Dry eyes in kids: ಮಕ್ಕಳಲ್ಲಿಒಣ ಕಣ್ಣಿನ ಸಮಸ್ಯೆಗೆ ಕಾರಣ ಮತ್ತು ಲಕ್ಷಣಗಳನ್ನು ತಿಳಿದುಕೊಳ್ಳಿ

ಒಣ ಕಣ್ಣಿನ ಸಮಸ್ಯೆ ಇದ್ದಾಗ ಮಕ್ಕಳು ಕಣ್ಣುಗಳನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಇದು ನಿಮ್ಮ ಮಗುವಿಗೆ ಮಸುಕಾದ ದೃಷ್ಟಿಗೆ ಕಾರಣವಾಗಬಹುದು. ಆದರೆ ಒಣ ಕಣ್ಣುಗಳು ಸಾಮಾನ್ಯವಾಗಿ ದೃಷ್ಟಿಗೆ ನಿರಂತರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

Dry eyes in kids: ಮಕ್ಕಳಲ್ಲಿಒಣ ಕಣ್ಣಿನ ಸಮಸ್ಯೆಗೆ ಕಾರಣ ಮತ್ತು ಲಕ್ಷಣಗಳನ್ನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 01, 2023 | 2:00 PM

ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಒಣ ಕಣ್ಣಿ(Dry Eyes) ನ ಸಮಸ್ಯೆ ವಿಭಿನ್ನವಾಗಿರುತ್ತದೆ. ಇಂತಹ ಸಮಸ್ಯೆಗಳಿಗೆ ಪ್ರಾರಂಭಿಕ ಹಂತದಲ್ಲಿ ಮನೆ ಮದ್ದು(Home Remedies) ಗಳು ಕೂಡ ಪರಿಹಾರ ಕಂಡು ಕೊಳ್ಳಬಹುದಾಗಿದೆ.ಒಣ ಕಣ್ಣು ದಿನ ನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಇಂತಹ ಸಮಸ್ಯೆ ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿಯಾದಾಗ ಮಕ್ಕಳು ಕಣ್ಣುಗಳನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಇದು ನಿಮ್ಮ ಮಗುವಿಗೆ ಮಸುಕಾದ ದೃಷ್ಟಿಗೆ ಕಾರಣವಾಗಬಹುದು. ಆದರೆ ಒಣ ಕಣ್ಣುಗಳು ಸಾಮಾನ್ಯವಾಗಿ ದೃಷ್ಟಿಗೆ ನಿರಂತರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಮಕ್ಕಳಲ್ಲಿ ಒಣ ಕಣ್ಣಿನ ಸಮಸ್ಯೆಗೆ ಕಾರಣಗಳು:

ಮಕ್ಕಳಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಹೆಚ್ಚಾಗಿ ಆನ್ಲೈನ್ ಗೇಮಿಂಗ್​ನಲ್ಲಿ ಸಮಯ ಕಳೆಯುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಕಣ್ಣು ಉರಿ,ಕಣ್ಣು ತುರಿಕೆ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಕಾಲಕ್ರಮೇಣ ಇದು ಕಣ್ಣಿನ ತೀವ್ರವಾದ ಅಲರ್ಜಿಗೆ ಕಾರಣವಾಗಬಹುದು. ಜೊತೆಗೆ ಕಣ್ಣಿನಲ್ಲಿ ತುರಿಕೆ ಹೆಚ್ಚಾದಂತೆ ಮಕ್ಕಳು ಕಣ್ಣನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಕಣ್ಣು ನೋವು ಹಾಗೂ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಹೆಚ್ಚಿದೆ.

ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಪೋಷಕರು ಹೆಚ್ಚಿನ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ಮಕ್ಕಳಿಗೆ ಸಮಸ್ಯೆ ಎನು ಎಂಬುದನ್ನು ಸರಿಯಾಗಿ ತಿಳಿದಿರುವುದಿಲ್ಲ. ಉದಾಹರಣೆಗೆ ಕಣ್ಣಿನಲ್ಲಿ ಎನಾದರೂ ಸಮಸ್ಯೆ ಕಂಡು ಬಂದರೆ ಮೊದಲು ಕಣ್ಣನ್ನು ಉಜ್ಜಿಕೊಳ್ಳುವುದು. ಆದರೆ ಅಂತಹ ನಡವಳಿಕೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ಅವರ ನಡವಳಿಕೆಯನ್ನು ಓದಲು ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು.

ಇದನ್ನೂ ಓದಿ: ಸ್ವೆಟರ್ ಹಾಕಿಕೊಂಡು ಮಲಗುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ತಿಳಿಯಿರಿ

ಮಕ್ಕಳ ಒಣ ಕಣ್ಣಿನ ಸಮಸ್ಯೆಗೆ ಪರಿಹಾರಗಳು:

ಧೂಮಪಾನ ಮಾಡದಿರಿ:

ಮಕ್ಕಳು ನಿಮ್ಮ ಜೊತೆಗೆ ಸಮಯ ಕಳೆಯುತ್ತಿದ್ದರೆ, ಆ ಸಮಯದಲ್ಲಿ ಧೂಮಪಾನ ಮಾಡದಿರಿ. ಇದು ನಿಮ್ಮ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ನಿಮ್ಮ ಮಕ್ಕಳ ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಜೊತೆಗಿರುವಾಗ ಧೂಮಪಾನದಿಂದ ದೂರವಿರಿ.

ಸನ್ ಗ್ಲಾಸ್ ಬಳಸುವುದು:

ಹೊರಗಡೆ ಹೋಗುವಾಗ ಸನ್ ಗ್ಲಾಸ್ ಧರಿಸುವುದನ್ನು ಮಕ್ಕಳಿಗೆ ಹೇಳಿಕೊಡಿ. ಸನ್ ಗ್ಲಾಸ್​​ ಬಳಸುವುದರಿಂದ ಹೊರಗಿನ ಧೂಳು ಮಾಲಿನ್ಯಗಳು ಕಣ್ಣಿನ ಒಳಗಡೆ ಹೋಗುವುದರಿಂದ ತಪ್ಪಿಸಬಹುದಾಗಿದೆ.

ಸ್ವಚ್ಚತೆ ಅಗತ್ಯ:

ನಿಮ್ಮ ಮಗು ಮಲಗುವ ಹಾಸಿಗೆ, ಕೋಣೆಯನ್ನು ಸ್ವಚ್ಚವಾಗಿರಿಸಿ. ಕೋಣೆಯೊಳಗಿನ ಧೂಳು ಕೂಡ ಕಣ್ಣಿನ ಜೊತೆಗೆ ಆರೋಗ್ಯವನ್ನು ಕೆಡಿಸುತ್ತದೆ. ಧೂಳಿನಿಂದ ಕೆಮ್ಮ, ಗಂಟಲು ನೋವಿಗೂ ಕಾರಣವಾಗಬಹುದು.

ಕಣ್ಣಿನ ಮಸಾಜ್​​ ಮಾಡಿ:

ಪ್ರತಿದಿನ ಬೆಳಿಗ್ಗೆ ಸುಮಾರು 5 ನಿಮಿಷಗಳ ಕಾಲ ನಿಮ್ಮ ಮಗುವಿನ ಕಣ್ಣುರೆಪ್ಪೆಗಳ ಮೇಲೆ ಬೆಚ್ಚಗಿನ, ತೇವವಾದ ಬಟ್ಟೆಯನ್ನು ಇರಿಸಿ. ನಂತರ ಕಣ್ಣಿನ ರೆಪ್ಪೆಗಳನ್ನು ಮೆತ್ತಗೆ ಮಸಾಜ್ ಮಾಡಿ. ಇದು ಕಣ್ಣಿನ ನೈಸರ್ಗಿಕ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 1:58 pm, Sun, 1 January 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್