Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕೈಬರಹದಿಂದ ನಿಮ್ಮ ಆರೋಗ್ಯದ ಸ್ಥಿತಿಯನ್ನು ಗುರುತಿಸಬಹುದು, ಅದು ಹೇಗೆ? ಇಲ್ಲಿದೆ ತಜ್ಞರ ಮಾಹಿತಿ

ಗ್ರಾಫಾಲಜಿಯ ಮೂಲಕ ನೀವು ಅನುಭವಿಸುತ್ತಿರುವ ಯಾವುದೇ ಕಾಯಿಲೆಗಳ ಬಗ್ಗೆ ನಿಮ್ಮ ಕೈಬರಹವು ಏನು ಹೇಳುತ್ತದೆ ಎಂಬುವುದರ ಕುರಿತು ಸರಿಯಾದ ಜ್ಞಾನದೊಂದಿಗೆ ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಅರ್ಥೈಸಿಕೊಳ್ಳಬಹುದು.

Health Tips: ಕೈಬರಹದಿಂದ ನಿಮ್ಮ ಆರೋಗ್ಯದ ಸ್ಥಿತಿಯನ್ನು ಗುರುತಿಸಬಹುದು, ಅದು ಹೇಗೆ? ಇಲ್ಲಿದೆ ತಜ್ಞರ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 01, 2023 | 7:36 AM

ನಾವು ಬರೆಯುವುದು ಅದು ನಮ್ಮ ಮೆದುಳಿನ ಸಂಕೀರ್ಣ ಚಿಂತನೆ ಪ್ರಕ್ರಿಯೆಯ ಕಿಟಕಿಯಾಗಿದೆ. ಆದರೆ ನೀವು ಏನನ್ನಾದರೂ ಕೈಯಿಂದ ಬರೆಯುತ್ತಿದ್ದರೆ, ನಿಮ್ಮ ಮನಸ್ಸಿನಲ್ಲಿ ನೀವು ಓದಬಹುದಾದ ಆಲೋಚನೆಗಳಿಗಿಂತ ಹೆಚ್ಚಿನವುಗಳಾಗಿವೆ. ಗ್ರಾಫಾಲಜಿಯ ಮೂಲಕ ನೀವು ಅನುಭವಿಸುತ್ತಿರುವ ಯಾವುದೇ ಕಾಯಿಲೆಗಳ ಬಗ್ಗೆ ನಿಮ್ಮ ಕೈಬರಹವು ಏನು ಹೇಳುತ್ತದೆ ಎಂಬುವುದರ ಕುರಿತು ಸರಿಯಾದ ಜ್ಞಾನದೊಂದಿಗೆ ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಅರ್ಥೈಸಿಕೊಳ್ಳಬಹುದು. ಕೈಬರಹಗಳು ವಿಶಿಷ್ಟವಾಗಿದೆ. ಫಿಂಗರ್ ಪ್ರಿಂಟ್‍ಗಳಂತೆಯೇ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಪ್ರತಿಯೊಂದಕ್ಕೂ ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನವಿದೆ. ಅದು ಇತರರಿಗಿಂತ ಭಿನ್ನವಾಗಿರುತ್ತದೆ. ಅಷ್ಟೇ ಅಲ್ಲ, ಕಾಲ ನಂತರದಲ್ಲಿ ನಿಮ್ಮ ಕೈ ಬರಹವೂ ಬದಲಾಗುತ್ತದೆ. ನಿಮ್ಮ ಮೆದುಳಿ ನಿಮ್ಮ ಕೈ ಬರಹವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ಬೆಳವಣಿಗೆಯ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದ ಬದಲಾವಣೆ ಇಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೈ ಬರಹವು ವ್ಯಕ್ತಿಯ ಬಗ್ಗೆ ಮತ್ತು ಮುಖ್ಯವಾಗಿ ಅವರ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ.

ಒಬ್ಬ ವ್ಯಕ್ತಿಯು ಕೆಲವು ಕಾಯಿಲೆಗಳಿಗೆ ಒಳಗಾಗಿದ್ದರೆ ಅವರ ಕೈಬರಹದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದು ಹಲವಾರು ಅಧ್ಯಯನಗಳು ಈಗಾಗಲೇ ತೀರ್ಮಾನಿಸಿವೆ. ಸಹಿಯ ಶೈಲಿಯಲ್ಲಿ ಅಥವಾ ಅವರು ಬರೆಯುವ ರೀತಿಯಲ್ಲಿ ಬದಲಾವಣೆಯಾಗಿದ್ದರೆ, ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಅಥವಾ ಅವರ ಕೈ ಬರಹವು ಅವರ ಆರೋಗ್ಯದ ಬಗ್ಗೆ ಮಾತನಾಡಲು, ಡಿಕೋಡ್ ಮಾಡಲು ಸಹಾಯ ಮಾಡುವ ಪರಿಣಿತರನ್ನು ಕಂಡುಹಿಡಿಯಬೇಕು.

