Four Human Skulls: ವಿಮಾನ ನಿಲ್ದಾಣದಲ್ಲಿ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ 4 ತಲೆಬುರುಡೆ ಪತ್ತೆ
ಮೆಕ್ಸಿಕೋದ ಕ್ವೆರೆಟಾರೊ ಇಂಟರ್ಕಾಂಟಿನೆಂಟಲ್ ಏರ್ಪೋರ್ಟ್ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ ತಲೆಬುರುಡೆಗಳು ಪತ್ತೆಯಾಗಿವೆ ಎಂದು ನ್ಯಾಷನಲ್ ಗಾರ್ಡ್ ಹೇಳಿಕೆ ನೀಡಿದೆ.
ಕೊರಿಯರ್(Courier) ಮೂಲಕ ಸಾಕಷ್ಟು ವಸ್ತುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ. ಆದರೆ ಇಲ್ಲೊಂದು ಕೊರಿಯರ್ ಮೂಲಕ ತಲೆಬುರುಡೆ(Skulls) ನ್ನು ಕಳುಹಿಸಿರುವ ಘಟನೆ ನಡೆದಿದೆ. ಇದು ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಧ್ಯ ಮೆಕ್ಸಿಕೋದ ಕ್ವೆರೆಟಾರೊ ಇಂಟರ್ಕಾಂಟಿನೆಂಟಲ್ ಏರ್ಪೋರ್ಟ್ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ ತಲೆಬುರುಡೆಗಳು ಪತ್ತೆಯಾಗಿವೆ ಎಂದು ನ್ಯಾಷನಲ್ ಗಾರ್ಡ್ ಹೇಳಿಕೆ ನೀಡಿದೆ. ಅಮೆರಿಕಾಕ್ಕೆ ಕೊರಿಯರ್ ಮೂಲಕ ಕಳುಹಿಸಬೇಕಿದ್ದ ಪ್ಯಾಕೆಜ್‌ನಲ್ಲಿ ನಾಲ್ಕು ಮಾನವ ತಲೆ ಬುರುಡೆಗಳು ಇರುವುದು ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೆಕ್ಸಿಕನ್ ದೇಶದ ಅತ್ಯಂತ ಹಿಂಸಾತ್ಮಕ ಭಾಗಗಳಲ್ಲಿ ಒಂದಾದ ಪಶ್ಚಿಮ ಕರಾವಳಿ ರಾಜ್ಯವಾದ ಮೈಕೋವಾಕನ್‌ನಿಂದ ಈ ಪ್ಯಾಕೇಜ್ ಬಂದಿದೆ ಮತ್ತು ದಕ್ಷಿಣ ಕೆರೊಲಿನಾದ ಮ್ಯಾನಿಂಗ್‌ಗೆ ಈ ಪ್ಯಾಕೆಜ್‌ನ್ನು ಕಳುಹಿಸುವ ಉದ್ದೇಶ ಇತ್ತು ಎಂಬ ಸುದ್ದಿ ಹರಿದಾಡುತ್ತಿದೆ. ನ್ಯಾಷನಲ್ ಗಾರ್ಡ್ ಮಾನವ ತಲೆಬುರುಡೆಗಳ ಅವಶೇಷಗಳನ್ನು ಕಳುಹಿಸಿದವರ ಮಯಸ್ಸು, ಅವರ ವೈಯಕ್ತಿಕ ವಿವರಗಳ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಅವಶೇಷಗಳ ವರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದಿಂದ ವಿಶೇಷ ಅನುಮತಿ ಅಗತ್ಯವಿದೆ ಎಂದು ನ್ಯಾಷನಲ್ ಗಾರ್ಡ್ ಹೇಳಿದೆ.
ಇದನ್ನೂ ಓದಿ: ಶಾಂಪೇನ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು?
