Malaysia Landslide: ಮಲೇಷ್ಯಾ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ

ಮಲೇಷ್ಯಾದ ಕ್ಯಾಂಪ್‌ಗ್ರೌಂಡ್‌ನಲ್ಲಿ ಭೂಕುಸಿತ ಸಂಭವಿಸಿದ್ದು ಘಟನೆಯಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

Malaysia Landslide: ಮಲೇಷ್ಯಾ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ
ಮಲೇಷ್ಯಾ ಭೂಕುಸಿತ
Follow us
TV9 Web
| Updated By: ಆಯೇಷಾ ಬಾನು

Updated on:Dec 17, 2022 | 7:10 AM

ಮಲೇಷ್ಯಾ: ಶುಕ್ರವಾರ ಮಲೇಷ್ಯಾದ ರಜಾ ಶಿಬಿರದ ಮೇಲೆ ಭೂಕುಸಿತ(Malaysia Landslide) ಸಂಭವಿಸಿದ್ದು ಘಟನೆಯಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಘಟನೆಯ ಭೀಕರತೆಗೆ ಮತ್ತಷ್ಟು ಜನರು ಮಣ್ಣಿನಲ್ಲಿ ಸಿಲುಕಿರುವ ಶಂಕೆಯಿಂದ ರಕ್ಷಣಾ ಪಡೆಗಳು ರಾತ್ರಿಪೂರ್ತಿ ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ರಜಾ ಶಿಬಿರದ ಮೇಲೆ ಶುಕ್ರವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಸಂಭವಿಸಿದ ಭೂ ಕುಸಿತ ಸಂದರ್ಭದಲ್ಲಿ ಕುಟುಂಬಗಳು ತಮ್ಮ ತಮ್ಮ ಟೆಂಟ್​ಗಳಲ್ಲಿ ನಿದ್ರೆಯಲ್ಲಿದ್ದವು. 90ಕ್ಕೂ ಹೆಚ್ಚು ಜನರು ಭೂ ಕುಸಿತದ ಭೀಕರತೆಗೆ ಸಾಕ್ಷಿಯಾಗಿದ್ದು ಈ ಪೈಕಿ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 400 ರಕ್ಷಣಾ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: Malaysia Landslide: ಮಲೇಷ್ಯಾದಲ್ಲಿ ಭೂಕುಸಿತಕ್ಕೆ 8 ಮಂದಿ ಬಲಿ, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಭೂಮಾಲೀಕ ಶಿಬಿರವನ್ನು ನಡೆಸಲು ಪರವಾನಗಿಯನ್ನು ಹೊಂದಿರಲಿಲ್ಲ. ಘಟನೆಯಲ್ಲಿ ಗಾಯಗೊಂಡ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಬಿರದ ಪ್ರದೇಶದಿಂದ 30 ಮೀಟರ್ (100 ಅಡಿ) ಎತ್ತರದಿಂದ ಭೂಕುಸಿತ ಸಂಭವಿಸಿ ಒಂದು ಎಕರೆಯಷ್ಟು ಪ್ರದೇಶವನ್ನು ಆವರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದ ಬಳಿಯೇ ಥೀಮ್ ಪಾರ್ಕ್‍ಗಳು ಮತ್ತು ಮಲೇಷ್ಯಾದ ಏಕೈಕ ಕ್ಯಾಸಿನೂ ಕೂಡ ಇದೆ. ದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದು ಮ್ರಮುಖ ಸ್ಥಳವಾಗಿತ್ತು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:07 am, Sat, 17 December 22