ಉಕ್ರೇನ್ ಸೇನೆಯಲ್ಲಿ ಯೋಧೆಯಾಗಿರುವ ಮಹಿಳೆ ಮನೆಗೆ ವಾಪಸ್ಸಾದಾಗ ಪುಟ್ಟ ಮಗು ತೋರುವ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2022 | 8:05 AM

ಯೋಧೆ ಕಾರಿನಿಂದ ಇಳಿದು ತನ್ನ ಮನೆ ಗೇಟ್ ಹತ್ತಿರ ಬರುತ್ತಿರುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ಅವರ ಮಗ ಗೇಟ್ ಬಳಿಯೇ ಬೊಗಸೆಯಲ್ಲಿ ತನ್ನ ಮುಖವನ್ನಿಟ್ಟು ಕಾಯುತ್ತಾ ಕುಳಿತಿದ್ದಾನೆ. ಅಮ್ಮ ವಾಪಸ್ಸು ಬಂದಿರುವುದು ಅವನಲ್ಲಿ ಅತೀವ ಸಂತಸವನ್ನುಂಟು ಮಾಡಿದೆ ಆದರೆ ಆ ಕ್ಷಣಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಅವನಿಗೆ ಗೊತ್ತಾಗುತ್ತಿಲ್ಲ

ಉಕ್ರೇನ್ ಸೇನೆಯಲ್ಲಿ ಯೋಧೆಯಾಗಿರುವ ಮಹಿಳೆ ಮನೆಗೆ ವಾಪಸ್ಸಾದಾಗ ಪುಟ್ಟ ಮಗು ತೋರುವ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ!
ಹೃದಯಸ್ಪರ್ಶಿ ವಿಡಿಯೋದ ಸ್ಕ್ರೀನ್ ಶಾಟ್​
Follow us on

ಯುದ್ಧ ಜಾರಿಯಲ್ಲಿರುವ ಭಾಗಗಳಿಂದ ಉಕ್ರೇನ್ (Ukraine) ಸೈನಿಕರು ಮನೆಗೆ ವಾಪಸ್ಸಾದಾಗ ಅವರ ಸಂಗಾತಿ, ಮಕ್ಕಳು ಮತ್ತು ಸಾಕುನಾಯಿ ಹೇಗೆ ವರ್ತಿಸುತ್ತಾರೆ ಅಂತ ತೋರುವ ವಿಡಿಯೋಗಳು ಬಹಳ ಅಪ್ಯಾಯಮಾನವಾಗಿವೆ ಮಾರಾಯ್ರೇ. ಇಂಥ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಿಗುತ್ತಿರುತ್ತವೆ. ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಌಂಟನ್ ಗೆರಾಷ್ಚೆಂಕೊ (Anton Gerashchenko) ಇಂಥ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ. ಉಕ್ರೇನ್ ಸೇನೆಯ ಒಬ್ಬ ಮಹಿಳಾ ಯೋಧೆ (woman soldier) ಯುದ್ಧಭೂಮಿಯಿಂದ ಮನೆಗೆ ವಾಪಸ್ಸು ಹೋದಾಗ ಅವರ ಪುಟ್ಟ ಮಗು ಮತ್ತು ನಾಯಿ ಅವರನ್ನು ಬರಮಾಡಿಕೊಳ್ಳುವ ಹೃದಯಸ್ಪರ್ಶಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಸದರಿ ಯೋಧೆ ಕಾರಿನಿಂದ ಇಳಿದು ತನ್ನ ಮನೆ ಗೇಟ್ ಹತ್ತಿರ ಬರುತ್ತಿರುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ಅವರ ಮಗ ಗೇಟ್ ಬಳಿಯೇ ಬೊಗಸೆಯಲ್ಲಿ ತನ್ನ ಮುಖವನ್ನಿಟ್ಟು ಕಾಯುತ್ತಾ ಕುಳಿತಿದ್ದಾನೆ. ಅಮ್ಮ ವಾಪಸ್ಸು ಬಂದಿರುವುದು ಅವನಲ್ಲಿ ಅತೀವ ಸಂತಸವನ್ನುಂಟು ಮಾಡಿದೆ ಆದರೆ ಆ ಕ್ಷಣಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಅವನಿಗೆ ಗೊತ್ತಾಗುತ್ತಿಲ್ಲ. ಆ ಮಹಿಳೆ ನಗುತ್ತಾ ಮಗನ ಮುಂದೆ ಕುಳಿತು ಅವನನ್ನು ಬಿಗಿದಪ್ಪುತ್ತಾರೆ.

