New Year 2023 Resolutions: ಕಿಡ್ನಿಯನ್ನು ಆರೋಗ್ಯಕರವಾಗಿಡಲು ಈ ಫಿಟ್‌ನೆಸ್ ರೆಸಲ್ಯೂಷನ್ ಪಾಲಿಸಿ
ಹೊಸ ವರ್ಷದ ರೆಸಲ್ಯೂಶನ್ ಮಾಡುವುದು ಜನರು ಪ್ರತಿ ವರ್ಷ ಮಾಡುವ ಒಂದು ಕೆಲಸ ಆದರೆ ಹೆಚ್ಚಿನ ಜನರು ಅವರು ತೆಗೆದುಕೊಳ್ಳುವ ಹಾಗೂ ಅವರು ಪ್ರತಿವರ್ಷ ಇಷ್ಟ ಪಡುವ ರೆಸಲ್ಯೂಶನ್‌ಗಳನ್ನು ಹೆಚ್ಚಾಗಿ ಪಾಲಿಸುವುದಿಲ್ಲ.
ಮೂತ್ರಪಿಂಡ(Kidneys) ವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಧೀರ್ಘಕಾಲದ ಕಿಡ್ನಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಹೊಸ ವರ್ಷ 2023ರಲ್ಲಿ, ಈ ಫಿಟ್‌ನೆಸ್ ರೆಸಲ್ಯೂಷನ್‌ಗಳೊಂದಿಗೆ ನಿಮ್ಮ ಕಿಡ್ನಿಗಳನ್ನು ಉನ್ನತ ಆಕಾರದಲ್ಲಿ ಇರಿಸಲು ಪ್ರತಿಜ್ಞೆ ಮಾಡಿ ಮತ್ತು ನಿಮ್ಮ ಆರೋಗ್ಯವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳಿ. ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಫಿಲ್ಟರ್ ಮಾಡುವಲ್ಲಿ ಕಿಡ್ನಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ವಿಫಲವಾದರೆ ಧೀರ್ಘಕಾಲದ ಕಿಡ್ನಿಯ ಕಾಯಿಲೆಯಿಂದ ಬಳಲುತ್ತಿರುವ ದೇಹದಲ್ಲಿ ಉಪ್ಪು, ನೀರು ಮತ್ತು ರಾಸಾಯನಿಕಗಳ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ದೇಹದ ಇತರ ರಾಸಾಯನಿಕಗಳನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ಕಿಡ್ನಿ ಉನ್ನತ ಆಕಾರದಲ್ಲಿ ಇರಿಸಿಕೊಳ್ಳಲು ಈ 2023ರಲ್ಲಿ ಹೊಸ ವರ್ಷದ ರೆಸಲ್ಯೂಷನ್‌ಗಳನ್ನು ಮಾಡಿಕೊಳ್ಳಿ.
ಹೊಸ ವರ್ಷದ ರೆಸಲ್ಯೂಶನ್ ಮಾಡುವುದು ಜನರು ಪ್ರತಿ ವರ್ಷ ಮಾಡುವ ಒಂದು ಕೆಲಸ ಆದರೆ ಹೆಚ್ಚಿನ ಜನರು ಅವರು ತೆಗೆದುಕೊಳ್ಳುವ ಹಾಗೂ ಅವರು ಪ್ರತಿವರ್ಷ ಇಷ್ಟ ಪಡುವ ರೆಸಲ್ಯೂಶನ್‌ಗಳನ್ನು ಹೆಚ್ಚಾಗಿ ಪಾಲಿಸುವುದಿಲ್ಲ. ಈ ವರ್ಷವೂ ಹೆಚ್ಚಿನ ಜನರು ಅದನ್ನು ಪೂರೈಸುತ್ತಾರೆಯೇ ಅಥವಾ ಇಲ್ಲವೇ ಎಂಬುವುದನ್ನು ಲೆಕ್ಕಿಸದೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಕಿಡ್ನಿ ಅತ್ಯುತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಬಯಸುವವರಲ್ಲಿ ನೀವು ಒಬ್ಬರಾಗಿದ್ದರೆ, ನೀವು ತೆಗೆದುಕೊಂಡ ಫಿಟ್‌ನೆಸ್ ರೆಸಲ್ಯೂಶನ್‌ಗಳ ಮೂಲಕ ಪ್ರತಿಜ್ಞೆ ಮಾಡಿ.
