Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Murder ಮೆಹ್ರೌಲಿ ಅರಣ್ಯದಿಂದ ಶ್ರದ್ಧಾಳ ತಲೆಬುರುಡೆಯ ಭಾಗ, ಎಲುಬು ಪತ್ತೆ; ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ ಪೊಲೀಸ್

ಪೊಲೀಸರು ಅಫ್ತಾಬ್‌ನ ಚತ್ತರ್‌ಪುರದ ಫ್ಲಾಟ್‌ನಿಂದ ಶ್ರದ್ಧಾಳ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದು ಆಕೆ ಕೆಲವು ಬಟ್ಟೆಗಳು ಮತ್ತು ಶೂಗಳು ಪತ್ತೆಯಾಗಿವೆ. 

Delhi Murder ಮೆಹ್ರೌಲಿ ಅರಣ್ಯದಿಂದ ಶ್ರದ್ಧಾಳ ತಲೆಬುರುಡೆಯ ಭಾಗ, ಎಲುಬು ಪತ್ತೆ; ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ ಪೊಲೀಸ್
ಅಫ್ತಾಬ್- ಶ್ರದ್ಧಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 20, 2022 | 6:16 PM

ದೆಹಲಿ: 27ರ ಹರೆಯದ ಶ್ರದ್ಧಾ ವಾಕರ್‌ಳನ್ನು(Shraddha Walkar )ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ ಅಮೀನ್‌ ಪೂನಾವಾಲಾ (Aftab Ameen Poonawala) ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೆಹ್ರೌಲಿ (Mehrauli) ಅರಣ್ಯದಿಂದ ಹೆಚ್ಚಿನ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.ತಲೆಬುರುಡೆಯ ಬುಡ, ಶಿರಚ್ಛೇದಿತ ದವಡೆ ಮತ್ತು ಹೆಚ್ಚಿನ ಮೂಳೆಗಳು ಇಂದು(ಭಾನುವಾರ) ಪತ್ತೆಯಾಗಿವೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಗಳೊಂದಿಗೆ ಹೊಂದಾಣಿಕೆ ಮಾಡಲು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು.ಶ್ರದ್ಧಾಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಮುಚ್ಚಿಟ್ಟಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಶ್ರದ್ಧಾಳನ್ನು ಕೊಲೆ ಮಾಡಿದ ನಂತರ ಮನೆಯಲ್ಲಿ ಸಿಕ್ಕಿದ್ದ ಮೂರು ಚಿತ್ರಗಳನ್ನು ನಾಶಪಡಿಸಿದ್ದಾನೆ. ಪೊಲೀಸರು ಅಫ್ತಾಬ್‌ನ ಚತ್ತರ್‌ಪುರದ ಫ್ಲಾಟ್‌ನಿಂದ ಶ್ರದ್ಧಾಳ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದು ಆಕೆ ಕೆಲವು ಬಟ್ಟೆಗಳು ಮತ್ತು ಶೂಗಳು ಪತ್ತೆಯಾಗಿವೆ.  ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ದೆಹಲಿ ಪೊಲೀಸರ ಕೋರಿಕೆಯನ್ನು ಕೈಗೆತ್ತಿಕೊಂಡ ನಂತರ ಅಫ್ತಾಬ್‌ನ ನಾರ್ಕೋಅನಾಲಿಸಿಸ್ ಪರೀಕ್ಷೆಯನ್ನು ನಡೆಸಲಾಗುವುದು. ಪೊಲೀಸರು ಆರಂಭದಲ್ಲಿ 8 ರಿಂದ 10 ಮೂಳೆಗಳನ್ನು ವಶಪಡಿಸಿಕೊಂಡರು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಎರಡನೇ ಪ್ರಮುಖ ಸ್ಥಳವೆಂದರೆ ಅಫ್ತಾಬ್ ಪೂನಾವಾಲಾನ ಚತ್ತರ್‌ಪುರ ಫ್ಲ್ಯಾಟ್. ಅಲ್ಲಿ ಈ ದಂಪತಿ ಮೊದಲು ವಾಸಿಸುತ್ತಿದ್ದರು.