ಆಳವಾಗಿ ನೋಡುವುದಾದರೆ, ನಾವು ಆಯುರ್ವೇದ ವಿಧಾನವನ್ನು ಅರ್ಥಮಾಡಿಕೊಳ್ಳೋಣ, ಅದರಲ್ಲಿ ‘ಜೇ ಪಿಂಡಿ ತೇ ಬ್ರಹ್ಮಾಂಡಿ’ ಎಂದು ವ್ಯಾಖ್ಯಾನಿಸುತ್ತದೆ. ಏಕೆಂದರೆ ಜೀವ ಅಥವಾ ಜೀವಂತ ಜೀವಿಗಳಲ್ಲಿ ಕಂಡು ಬರುವ ತತ್ವವು ವಿಶ್ವದಲ್ಲಿ ಕಂಡುಬರುವಂತೆಯೇ ಇರುತ್ತದೆ. ಮತ್ತು ಪ್ರತಿಯಾಗಿ ಚಿಕ್ಕ ಚಿಕ್ಕ ತುಣುಕಿನಲ್ಲಿ ಕಂಡು ಬರುವ ಯಾವುದೇ ಅಂಶವು ಅದರ ಭಾಗವಾಗಿರುವ ದೊಡ್ಡ ಘಟಕದ ಬಗ್ಗೆ ಬಹಳಷ್ಟು ಹೇಳಬೇಕು. ಈ ಸಂದರ್ಭದಲ್ಲಿ ಇದು ವ್ಯಕ್ತಿಯ ಆರೋಗ್ಯದ ಬಗ್ಗೆ ಕೈಬರಹವೇ ಮಾತನಾಡುತ್ತದೆ.

ಇದನ್ನು ಓದಿ;Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ನಿಮ್ಮ ಕೈಬರಹವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂಬುವುದನ್ನು ತಿಳಿದುಕೊಳ್ಳುವ ಗ್ರಾಫಾಲಜಿ ವಿಧಾನವನ್ನು ಅರ್ಥ ಮಾಡಿಕೊಳ್ಳೋಣ. ನಮ್ಮ ಕೈ ಬರಹವು ಬಹಳಷ್ಟು ನಿಂತಿರುವ ರೇಖೆಗಳನ್ನು ಒಳಗೊಂಡಿದೆ ಮತ್ತು ಅದು ನಮ್ಮ ಭಂಗಿ ಮತ್ತು ಬೆನ್ನೆಲುಬು-ಸಂಬಂಧಿತ ಸಮಸ್ಯೆಗಳ ಬಗ್ಗೆ ಏನಾದರೂ ಹೇಳಬಹುದು. ನಿಂತಿರುವ ರೇಖೆಗಳು ಅಲುಗಾಡುತ್ತಿದ್ದರೆ ಅಥವಾ ಅಲೆ ಅಲೆಯಾಗಿದ್ದರೆ, ಅದು ಬೆನ್ನೆಲುಬು ಸಂಬಂಧಿತ ಸಮಸ್ಯೆಗಳ ಕಡೆಗೆ ಸುಳಿವು ನೀಡುತ್ತದೆ.

ಅಂತೆಯೇ ಶಾಯಿ ಹರಿವು ಪಾಸ್ಟೊಸಿಟಿಯ ಬಗ್ಗೆ ಹೇಳಬೇಕು ಮತ್ತು ಅದು ಹೇಗೆ ಋಣಾತ್ಮಕ ಅಥವಾ ಯಾರೊಬ್ಬರ ವಿಷಯದಲ್ಲಿ ಧನಾತ್ಮಕಕವಾಗಿರುತ್ತದೆ. ಸಕಾರತ್ಮಕ ಪಾಸ್ಟೊಸಿಟಿ ಎಂದರೆ ಸಂಗೀತ, ಆಹಾರ ಮತ್ತು ಉಡುಪುಗಳ ಬಗ್ಗೆ ಒಲವು. ಸಕರಾತ್ಮಕ ಪಾಸ್ಟೊಸಿಟಿ ಹೊಂದಿರುವ ಜನರು ದಪ್ಪ ಪೆನ್ನನ್ನು ಬಳಸುತ್ತಾರೆ ಮತ್ತು ಬರವಣಿಗೆಯಲ್ಲಿ ಸೃಜನಶೀಲರಾಗಿರುತ್ತಾರೆ. ಋಣಾತ್ಮಕ ಪಾಸ್ಟೊಸಿಟಿ ಹೊಂದಿರುವ ಜನರು ಬರವಣಿಗೆಯ ಮೇಲೆ ಬಹಳಷ್ಟು ತಿದ್ದಿ ಬರೆಯುತ್ತಾರೆ. ಇದು ಹಿಂಸಾತ್ಮಕ ಅಥವಾ ಋಣಾತ್ಮಕ ಗ್ರಾಫಿಕ್ ಚಲನಚಿತ್ರಗಳಿಂದ ಪ್ರಚೋದಿಸ್ಪಡುತ್ತದೆ. ಮತ್ತು ಸಾಮಾನ್ಯವಾಗಿ ಒಬ್ಬಂಟಿಯಾಗಿ, ನೋವಿನಲ್ಲಿ ಇರಲು ಇಷ್ಟಪಡುತ್ತಾರೆ. ಇದು ವ್ಯಕ್ತಿಯ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು.

