Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಲಿಪೋರ್ನಿಯಾದಿಂದ 14-ತಿಂಗಳು ಹಿಂದೆ ನಾಪತ್ತೆಯಾಗಿದ್ದ ಜರ್ಮನ್ ಶೆಪ್ಹರ್ಡ್ ನಾಯಿ 1,600 ಮೈಲಿ ದೂರದ ಕಾನ್ಸಾಸ್ ನಲ್ಲಿ ಪತ್ತೆಯಾಯಿತು!

ಆ ಮಹಿಳೆಯ ವಿಳಾಸವನ್ನು ಪಡೆದುಕೊಂಡು ಸ್ಯಾಂಡ್ರಾ ಅವರ ಕುಟುಂಬ ಜೆಪ್ಪೆಲಿನ್ ನನ್ನು ಮನೆಗೆ ಕರೆತರಲು ಕಾರಲ್ಲೇ ಹೊರಟರು. ಅವರೆಲ್ಲ ಕಾರಲ್ಲಿ ಹೋಗುವುದಕ್ಕೆ ಕಾರಣವೂ ಇದೆ. ಜೆಪ್ಪೆಲಿನ್ ಗೆ ಕಾರು ಪ್ರಯಾಣವೆಂದರೆ ಬಹಳ ಇಷ್ಟ!

ಕ್ಯಾಲಿಪೋರ್ನಿಯಾದಿಂದ 14-ತಿಂಗಳು ಹಿಂದೆ ನಾಪತ್ತೆಯಾಗಿದ್ದ ಜರ್ಮನ್ ಶೆಪ್ಹರ್ಡ್ ನಾಯಿ 1,600 ಮೈಲಿ ದೂರದ ಕಾನ್ಸಾಸ್ ನಲ್ಲಿ ಪತ್ತೆಯಾಯಿತು!
ತನ್ನ ಮಾಲೀಕರ ಕಾರಲ್ಲಿ ಮನೆಗೆ ವಾಪಸ್ಸು ಹೋಗುತ್ತಿರುವ ಜೆಪ್ಪೆಲಿನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2022 | 7:45 AM

ಜರ್ಮನ್ ಶೆಪ್ಹರ್ಡ್ (German Shepherd) ತಳಿಯ ನಾಯಿ ನಾಪತ್ತೆಯಾಗಿ ಒಂದು ವರ್ಷದ ನಂತರ ಸುಮಾರು 1,600 ಮೈಲಿದೂರ ಪತ್ತೆಯಾಗಿದ್ದು ಕ್ರಿಸ್ಮಸ್ (Christmas) ಹಬ್ಬದ ಸಮಯಕ್ಕೆ ಸರಿಯಾಗಿ ತನ್ನ ಮಾಲೀಕರನ್ನು ಜೊತೆಗೂಡಿದೆ! ಜೆಪ್ಪೆಲಿನ್ (Zeppelin) ಹೆಸರಿನ ಮೂರು-ವರ್ಷ-ಪ್ರಾಯದ ಜರ್ಮನ್ ಶೆಪ್ಹರ್ಡ್ ಗಂಡು ನಾಯಿ ಅಕ್ಟೋಬರ್ 2021ರಲ್ಲಿ ಅಮೆರಿಕದ ಕ್ಯಾಲೊಫೋರ್ನಿಯಾದಲ್ಲಿರುವ ವೆಸ್ಟ್ ಸ್ಯಾಕ್ರಮೆಂಟೊದಲ್ಲಿರುವ ತನ್ನ ಮನೆಯಿಂದ ಕಣ್ಮರೆಯಾಗಿತ್ತು. ಅದನ್ನು ಸಾಕಿರುವ ಸ್ಯಾಂಡ್ರಾ ಓ ನೀಲ್ ನಾಯಿ ನಾಪತ್ತೆಯಾದ ದಿನದಿಂದ ಖಿನ್ನರಾಗಿಬಿಟ್ಟಿದ್ದರು. ಅತ್ಯಂತ ಸ್ನೇಹಮಯಿಯಾಗಿದ್ದ ತನ್ನ ನಾಯಿಗೆ ಅವರು ತನ್ನ ನೆಚ್ಚಿನ ಬ್ರ್ಯಾಂಡ್ ಆಗಿರುವ ಲೆಡ್ ಜೆಪ್ಪೆಲಿನ್ ಹೆಸರನ್ನೇ ಅದಕ್ಕಿಟ್ಟಿದ್ದರು. ಅವರೇ ಹೇಳುವ ಪ್ರಕಾರ ನೆರೆಹೊರೆಯಲ್ಲಿ ವಾಸವಾಗಿದ್ದ ಗಾರೆ ಕೆಲಸಗಾರರಿಗೆ ಹಲೋ ಎನ್ನಲು ಹೋಗಿದ್ದ ಜೆಪ್ಪೆಲಿನ್ ನಾಪತ್ತೆಯಾಗಿಬಿಟ್ಟಿತ್ತು.

ಮಾಧ್ಯಮವೊಂದರ ಜೊತೆ ಮಾತಾಡಿದ್ದ ಸ್ಯಾಂಡ್ರಾ, ಕೆಲಗಾರರ ಪೈಕಿ ಒಬ್ಬರು ನಾಯಿಯನ್ನು ತನ್ನ ಮನೆಗೆ ಕರೆದೊಯ್ದಿರಬಹುದೆಂದು ತಾನು ಭಾವಿಸಿದ್ದೆ ಎಂದು ಹೇಳಿದ್ದರು. ‘ಅವನು (ಅವರ ನಾಯಿ) ನಿರ್ಭಿಡೆ ಮತ್ತು ಬಹಳ ವಾತ್ಸಲ್ಯಮಯಿ ಸ್ವಭಾವದವನು. ಪ್ರತಿದಿನ ಅವರಲ್ಲಿಗ ಹೋಗುತ್ತಿದ್ದ ಮತ್ತು ಅವರೊಂದಿಗೆ ಸಾಕಷ್ಟು ಸಮಯ ಕಳೆದ ಬಳಿಕ ತಾನಾಗೇ ಮನೆಗೆ ಬರುತ್ತಿದ್ದ ಇಲ್ಲವೇ ನಾನೇ ಹೋಗಿ ಅವನನ್ನು ಕರೆತರುತ್ತಿದ್ದೆ,’ ಎಂದು ಅವರು ಹೇಳಿದ್ದರು. ‘ಹೀಗೆ ಹೇಳಲು ನನ್ನಲ್ಲಿ ಯಾವುದೇ ಪುರಾವೆ ಇಲ್ಲ. ಅದರೆ ಯಾರೋ ಒಬ್ಬರಿಗೆ ಅ ಜೆಪ್ಪೆಲಿನ್ ಮೇಲೆ ಪ್ರೀತಿ ಉಕ್ಕಿ ಅದನ್ನು ತಮ್ಮ ಮನೆಗೆ ಕರೆದೊಯ್ಯುತ್ತಿರುತ್ತಾರೆ,’ ಎಂದು ಸಾಂಡ್ರಾ ಹೇಳಿದ್ದರು.

ಇದನ್ನೂ ಓದಿ:   Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ಹುಡುಕದ ಜಾಗವಿಲ್ಲ!

ಅವರ ಕುಟುಂಬದ ಸದಸ್ಯರು ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಿದರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನಾಯಿ ಕಳೆದುಹೋದ ಬಗ್ಗೆ ಜಾಗೃತಿ ಮೂಡಿಸಿದರು. ಆದರೆ 14-ತಿಂಗಳು ಕಾಲ ಜೆಪ್ಪೆಲಿನ್ ನನ್ನು ಹುಡುಕುವ ಪ್ರಯತ್ನಗಳು ವಿಫಲವಾಗಿದ್ದವು. ಆಗಬಾರದ್ದೇನೋ ಅವನಿಗೆ ಸಂಭವಿಸಿದೆ ಎಂಬ ಆತಂಕ ಮತ್ತು ಭೀತಿ ಅವರಲ್ಲಿ ಮನೆಮಾಡತೊಡಗಿತ್ತು.

ಆದರೆ, ಕಾನಾಸ್ ಲೂಯಿಸ್ ಬರ್ಗ್ ನಿಂದ ಬಂದ ಒಬ್ಬ ಅನಾಮಧೇಯ ಮಹಿಳೆಯ ಕರೆ ಸ್ಯಾಂಡ್ರಾ ಕುಟುಂಬವನ್ನು ಪುನಶ್ಚೇತನಗೊಳಿಸಿತು. ಕರೆ ಮಾಡಿದ ಮಹಿಳೆ ಜೆಪ್ಪೆಲಿನ್ ಬಗ್ಗೆ ಮಾತಾಡಿದಾಗ ಅವನಿನ್ನೂ ಬದುಕಿದ್ದಾನೆ ಅನ್ನೋದು ಅವರಿಗೆ ಖಾತ್ರಿಯಾಗಿತ್ತು. ತನಗೆ ಜೆಪ್ಪೆಲಿನ್, ಗಾರ್ಡನ್ ಒಂದರಲ್ಲಿ ಸಿಕ್ಕ ಮತ್ತು ಅವನ ವಿಳಾಸ ಪತ್ತೆಮಾಡಲು ಅವನನ್ನು ಒಬ್ಬ ಪಶು ವೈದ್ಯರಲ್ಲಿ ಕರೆದುಕೊಂಡು ಹೋದಾಗ ಅವರು ಮೈಕ್ರೋಚಿಪ್ ಒಂದನ್ನು ಬಳಿಸಿ ವಿಳಾಸ ಪತ್ತೆ ಮಾಡುವ ಪ್ರಯತ್ನ ಮಾಡಿದರು. ಆ ಚಿಪ್ ಮೂಲಕವೇ ಜೆಪ್ಪಿಲಿನ್ ಸುಮಾರು 1,600 ಕಿಮೀ ದೂರದಲ್ಲಿರುವ ಕ್ಯಾಲಿಫೋರ್ನಿಯಾದಿಂದ ಒಂದು ವರ್ಷಕ್ಕಿಂತ ಜಾಸ್ತಿ ಸಮಯದಿಂದ ನಾಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂತು.

ಒಂದು ಕರೆ ಬಂತು !

ಮಹಿಳೆಯಿಂದ ಕರೆ ಬಂದಾಗ ತಾನು ದಿಗ್ಮೂಢಳಾದೆ ಎಂದು ಸ್ಯಾಂಡ್ರಾ ಹೇಳಿದ್ದಾರೆ. ‘ಅವರು ಹೇಳಿದ ವಿಷಯ ನಂಬಲಸದಳವಾಗಿತ್ತು. ನಾನು ಶಾಕ್ ಗೊಳಗಾಗಿದ್ದೆ,’ ಎಂದು ಸ್ಯಾಂಡ್ರಾ ಹೇಳಿದ್ದಾರೆ.

ಆ ಮಹಿಳೆಯ ವಿಳಾಸವನ್ನು ಪಡೆದುಕೊಂಡು ಸ್ಯಾಂಡ್ರಾ ಅವರ ಕುಟುಂಬ ಜೆಪ್ಪೆಲಿನ್ ನನ್ನು ಮನೆಗೆ ಕರೆತರಲು ಕಾರಲ್ಲೇ ಹೊರಟರು. ಅವರೆಲ್ಲ ಕಾರಲ್ಲಿ ಹೋಗುವುದಕ್ಕೆ ಕಾರಣವೂ ಇದೆ. ಜೆಪ್ಪೆಲಿನ್ ಗೆ ಕಾರು ಪ್ರಯಾಣವೆಂದರೆ ಬಹಳ ಇಷ್ಟ! ‘ಪ್ರಯಾಣದ ಪ್ರತಿಯೊಂದು ಕ್ಷಣವನ್ನು ಅವನು ಇಷ್ಟಪಡುತ್ತಾನೆ ಅಂತ ನನಗೆ ಗೊತ್ತಿದೆ. ಕಾರು ಪ್ರಯಾಣವೆಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ನಮ್ಮ ನಾಯಿಯನ್ನು ಶೋಧಿಸಿ ನಮ್ಮ ಮನೆಗೆ ತರುವಂತಾಗಲು ನೆರವಾದ ಎಲ್ಲ ಸ್ನೇಹಿತರಿಗೆ ನಾವು ಕೃತಜ್ಞತೆ ಉಳ್ಳವರಾಗಿದ್ದೇವೆ,’ ಸ್ಯಾಂಡ್ರಾ ಹೇಳಿದ್ದಾರೆ.

ಇದನ್ನೂ ಓದಿ:   ಸೆನ್ಸೇಷನಲ್ ಕ್ರೈಮ್ ಕತೆಗಳು: ಅಸಹಾಯಕ ಪುರುಷರನ್ನು ಬೇಟೆಯಾಡುತ್ತಿದ್ದ ಡೆನಿಸ್ ನಿಲ್ಸನ್, ಅವರನ್ನು ಕೊಂದು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ!

ತಮ್ಮ ನಾಯಿಯನ್ನು ಮನೆಗೆ ಕರೆತಂದ ಬಳಿಕ ಸ್ಯಾಂಡ್ರಾ ಅವರ ಕುಟುಂಬ ಒಂದು ಸುದ್ದಿಗೋಷ್ಟಿಯನ್ನು ಸಹ ಆಯೋಜಿಸಿದ್ದರು. ಜೆಪ್ಪೆಲಿನ್ ಕ್ಯಾಲಿಫೋರ್ನಿಯಾದಲ್ಲಿ ಈಗ ನಿಜಕ್ಕೂ ಒಬ್ಬ ಸೆಲಿಬ್ರಿಟಿಯಾಗಿದ್ದಾನೆ.

‘ಅವನನ್ನು ತುಂಬಾ ಮಿಸ್ ಮಾಡಿಡಕೊಳ್ಳುತ್ತಿದ್ದ್ದೆವು. 14-ತಿಂಗಳು ನಂತರ ಅವನನ್ನು ನೋಡಿದಾಗ ನಮ್ಮಲ್ಲಿ ಉಂಟಾದ ಭಾವನೆಯನ್ನು ಪದಗಳಲ್ಲಿ ಹೇಳಲಾಗದು. ಅವನು ಕೂಡ ನಾವಿನ್ನೂ ದೂರದಲ್ಲಿರುವಾಗಲೇ ನಮ್ಮ ಗುರುತು ಹಿಡಿದುಬಿಟ್ಟಿದ್ದ. ಅವನನ್ನು ಕಂಡ ಕೂಡಲೇ ನಮ್ಮೆಲ್ಲರ ಕಣ್ಣುಗಳಿಂದ ನೀರು ಹರಿಯಲಾರಂಭಿಸಿತ್ತು. ಇಂಥ ಸಂತೋಷವನ್ನು ನಾವ್ಯಾವತ್ತೂ ಅನುಭವಿಸಿರಲಿಲ್ಲ,’ ಎಂದು ಸ್ಯಾಂಡ್ರಾ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