ಈ ತನಿಖೆಯ ಮೂರನೇ ಪ್ರಮುಖ ಸ್ಥಳವೆಂದರೆ ಗುರುಗ್ರಾಮ್, ಅಫ್ತಾಬ್ ಕೊನೆಯದಾಗಿ ಕೆಲಸ ಮಾಡುತ್ತಿದ್ದ ಕಾಲ್ ಸೆಂಟರ್ ಹತ್ತಿರದ ಪ್ರದೇಶ. ಕಳೆದ ಮೂರು ದಿನಗಳಿಂದ ಪೊಲೀಸರು ಪ್ರತಿದಿನ ಅರಣ್ಯವನ್ನು ಶೋಧಿಸುತ್ತಿದ್ದಾರೆ. ಇಂದು, ಅವರು ಎರಡು ದೊಡ್ಡ ಕಪ್ಪು ಪ್ಲಾಸ್ಟಿಕ್ ಚೀಲಗಳೊಂದಿಗೆ ಅಫ್ತಾಬ್‌ನ ಫ್ಲಾಟ್‌ನಿಂದ ಹೊರಟಿದ್ದರು. ಅಫ್ತಾಬ್‌ನ ಕಸ್ಟಡಿ ಅವಧಿ ಬುಧವಾರ ಅಂತ್ಯಗೊಳ್ಳುವುದರಿಂದ ಮುಂದಿನ ಕೆಲವು ದಿನಗಳು ತನಿಖೆಗೆ ನಿರ್ಣಾಯಕವಾಗಿವೆ. ಪ್ರಕರಣದ ಪ್ರಮುಖ ಸಾಕ್ಷ್ಯಗಳು ಇನ್ನೂ ಪತ್ತೆಯಾಗಿಲ್ಲ.

ಪೊಲೀಸರು ನಿನ್ನೆ ಅಫ್ತಾಬ್‌ನ ಫ್ಲಾಟ್‌ನಿಂದ  ಚೂಪಾದ ಕತ್ತರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಶ್ರದ್ಧಾ ವಾಕರ್ ದೇಹವನ್ನು ಕತ್ತರಿಸಲು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಿಂದಿನ ದಿನ ಅಫ್ತಾಬ್‌ನ ಗುರುಗ್ರಾಮ್ ಕೆಲಸದ ಸ್ಥಳದಲ್ಲಿ ಅವರು ಭಾರೀ ಕಪ್ಪು ಪಾಲಿಥಿನ್ ಚೀಲವನ್ನು ಕಂಡುಕೊಂಡರು.

ಆರು ತಿಂಗಳ ಹಿಂದಿನ ಕೊಲೆಯ ತನಿಖೆಗಳು ಫೋರೆನ್ಸಿಕ್ ವರದಿಗಳು, ಕಾಲ್ ಡೇಟಾ ಮತ್ತು ಸಾಕ್ಷಿಗಳಿಲ್ಲದ ಕಾರಣ ಸಾಂದರ್ಭಿಕ ಪುರಾವೆಗಳನ್ನು ಆಧರಿಸಿವೆ ಎಂದು ಮೂಲಗಳು ಹೇಳಿವೆ.

ಶ್ರದ್ಧಾ ಮತ್ತು ಅಫ್ತಾಬ್ ಮೇ ತಿಂಗಳಲ್ಲಿ ದೆಹಲಿಗೆ ತೆರಳಿದ್ದರು. ನಾಲ್ಕು ದಿನಗಳ ನಂತರ, ಖರ್ಚು ಮತ್ತು ನಂಬುಗೆ ದ್ರೋಹದ ಬಗ್ಗೆ ಜಗಳ ನಡೆದಿದ್ದು ಈ ವೇಳೆ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ಅವನು ಶವವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿ 18 ದಿನಗಳ ಕಾಲ ಕಾಡಿನಲ್ಲಿ ಬಿಸಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್