Ukraine And Russia War: ಉಕ್ರೇನ್ ಮೇಲೆ ಒಂದೇ ದಿನ 70ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ರಷ್ಯಾ
ಯುದ್ಧದ ಆರಂಭದ ನಂತರ ಉಕ್ರೇನ್‌ನ ಮೇಲೆ ತನ್ನ ಅತಿದೊಡ್ಡ ದಾಳಿಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ರಶ್ ಅವರ್‌ನಲ್ಲಿ ರಷ್ಯಾ 70 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ.
ಕೈವ್: ಉಕ್ರೇನ್ ವಿರುದ್ಧ ಯುದ್ಧ ಸಾರಿದ ರಷ್ಯಾ (Ukraine And Russia War) ಶುಕ್ರವಾರ (ಡಿ.16) ಭೀಕರ ಕ್ಷಿಪಣಿ ದಾಳಿ (Missile attack) ನಡೆಸಿದೆ. ಬೆಳಗ್ಗೆಯಿಂದಲೇ 70ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಹಾರಿಸಲಾಗಿದೆ. ಇದು ಯುದ್ಧ ಆರಂಭಗೊಂಡ ನಂತರ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಸೆಂಟ್ರಲ್ ಕ್ರಿವಿ ರಿಹ್‌ನಲ್ಲಿ ಅಪಾರ್ಟ್‌ಮೆಂಟ್ ಬ್ಲಾಕ್‌ಗೆ ಕ್ಷಿಪಣಿ ಅಪ್ಪಳಿಸಿ ಇಬ್ಬರು ಸಾವನ್ನಪ್ಪಿದರೆ, ಕ್ಷಿಣದ ಖರ್ಸನ್‌ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಕ್ರಮಿತ ಪೂರ್ವ ಉಕ್ರೇನ್‌ನಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಜೆಯ ವೀಡಿಯೊ ಮೂಲಕ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಇನ್ನೂ ಹಲವಾರು ಬೃಹತ್ ದಾಳಿಗಳಿಗೆ ಸಾಕಷ್ಟು ಕ್ಷಿಪಣಿಗಳನ್ನು ಹೊಂದಿದೆ. ಕೈವ್ ಅನ್ನು ಹೆಚ್ಚು ಮತ್ತು ಉತ್ತಮವಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಲು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದರು. ಇದೇ ವೇಳೆ, ಉಕ್ರೇನ್ ಪುಟಿದೇಳುವಷ್ಟು ಪ್ರಬಲವಾಗಿದೆ ಎಂದು ಝೆಲೆನ್ಸ್ಕಿ ಹೇಳಿದರು.
ಇದನ್ನೂ ಓದಿ: Indonesia Earthquake: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 602ಕ್ಕೂ ಹೆಚ್ಚು ಜನ ಸಾವು: ವರದಿ
Russia fired more than 70 missiles at Ukraine on Friday, which’s one of the biggest attacks since the start of the war, & forcing Kyiv to implement emergency blackouts nationwide, reports Reuters citing Ukrainian officials
— ANI (@ANI) December 16, 2022
ರಷ್ಯಾವು ಮುಂದಿನ ವರ್ಷದ ಆರಂಭದಲ್ಲಿ ಹೊಸ ಸಂಪೂರ್ಣ ಆಕ್ರಮಣವನ್ನು ಯೋಜಿಸಿದೆ ಎಂದು ಕೈವ್ ಗುರುವಾರ ಎಚ್ಚರಿಸಿದೆ. ಉಕ್ರೇನ್‌ನ ವ್ಯಾಪಕ ಪ್ರದೇಶಗಳು ಕ್ಷಿಪಣಿಗಳು ಮತ್ತು ಫಿರಂಗಿ ದಾಳಿಗಳಿಂದ ಛಿದ್ರಗೊಂಡಿವೆ. ಆದರೆ ಅದರಲ್ಲಿ ಸ್ವಲ್ಪ ಭಾಗವನ್ನಷ್ಟೇ ರಷ್ಯಾದ ಪಡೆಗಳು ವಶಪಡಿಸಿಕೊಂಡವು. ಅಕ್ಟೋಬರ್ ಆರಂಭದಿಂದ ವಾರಕ್ಕೊಮ್ಮೆ ರಷ್ಯಾ ಉಕ್ರೇನಿಯನ್ ಶಕ್ತಿಯ ಮೂಲಸೌಕರ್ಯದ ಮೇಲೆ ಕ್ಷಿಪಣಿಗಳ ಮಳೆಗರೆದಿದೆ, ಆದರೆ ಶುಕ್ರವಾರದ ದಾಳಿಯು ಇತರ ದಾಳಿಗಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 am, Sat, 17 December 22