗೊಂಡಿದ್ದ ಸಂಸ್ಥೆಯೊಂದರ ಆಡಳಿತಾತ್ಮಕ ವಿಭಾಗದ (administrative department) ಉದ್ಯೋಗಿಯೊಬ್ಬಳು ಪರಿಹಾರದ ರೂಪದಲ್ಲಿ (compensation) ಭಾರತೀಯ ಕರೆನ್ಸಿ ಪ್ರಕಾರ ಸುಮಾರು ರೂ. 15 ಲಕ್ಷ ಪರಿಹಾರ ಧನವನ್ನು ಗಿಟ್ಟಿಸಿದ್ದಾಳೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಯುಕೆಯ ಎಸ್ಸೆಕ್ಸ್ ನಲ್ಲಿ ನೆಲೆಗೊಂಡಿರುವ ಸೆಕ್ಯುರಿಟಿ ಸಿಸ್ಟಮ್ ಸಪ್ಲೈಯರ್ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 34-ವರ್ಷ-ವಯಸ್ಸಿನ ಶಾರ್ಲೆಟ್ ಲೀಚ್ (Charlette Leitch) ಖುದ್ದು ತಾಯಿಯಾಗಿರುವ ತನ್ನ ಮ್ಯಾನೇಜರ್ ಗೆ ತಾನು ಗರ್ಭಿಣಿಯಾಗಿರುವ ವಿಷಯ ಹೇಳಿದ ಸ್ವಲ್ಪ ಸಮಯದ ನಂತರ ಕೆಲಸ ಕಳೆದುಕೊಂಡಿದ್ದಳು. ಕೆಲಸದಿಂದ ತೆಗೆದುಹಾಕಿದ ನಂತರ ಅವಮಾನಕ್ಕೀಡಾಗಿ ತಾನೊಬ್ಬ ನಿಷ್ಪ್ರಯೋಜಕಳು ಎಂಬ ಕೀಳರಿಮೆ ಕಾಡತೊಡಗಿತ್ತು ಎಂದು ಲೀಚ್ ದಿ ನ್ಯೂಸ್ ಔಟ್ಲೆಟ್ ಹೆಸರಿನ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಇದನ್ನೂ ಓದಿ:  ಗಡಿ ವಿವಾದ: ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತ ಕಾಯಲು ವಿಫಲವಾಗಿವೆ, ಹಾಗಾಗಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ -ಮಾಜಿ ಪ್ರಧಾನಿ ದೇವೇಗೌಡ

ದಿ ಮಿರರ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಲೀಚ್ ತನ್ನ ಮ್ಯಾನೇಜರ್ ಗೆ, ಇದಕ್ಕೂ ಮೊದಲು ತನಗೆ ಹಲವಾರು ಬಾರಿ ಗರ್ಭಪಾತವಾಗಿರುವುದರಿಂದ ಹುಟ್ಟಲಿರುವ ಮಗುವಿನ ಬಗ್ಗೆ ಹೆಚ್ಚು ಚಿಂತಿತಳಾಗಿದ್ದೇನೆ, ಮತ್ತು ಮಗುವಿನ ಯೋಗಕ್ಷೇಮದ ಬಗ್ಗೆ ಅತೀವ ಆತಂಕಗೊಂಡಿರುವುದಾಗಿ ಹೇಳಿದ್ದಳು. ಕಚೇರಿ ಮತ್ತು ಹಿರಿಯ ಸಹೋದ್ಯೋಗಿಗಳಿಂದ ಅವಳಿಗೆ ಸಹಾನುಭೂತಿ ಸಿಗುವ ಬದಲು ಕೆಲಸದಿಂದ ವಜಾ ಮಾಡಿದ ಪತ್ರ ಸಿಕ್ಕಿತು!

ಲೀಚ್ ಒಬ್ಬ ಹೊಸ ಉದ್ಯೋಗಿಯಾಗಿದ್ದಳು ಮತ್ತು ಆಕೆ ಕಂಟ್ರ್ಯಾಕ್ಟ್ ಪೇಪರ್ ಮೇಲೆ ಸಹಿ ಕೂಡ ಮಾಡಿರಲಿಲ್ಲ, ‘ಅಕೆಯನ್ನು ಕೆಲಸದಲ್ಲಿ ಮುಂದುವರಿಸುವ ಯಾವುದೇ ಬದ್ಧತೆ ಮತ್ತು ನಮಗಿರಲಿಲ್ಲ,’ ಎಂದು ಅಕೆಯ ಬಾಸ್ ಮಾಧ್ಯಮಕ್ಕೆ ತಿಳಿಸಿದ್ದಳು. ಆದರೆ ದುರದೃಷ್ಟವಶಾತ್ ಕೆಲಸ ಕಳೆದುಕೊಂಡ ಕೆಲವೇ ವಾರಗಳ ಬಳಿಕ ಲೀಚ್ ಪುನಃ ಗರ್ಭಪಾತವಾಗಿ ಮಗುವನ್ನು ಕಳೆದುಕೊಂಡಳು,’ ಎಂದು ಮಿರರ್ ವರದಿ ಮಾಡಿದೆ.

ಇದನ್ನೂ ಓದಿ:  Rahul Dravid: ಬೇಡವಾದ್ರಾ ರಾಹುಲ್ ದ್ರಾವಿಡ್? ವಿದೇಶಿ ಕೋಚ್ ಹುಡುಕಾಟ ಆರಂಭಿಸಿದ ಬಿಸಿಸಿಐ..!

ಸಿಐಎಸ್ ಸರ್ವಿಸಸ್ ಸಂಸ್ಥೆಯಲ್ಲಿ ಲೀಚ್ ಮೇ 2021 ರಲ್ಲಿ ಆಡಳಿತಾತ್ಮಕ ಸಹಾಯಕಳಾಗಿ ಕೆಲಸಕ್ಕೆ ಸೇರಿದಳು. ಆಕೆಯ ವಾರ್ಷಿಕ ಸಂಬಳ 20,000 (ಸುಮಾರು ರೂ. 20 ಲಕ್ಷ) ಪೌಂಡ್ಸ್ ಆಗಿತ್ತು.

ಗರ್ಭಿಣಿಯಾಗಿದ್ದ ಕಾರಣಕ್ಕೆ ಲೀಚ್ ಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಅಂಶವನ್ನು ಕಂಡುಕೊಂಡ ಎಸ್ಸೆಕ್ಸ್ ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್ 14,885 ಪೌಂಡ್ ಗಳ (ರೂ.14,86,856) ಪರಿಹಾರ ಧನ ನೀಡಿದೆ.

ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್ ನಿಂದ ಹಣ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಲೀಚ್, ‘ನಾನು ತೀವ್ರ ಸ್ವರೂಪದ ವೇದನೆಗೊಳಗಾಗಿದ್ದೆ. ಕೆಲಸದಿಂದ ತೆಗೆದುಹಾಕಿದ್ದು ನನ್ನ ಬದುಕಿನ ಮೇಲೆ ಘಾತಕ ಪರಿಣಾಮ ಬೀರಿತ್ತು, ನನಗೆ ಬೇರೆ ಕೆಲಸವೂ ಸಿಗಲಿಲ್ಲ. ಭವಿಷ್ಯದ ಬಗ್ಗೆ ನಾನು ನಿರಂತರವಾಗಿ ಆತಂಕದಲ್ಲಿದ್ದೆ,’ ಎಂದು ಹೇಳಿದ್ದಾಳೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 30 December 22