ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆಗೆ ಕರೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

| Updated By: Rakesh Nayak Manchi

Updated on: Dec 13, 2022 | 7:07 AM

ಉಕ್ರೇನಿಯನ್ ಶಾಂತಿ ಸೂತ್ರದ ಅಂಶಗಳನ್ನು ನಾವು ಹೇಗೆ ಮತ್ತು ಯಾವಾಗ ಕಾರ್ಯಗತಗೊಳಿಸಬಹುದು ಎಂಬುದನ್ನು ನಿರ್ಧರಿಸಲು ವಿಶೇಷ ಶೃಂಗಸಭೆ 'ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆ'ಯನ್ನು ಕರೆಯಲು ನಾನು ಪ್ರಸ್ತಾಪಿಸುತ್ತೇನೆ ಎಂದು

ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆಗೆ ಕರೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
Image Credit source: FILE PHOTO
Follow us on

ಕೈವ್/ಉಕ್ರೇನ್: ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆ (Global Peace Formula Summit) ಕರೆಯಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರು ಮನವಿ ಮಾಡಿದ್ದಾರೆ. ಡಿಸೆಂಬರ್ 12 ರಂದು ಗ್ರೂಪ್ ಆಫ್ ಸೆವೆನ್ (ಜಿ7) ನಾಯಕರನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ಶಾಂತಿ ಸೂತ್ರದ ಅನುಷ್ಠಾನದಲ್ಲಿ ನಾಯಕತ್ವವನ್ನು ಪ್ರದರ್ಶಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.”ಉಕ್ರೇನಿಯನ್ ಶಾಂತಿ ಸೂತ್ರದ ಅಂಶಗಳನ್ನು ನಾವು ಹೇಗೆ ಮತ್ತು ಯಾವಾಗ ಕಾರ್ಯಗತಗೊಳಿಸಬಹುದು ಎಂಬುದನ್ನು ನಿರ್ಧರಿಸಲು ವಿಶೇಷ ಶೃಂಗಸಭೆ ‘ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆ’ಯನ್ನು ಕರೆಯಲು ನಾನು ಪ್ರಸ್ತಾಪಿಸುತ್ತೇನೆ. ಕೆಲವು ನಿರ್ದಿಷ್ಟ ಅಂಶಗಳ ಅನುಷ್ಠಾನದಲ್ಲಿ ನಿಮ್ಮ ನಾಯಕತ್ವವನ್ನು ತೋರಿಸಲು ನಾನು ನಿಮ್ಮನ್ನು ಮತ್ತು ಇತರ ಆತ್ಮಸಾಕ್ಷಿಯ ದೇಶಗಳನ್ನು ಆಹ್ವಾನಿಸುತ್ತೇನೆ” ಎಂದು ಝೆಲೆನ್ಸ್ಕಿ ತಮ್ಮ ಭಾಷಣದಲ್ಲಿ ಹೇಳಿದರು.

ವರ್ಚುವಲ್ ಕಾರ್ಯಕ್ರಮದ ಮೂಲಕ ಮಾತನಾಡಿದ ಅವರು, ಮುಂದಿನ ವರ್ಷ ಉಕ್ರೇನ್‌ಗೆ ಬೆಂಬಲವನ್ನು ಕಾಪಾಡಿಕೊಳ್ಳಲು ಜಿ 7 ನಾಯಕರಿಗೆ ಮನವಿ ಮಾಡಿದರು. ಆಧುನಿಕ ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಕ್ಷಿಪಣಿಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ಒದಗಿಸಲು G7 ನಾಯಕರಿಗೆ ಕರೆ ನೀಡಿದರು ಎಂದು ಉಕ್ರೇನಿಯನ್ ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾಬೂಲ್‌ನಲ್ಲಿ ಚೀನಾ ಮೂಲದವರ ಹೋಟೆಲ್‌ ಬಳಿ ಕೇಳಿ ಬಂತು ಭಾರೀ ಸ್ಫೋಟದ ಸದ್ದು, ಫೈರಿಂಗ್‌

ಮುಂದಿನ ವರ್ಷ G7 ರಾಷ್ಟ್ರಗಳು ಆರ್ಥಿಕ, ಶಕ್ತಿ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಉಕ್ರೇನಿಯನ್ ಅಧ್ಯಕ್ಷರು ಒತ್ತಿ ಹೇಳಿದರು. ಅನಿಲ ಕ್ಷೇತ್ರದಲ್ಲಿ ಉಕ್ರೇನ್‌ಗೆ ಸಹಾಯವನ್ನು ಹೆಚ್ಚಿಸಲು ಅವರು G7 ರಾಷ್ಟ್ರಗಳನ್ನು ಒತ್ತಾಯಿಸಿದರು. ಮೂರನೇ ಹಂತದಲ್ಲಿ ಝೆಲೆನ್ಸ್ಕಿ ಅವರು ಹೊಸ ರಾಜತಾಂತ್ರಿಕತೆಗೆ ಕರೆ ನೀಡಿದರು.

“ಈ ನಿರ್ದಿಷ್ಟ ಚಳಿಗಾಲದಲ್ಲಿ ನಮಗೆ ಹೆಚ್ಚುವರಿ ಬೆಂಬಲದ ಅಗತ್ಯವಿದೆ. ನಾವು ಸುಮಾರು ಎರಡು ಶತಕೋಟಿ ಘನ ಮೀಟರ್ ಅನಿಲದ ಪರಿಮಾಣದ ಬಗ್ಗೆ ಮಾತನಾಡುತ್ತಿದ್ದೇವೆ, ಅದನ್ನು ಹೆಚ್ಚುವರಿಯಾಗಿ ಸಂಗ್ರಹಿಸಬೇಕಾಗಿದೆ” ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಭಾಷಣದಲ್ಲಿ ಹೇಳಿದರು.

“ಶೀಘ್ರದಲ್ಲೇ ನಾವು ಶತಕೋಟಿ ಜನರು ಆಚರಿಸುವ ಕ್ರಿಸ್ಮಸ್, ಹೊಸವರ್ಷದ ರಜಾದಿನಗಳನ್ನು ಹೊಂದಲಿದ್ದೇವೆ. ಇದು ಸಾಮಾನ್ಯ ಜನರು ಶಾಂತಿಯ ಬಗ್ಗೆ ಯೋಚಿಸುವ ಸಮಯ, ಆಕ್ರಮಣಶೀಲತೆಯಲ್ಲ. ರಷ್ಯಾವು ಆಕ್ರಮಣಶೀಲತೆಯನ್ನು ತೊರೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುವಂತೆ ನಾನು ಸೂಚಿಸುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 am, Tue, 13 December 22