ಸ್ಕ್ವೀಗಿಂಗ್ ಎಲಿಮೆಂಟ್ ಎಂದರೆ ಒಬ್ಬ ವ್ಯಕ್ತಿಯ ಅಕ್ಷರಗಳನ್ನು ಹತ್ತಿರದಿಂದ ಇಕ್ಕಟ್ಟಾಗಿಸುವ ಮೂಲಕ ಅಥವಾ ಸಾಮಾನ್ಯಕ್ಕಿಂತ ಹೆಚ್ಚಾಗಿ ಅವುಗಳನ್ನು ಪರಸ್ಪರ ಬೇರ್ಪಡಿಸು ಮೂಲಕ ಅಥವಾ ವಿಕಾರ ಅಕ್ಷರಗಳನ್ನು ಬಳಸುವುದರ ಮೂಲಕ ಬರೆಯುತ್ತಾರೆ. ಇದು ವ್ಯಕ್ತಿಯ ಆರೋಗ್ಯದ ಸಮಸ್ಯೆಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ.

ಬರವಣಿಗೆಯಲ್ಲಿನ ವಿವಿಧ ವೇಗವು ವ್ಯಕ್ತಿಯ ಮಾನಸಿಕ ಸಮತೋಲನದ ಬಗ್ಗೆಯೂ ಹೇಳುತ್ತದೆ. ಒಬ್ಬ ವ್ಯಕ್ತಿಯು ತುಂಬಾ ವೇಗವಾಗಿ ಬರೆದರೆ, ಅವರು ಸಾಮಾನ್ಯವಾಗಿ ಕ್ಲಬ್ ಸ್ಟ್ರೋಕ್ ರಚನೆಯನ್ನು ಅಥವಾ ಅವರ ವಾಕ್ಯದ ಅತ್ಯಂತ ತೀಕ್ಷ್ಣವಾದ ಸ್ಲ್ಯಾಷ್‍ನ್ನು ಬಿಡುತ್ತಾರೆ. ಇದನ್ನು ಪೆನ್ ಫ್ಲಿಕ್ಸ್ ಎಂದು ಕರೆಯಲಾಗುತ್ತದೆ. ಯಾರಾದರೂ ಅವುಗಳನ್ನು ಆಗಾಗ್ಗೆ ಬಳಸುತ್ತಿದ್ದರೆ ಇದು ಗಂಟಲು, ಕಾಲುಗಳು, ಅಥವಾ ಶ್ವಾಸಕೋಶಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ವಿಕಾರವಾದ ಅಕ್ಷರಗಳು ಸ್ಪಾಸ್ಟಿಸಿಟಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಒಬ್ಬ ವ್ಯಕ್ತಿ ತಮ್ಮ ಕೈ ಬರಹದ ಸ್ವಯಂ ಪರೀಕ್ಷೆಯನ್ನು ಅಭ್ಯಾಸ ಮಾಡಲು ಹಾಗೂ ಕೈಬರಹ ವ್ಯಾಯಾಮಗಳನ್ನು ಅಭ್ಯಾಸ ಮಾಡಲು, ಕೈಬರಹದ ಮೂಲಕ ಯೋಗಕ್ಷೇಮವನ್ನು ಸುಧಾರಿಸಲು ಮಾರ್ಗದರ್ಶನ ಪಡೆಯಲು ಗ್ರಾಫಾಲಜಿ ತಜ್ಞರನ್ನು ಸಂಪರ್ಕಿಸಬಹುದು. (ಸುಧೀರ್ ಕೋವೆ, ಸಂಸ್ಥಾಪಕ ‘ದಿ ಲೋಗೋ ಗುರು’)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