ಮೆದುಳು ತಿನ್ನುವ ಅಮೀಬಾ ಎಂದೇ ಆತಂಕ ಸೃಷ್ಟಿಸಿರುವ ನೇಗ್ಲೇರಿಯಾ ಫೌಲೆರಿ ಸೋಂಕು ಎಂದರೇನು?
ಡಿಸೆಂಬರ್ 10 ರಂದು ಕೊರಿಯಾಕ್ಕೆ ಹಿಂದಿರುಗಿದ ವ್ಯಕ್ತಿಯೊರ್ವ ನೇಗ್ಲೇರಿಯಾ ಫೌಲೆರಿ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದ. ಈತ ನಾಲ್ಕು ತಿಂಗಳ ಕಾಲ ಥೈಲ್ಯಾಂಡ್‌ನಲ್ಲಿ ತಂಗಿದ್ದ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆಯ ಸಂಶೋಧನೆಯು ದೃಢಪಡಿಸಿದೆ. ಚೀನಾದಲ್ಲಿ ರೂಪಾಂತರಿ ಕೋವಿಡ್ -19(Covid-19) ಭೀತಿಯ ಮಧ್ಯೆ, ದಕ್ಷಿಣ ಕೊರಿಯಾ ತನ್ನ 50 ರ ಹರೆಯದ ವ್ಯಕ್ತಿಯನ್ನು ಕೊಂದ ನೇಗ್ಲೇರಿಯಾ ಫೌಲೆರಿ ಸೋಂಕಿನ ಮೊದಲ ಪ್ರಕರಣವನ್ನು ವರದಿ ಮಾಡಿದೆ. ವ್ಯಕ್ತಿಯ ಮೆದುಳನ್ನು ನಿಷ್ಕ್ರಿಯಗೊಳಿಸುವ ಈ ಸೋಂಕಿಗೆ ಮಾರಣಾಂತಿಕ ಚುಚ್ಚುಮದ್ದು ಕಾರಣವೆಂದು ಥೈಲ್ಯಾಂಡ್‌ನ ವರದಿಯೊಂದು ಬಹಿರಂಗಪಡಿಸಿದೆ. ಈ ಸೋಂಕನ್ನು ಮೆದುಳನ್ನು ತಿನ್ನುವ ಅಮೀಬಾ(Brain-eating Amoeba) ಎಂದು ಕರೆಯಾಗುತ್ತಿದೆ.
ವ್ಯಕ್ತಿಯ ಮೆದುಳನ್ನು ನಿಷ್ಕ್ರಿಯಗೊಳಿಸುವ ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದರೇನು?
ನೇಗ್ಲೇರಿಯಾ ಏಕಕೋಶೀಯ ಜೀವಿಯಾಗಿದ್ದು, ಸೂಕ್ಷ್ಮದರ್ಶಕವಾಗಿದೆ. ಸರೋವರಗಳು, ನದಿಗಳು ಮತ್ತು ಮಣ್ಣು ಸೇರಿದಂತೆ ಸಿಹಿನೀರಿನಲ್ಲಿ ಕಂಡುಬರುತ್ತದೆ. ಆದರೆ, ಎಲ್ಲಾ ಜಾತಿಯ ಅಮೀಬಾಗಳಿಂದ ಈ ಮಾರಣಾಂತಿಕ ರೋಗ ಹರಡಲ್ಲ. ಸಾಮಾನ್ಯವಾಗಿ ನೀರಿನಲ್ಲಿ ಈಜುವ ಆಸಕ್ತಿ ನಿಮಗಿದ್ದರೆ ಆದಷ್ಟು ಎಚ್ಚರ ವಹಿಸಿ. ಯಾಕೆಂದರೆ ಸರೋವರಗಳು ಮತ್ತು ನದಿಗಳಲ್ಲಿ ಈಜುವಾಗ ಅಮೀಬಾವನ್ನು ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಸಾಮಾನ್ಯವಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ ಅಮೀಬಾ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:47 pm, Sat, 31 December 22