ಕಿಡ್ನಿಗಳು ತ್ಯಾಜ್ಯ ಉತ್ಪನ್ನಗಳು, ಹೆಚ್ಚುವರಿ ನೀರು ಮತ್ತು ಇತರ ಕಲ್ಮಶಗಳನ್ನು ಮೂತ್ರದ ಮೂಲಕ ರಕ್ತದಿಂದ ಶೋಧಿಸುತ್ತವೆ ಎಂಬುದು ತಿಳಿದಿರುವ ಸತ್ಯ. ಅಷ್ಟೇ ಅಲ್ಲದೆ ಕಿಡ್ನಿ ದೇಹದಲ್ಲಿನ ಪಿ.ಹೆಚ್, ಉಪ್ಪು ಮತ್ತು ಪೊಟ್ಯಾಸಿಯಂ ಮಟ್ಟವನ್ನು ನಿಯಂತ್ರಿಸಲು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸ್ನಾಯುವಿನ ಕಾರ್ಯವನ್ನು ನಿಯಂತ್ರಿಸಲು ವಿಟಮಿನ್ ಡಿಯನ್ನು ಸಕ್ರಿಯಗೊಳಿಸಲು ಸಹಾ ಸಹಾಯ ಮಾಡುತ್ತದೆ. ಆದರೆ ಮೂತ್ರಪಿಂಡದ ಕಾಯಿಲೆಯ ಬಗ್ಗೆ ಇನ್ನೂ ಅರಿವಿನ ಕೊರತೆಯಿದೆ ಮತ್ತು ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಡಯಾಲಿಸಿಸ್ ಅಗತ್ಯವಿದೆ. ಇದಲ್ಲದೆ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆ ಇರುವವರಿಗೆ ಮೂತ್ರಪಿಂಡದ ಕಸಿ ಅಗತ್ಯವಿರುತ್ತದೆ. ಆದ್ದರಿಂದ ನಿಮ್ಮ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಲು ಪ್ರಯತ್ನಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುವ ಆಯುರ್ವೇದದ ಸಲಹೆಗಳು ಇಲ್ಲಿವೆ
ವೋಕ್‌ಹಾರ್ಡ್ ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಹಾಗೂ ಟ್ರಾನ್ಸ್ಪ್ಲಾಂಟ್ ಫಿಸಿಷಿಯಸ್ ಆಗಿರುವ ಡಾ. ಪುನೀತ್ ಭುವನಿಯಾ ಅವರು ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. ಜನರು ತಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಹೊಸ ವರ್ಷದಲ್ಲಿ ಕೆಲವೊಂದು ರೆಸಲ್ಯೂಶನ್‌ಗಳನ್ನು ಮಾಡಬೇಕೆಂದು ಸೂಚಿಸಿದ್ದಾರೆ.
ಸಾಕಷ್ಟು ನೀರು ಕುಡಿಯಿರಿ:
ನೀರು ಮೂತ್ರಪಿಂಡಗಳ ಮೂಲಕ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಮೂತ್ರಪಿಂಡದ ಕಲ್ಲುಗಳ ಕಾಯಿಲೆಯನ್ನು ಹೊಂದಿರುವವರು ಮುಂದಿನ ದಿನಗಳಲ್ಲಿ ಕಲ್ಲುಗಳ ರಚನೆಯನ್ನು ತಡೆಯಲು ಸಾಕಷ್ಟು ನೀರು ಕುಡಿಯಬೇಕು.
