AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indonesia Earthquake: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 602ಕ್ಕೂ ಹೆಚ್ಚು ಜನ ಸಾವು: ವರದಿ

Earthquake: ಕಳೆದ ತಿಂಗಳು ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 602ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಇಂದು (ಶುಕ್ರವಾರ) ತಿಳಿಸಿದ್ದಾರೆ.

Indonesia Earthquake: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 602ಕ್ಕೂ ಹೆಚ್ಚು ಜನ ಸಾವು: ವರದಿ
ಸಾಂದರ್ಭಿಕ ಚಿತ್ರ Image Credit source: HT
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Dec 16, 2022 | 7:33 PM

Share

ಇಂಡೋನೇಷ್ಯಾ: ಕಳೆದ ತಿಂಗಳು ಇಂಡೋನೇಷ್ಯಾ(Indonesia) ಜಾವಾ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ(Earthquake) ಸಾವನ್ನಪ್ಪಿದವರ ಸಂಖ್ಯೆ 602ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಇಂದು (ಶುಕ್ರವಾರ) ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಂಡ ಭೂಕಂಪವಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ. ನವೆಂಬರ್ 21ರಂದು ಇಂಡೋನೇಷ್ಯಾದ ಪಶ್ಚಿಮ ಜಾವಾದ ಸಿಯಾಂಜೂರ್ ಪಟ್ಟಣದಲ್ಲಿ 5.6 ತೀವ್ರತೆಯ ಭೂಕಂಪವು ಸಂಭವಿಸಿತ್ತು. ಕಟ್ಟಡಗಳು ಕುಸಿದು ಬಿದ್ದು ಅನೇಕ ಜನರು ಸಾವನ್ನಪ್ಪಿದ್ದರು, ಆದರೆ ಈ ಭೂಕಂಪದಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದರೆ ಎಂಬ ನಿಖರವಾದ ಮಾಹಿತಿ ಇರಲಿಲ್ಲ.

ಸಿಯಾಂಜೂರ್ ಸ್ಥಳೀಯ ಆಡಳಿತದ ವಕ್ತಾರ ಆಡಮ್, ಇಂಡೋನೇಷ್​ದ ಅನೇಕ ಪ್ರದೇಶದಲ್ಲಿ ನಡೆದ ಭೂಕಂಪದಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿದೆ ಎಂದು ಹೇಳಿದ್ದಾರೆ. ಒಟ್ಟು 334 ಜನರು ಸಾವನ್ನಪ್ಪಿದ್ದಾರೆ ಎಂದು ಮೊದಲ ಹಂತ ಅಂಕಿ ಅಂಶಗಳನ್ನು ನೀಡಲಾಗಿತ್ತು. ದುರಂತದ ನಂತರ ಅನೇಕ ಜನರು ತಮ್ಮ ಸಂಬಂಧಿಕರನ್ನು ಸಮಾಧಿ ಮಾಡಲು ಬಂದಿರುವುದರಿಂದ ಕೆಲವೊಂದು ಸಾವುಗಳ ಮಾಹಿತಿಗಳು ವರದಿ ಮಾಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:Indonesia Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; ಸಾವಿನ ಸಂಖ್ಯೆ 310ಕ್ಕೆ ಏರಿಕೆ

ಈ ಸಾವಿನ ಬಗ್ಗೆ ವರದಿಗಳು ಈಗಾಗಲೇ ನೀಡಿರುವ ಅಧಿಕೃತ ಮಾಹಿತಿಗಳ ಪ್ರಕಾರ ಒಟ್ಟು ಸುಮಾರು 602ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಈ ಅಂಕಿ ಅಂಶವನ್ನು BPBD ಸ್ಥಳೀಯ ರಕ್ಷಣಾ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಏಜೆನ್ಸಿಯ ಅಧಿಕಾರಿ ವವಾನ್ ಸೆಟಿಯವಾನ್ ಅವರು ಈ ಬಗ್ಗೆ AFPಗೆ ದೃಢಪಡಿಸಿದ್ದಾರೆ.

ರಾಜ್ಯ ಸುದ್ದಿ ಸಂಸ್ಥೆ ಅಂಟಾರಾ ಶುಕ್ರವಾರ ಸಿಯಾಂಜೂರ್ ಜಿಲ್ಲಾ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಅವರು 602 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಸಂಸ್ಥೆ ವಕ್ತಾರ ಅಬ್ದುಲ್ ಮುಹಾರಿ ಎಎಫ್‌ಪಿಗೆ ಭೂಕಂಪದಲ್ಲಿ 335 ರಷ್ಟು ಮಾತ್ರ ಸಾವನ್ನಪ್ಪಿದ್ದಾರೆ ಹೊಸ ಅಂಕಿಅಂಶ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.

ಈ ಭೂಕಂಪವು 2018ರ ನಂತರ ಅತ್ಯಂತ ಭೀಕರವಾಗಿತ್ತು ಮತ್ತು 2018 ಭೂಕಂಪದಲ್ಲಿ ಸುಲಾವೆಸಿ ದ್ವೀಪದಲ್ಲಿ 4,000 ಕ್ಕೂ ಹೆಚ್ಚು ಜನರ ಸಾವನ್ನಪ್ಪಿದರು. ಭೂಕಂಪದ ನಂತರದ ದಿನಗಳಲ್ಲಿ ಅನೇಕರು ಅವಶೇಷಗಳಡಿಯಲ್ಲಿ ಹೂತುಹೋಗಿರುವುದು ಕಂಡುಬಂದಿದೆ, ಕೆಲವರು ಪವಾಡ ಎಂಬಂತೆ ಬದುಕಿ ಉಳಿದ್ದರು. ಈ ಭೂಕಂಪದಿಂದ 62,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಮತ್ತು 73,000 ಕ್ಕೂ ಹೆಚ್ಚು ಜನರನ್ನು 325 ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಹೀಗೆ ಅನೇಕ ಭೂಕಂಪಗಳು ಇಂಡೋನೇಷ್ಯಾದಲ್ಲಿ ನಡೆದಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Fri, 16 December 22