ಮಗುವಿನಷ್ಟೇ ಸಂತಸಪಡುತ್ತಿರುವ ಅವರ ನಾಯಿ ಅವರಿಬ್ಬರ ಸುತ್ತ ತುಂಡುಬಾಲ ಅಲ್ಲಾಡಿಸುತ್ತಾ ಕುಣಿಯುತ್ತಿದೆ!

ವಿಡಿಯೋವನ್ನು ಶೇರ್ ಮಾಡಿ ಗೆರಾಷ್ಚೆಂಕೊ, ‘ನಾವು ಹೋರಾಡುತ್ತಿರುವುದೇ ಇದಕ್ಕಾಗಿ,’ ಎಂದು ಬರೆದಿದ್ದಾರೆ,

ವಿಡಿಯೋವನ್ನು ವೀಕ್ಷಿಸಿದ ಒಬ್ಬ ಯೂಸರ್, ‘ಈ ಕಿರು ವಿಡಿಯೋ ನನ್ನ ಹೃದಯವನ್ನು ಆನಂದಿಂದ ತುಂಬಿಸಿದೆ,’ ಎಂದು ಬರೆದಿದ್ದಾರೆ.

ಮತ್ತೊಬ್ಬ ವ್ಯಕ್ತಿ, ‘ನನ್ನ ಹೆಂಡತಿ ಮನೆಯಲ್ಲಿರದ ಸಂದರ್ಭದಲ್ಲಿ ನಮ್ಮ 6-ವರ್ಷದ ಮಗು ಗಾಬರಿಗೊಳ್ಳಲಾರಂಭಿಸುತ್ತದೆ. ಉಕ್ರೇನ್ ಮಕ್ಕಳು ಅನುಭವಿಸುತ್ತಿರುವ ಸಂಕಟ ಕಂಡು ನನ್ನ ಹೃದಯ ಬಿರಿಯುತ್ತದೆ,’ ಅಂತ ರಿಯಾಕ್ಟ್ ಮಾಡಿದ್ದಾರೆ.

‘ವಾವ್, ನಾಯಿಗೂ ಒಂದು ಅಪ್ಪುಗೆ ಸಿಕ್ಕಿರಬಹುದೆಂದು ಭಾವಿಸುತ್ತೇನೆ,’ ಅಂತ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದೇ ರೀತಿಯ ಅನುಭವವನ್ನು ಹಂಚಿಕೊಂಡಿರುವ ಮಹಿಳೆಯೊಬ್ಬರು ‘ಇದು ಹೃದಯಸ್ಪರ್ಶಿಯಾಗಿದೆ- ನೋಡುವಾಗ ಗಂಟಲಿನಲ್ಲಿ ಗಡ್ಡೆ ಸಿಕ್ಕಿಕೊಂಡಂಥ ಅನುಭವ. ನನ್ನ ಪತಿ 9 ತಿಂಗಳು ಕರ್ತವ್ಯ ನಿರ್ವಹಿಸಿ ಮನೆಗೆ ಬಂದಾಗ ನಮ್ಮ ಪುಟ್ಟ ಮಗು ಕ್ವಿಡಾಮಿಟಿ ಕ್ವೋಕಾಸ್, ತನ್ನ ಡ್ಯಾಡಿಯನ್ನು ಅಪ್ಪಿಕೊಂಡು ಮುತ್ತಿಡಲಿಲ್ಲ. ಸ್ಥಳೀಯ ಪೋಸ್ಟ್‌ಮ್ಯಾನ್‌ಗೆ ನೀಡಿದ ಅಪ್ಪುಗೆಗಳನ್ನು ಅವಳು ತನ್ನಪ್ಪನಿಗೆ ನೀಡಲಿಲ್ಲ. ಅದು ಅವಳಿಗೆ ಅರ್ಥವಾಗುವುದಿಲ್ಲ. ಆ ಎಲ್ಲ ತ್ಯಾಗಗಳು ಇಲ್ಲಿ ಪ್ರತಿಬಿಂಬಿತವಾಗಿವೆ,’ ಎಂದಿದ್ದಾರೆ.

ಇದಕ್ಕೂ ಮೊದಲು ಗೆರಾಷ್ಚೆಂಕೊ ಶೇರ್ ಮಾಡಿದ ವಿಡಿಯೋದಲ್ಲಿ ಉಕ್ರೇನ್ ನ ಒಬ್ಬ ಯೋಧ ಹೂಗುಚ್ಛ, ಮುಗುಳುನಗೆ ಮತ್ತು ಕಣ್ಣೀರಿನೊಂದಿಗೆ ಮನೆಗೆ ಬಂದು ತನ್ನ ಮಗಳನ್ನು ಅಪ್ಪಿಕೊಳ್ಳುವುದು ಕಾಣುತ್ತದೆ.