ಧೂಮಪಾನವನ್ನು ತ್ಯಜಿಸಿ:
ಧೂಮಪಾನವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಮೂತ್ರಪಿಂಡಗಳಲ್ಲಿ ರಕ್ತದ ಹರಿವನ್ನು ಸೀಮಿತಗೊಳಿಸುತ್ತದೆ. ಇದಲ್ಲದೆ ಧೂಮಪಾನವು ಮೂತ್ರಪಿಂಡದ ಕ್ಯಾನ್ಸರ್‌ನ ಒಂದು ವಿಧವಾದ ಜೀವಕೋಶದ ಕಾರ್ಸಿನೋಮದ ಅಪಾಯವನ್ನು ಉಂಟು ಮಾಡುತ್ತದೆ. ಹೀಗಾಗಿ ಧೂಮಪಾನವನ್ನು ತ್ಯಜಿಸಿದಾಗ ಈ ಕ್ಯಾನ್ಸರ್ ನರುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
ದೈಹಿಕವಾಗಿ ಸಕ್ರಿಯವಾಗಿರಿ:
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಹೃದಯ ಅಥವಾ ಶ್ವಾಸಕೋಶಗಳಿಗೆ ಮಾತ್ರವಲ್ಲದೆ ಮೂತ್ರಪಿಂಡಗಳಿಗೂ ಸಹ ಪ್ರಯೋಜನಕಾರಿಯಾಗಿದೆ. ನಿಯಮಿತ ದೈಹಿಕ ಚಟುವಟಿಕೆಗಳು ಗರಿಷ್ಠ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದರೆ ನೀವು ಜಿಮ್‌ನಲ್ಲಿ ಹೆಚ್ಚು ಗಂಟೆಗಳ ಕಾಲ ಕಳೆಯಬೇಕೆಂದು ಇದರ ಅರ್ಥವಲ್ಲ. ನೀವು ನಡಿಗೆಯೊಂದಿಗೆ ಪ್ರಾರಂಭಿಸಬಹುದು ಮತ್ತು ನಿಧಾನವಾಗಿ ಈಜು, ಸೈಕ್ಲಿಂಗ್, ಓಟ, ಏರೋಬಿಕ್ಸ್, ಯೋಗಗಳನ್ನು ಮಾಡಬಹುದು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅತ್ಯಗತ್ಯ.
ಇದನ್ನೂ ಓದಿ: ಹನಿ ಸಿಂಗ್ ಬಳಲುತ್ತಿರುವ ಬೈಪೋಲರ್ ಡಿಸಾರ್ಡರ್ ಎಂದರೇನು? ರೋಗಲಕ್ಷಣಗಳ ಕುರಿತು ಮಾಹಿತಿ ಇಲ್ಲಿವೆ
ಪ್ಯಾಕ್ಡ್ ಫುಡ್ / ಜಂಕ್ ಫುಡ್ನಿಂದ ದೂರವಿರಿ:
ಪ್ಯಾಕ್ಡ್ ಫುಡ್ / ಜಂಕ್ ಫುಡ್ ಮುಂತಾದ ಖಾರದ ಪದಾರ್ಥಗಳ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚುವರಿ ಉಪ್ಪು ನಿಮ್ಮ ಮೂತ್ರಪಿಂಡಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಹಾನಿಗೊಳಿಸುತ್ತದೆ. ಆದ್ದರಿಂದ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಶೇಕಡಾ 40ರಷ್ಟು ಮೂತ್ರಪಿಂಡದ ರೋಗಿಗಳು ಯಾವುದೇ ರೋಗಲಕ್ಷಣಗಳನ್ನು ಅಭಿವೃದ್ಧಿ ಪಡಿಸುವುದಿಲ್ಲ, ಆದ್ದರಿಂದ 6 ತಿಂಗಳಿಗೊಮ್ಮೆ ಮೂತ್ರಪಿಂಡಗಳನ್ನು ಪರೀಕ್ಷಿಸಿ. ಈ ಅಭ್ಯಾಸವು ನಿಮ್ಮನ್ನು ಮೂತ್ರಪಿಂಡದ ಕಾಯಿಲೆಯಿಂದ ದೂರವಿರಿಸುವಲ್ಲಿ ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: