AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಇದಾಹೋ ಮಾಸ್ಕೋ ನಗರದ ಯೂನಿವರ್ಸಿಟಿ ಕ್ಯಾಂಪಸ್ ಹೊರಗೆ ನಾಲ್ವರನ್ನು ಕೊಂದ ಹಂತಕ ಪುನಃ ದಾಳಿ ನಡೆಸುವ ಭೀತಿ?

ನವೆಂಬರ್ 13 ರಂದು ಅಪರಿಚಿತ ಹಂತಕ ಕೇಲಿ ಗೊನ್ಕಾಲೆವೆಸ್ 21, ಮ್ಯಾಡ್ಡೀ ಮೊಗೆನ್ 21, ಜಾನಾ ಕರ್ನೋಡ್ಲೆ 20 ಮತ್ತು ಈಥನ್ ಚಾಪಿನ್ ಹೆಸರಿನ ವಿದ್ಯಾರ್ಥಿನಿಯರನ್ನು ಯೂನಿರ್ಸಿಟಿ ಕ್ಯಾಂಪಸ್ ಗೆ ದೂರದ ಫ್ಲ್ಯಾಟ್ ವೊಂದರಲ್ಲಿ ಗುಂಡಿಟ್ಟು ಹತ್ಯೆಗೈದಿದ್ದ.

ಅಮೆರಿಕ: ಇದಾಹೋ ಮಾಸ್ಕೋ ನಗರದ ಯೂನಿವರ್ಸಿಟಿ ಕ್ಯಾಂಪಸ್ ಹೊರಗೆ ನಾಲ್ವರನ್ನು ಕೊಂದ ಹಂತಕ ಪುನಃ ದಾಳಿ ನಡೆಸುವ ಭೀತಿ?
ಕೊಲೆಯಾದ ನಾಲ್ವರು ವಿದ್ಯಾರ್ಥಿಗಳು
TV9 Web
| Edited By: |

Updated on: Dec 13, 2022 | 8:57 AM

Share

ಅಮೆರಿಕದ ಇದಾಹೋ (Idaho) ರಾಜ್ಯದ ಮಾಸ್ಕೋ ಎಂಬಲ್ಲಿ ಅಪರಿಚಿತ ಹಂತಕನೊಬ್ಬ ನಾಲ್ವರು ಯೂನಿವರ್ಸಿಟಿ ವಿದ್ಯಾರ್ಥಿಗಳ ಸಾಮೂಹಿಕ ಹತ್ಯೆ ನಡೆಸಿ ಸರಿಯಾಗಿ ಒಂದು ತಿಂಗಳು ಕಳೆದರೂ ಅವನ ಪತ್ತೆ ಇನ್ನೂ ಆಗಿಲ್ಲ. ಬದಲಿಗೆ, ಪೊಲೀಸರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿರುವ (university campus) ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು, ಹಂತಕ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಹೇಳಿದ್ದಾರೆ. ಶರತ್ಕಾಲ (winter season) ಆರಂಭದೊಂದಿಗೆ ಇದಾಹೋ ಮತ್ತು ಮಾಸ್ಕೋಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುವುದರಿಂದ ಅಲ್ಲಿನ ನಿವಾಸಿಗಳು ಎಚ್ಚರದಿಂದಿರಬೇಕು ಪೊಲೀಸರು ಹೇಳಿದ್ದಾರೆ.

ನವೆಂಬರ್ 13 ರಂದು ಅಪರಿಚಿತ ಹಂತಕ ಕೇಲಿ ಗೊನ್ಕಾಲೆವೆಸ್ 21, ಮ್ಯಾಡ್ಡೀ ಮೊಗೆನ್ 21, ಜಾನಾ ಕರ್ನೋಡ್ಲೆ 20 ಮತ್ತು ಈಥನ್ ಚಾಪಿನ್ ಹೆಸರಿನ ವಿದ್ಯಾರ್ಥಿನಿಯರನ್ನು ಯೂನಿರ್ಸಿಟಿ ಕ್ಯಾಂಪಸ್ ಗೆ ದೂರದ ಫ್ಲ್ಯಾಟ್ ವೊಂದರಲ್ಲಿ ಗುಂಡಿಟ್ಟು ಹತ್ಯೆಗೈದಿದ್ದ.

ಈ ವಾರಾಂತ್ಯದಲ್ಲಿ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಕಡೆಗಳಿಂದ ಆಗಮಿಸಲಿರುವ ಜನರಿಗೆ ಭಧ್ರತೆ ಒದಗಿಸುವುದಾಗಿ ಮಾಸ್ಕೋ ಪೊಲೀಸ್ ಇಲಾಖೆ ಹೇಳಿದೆ.

‘ಈ ವಾರಾಂತ್ಯದಲ್ಲಿ ಬೇರೆ ಬೇರೆ ಊರುಗಳಿಂದ ಮಾಸ್ಕೋಗೆ ಬರುವವರ ಸಂಖ್ಯೆ ದ್ವಿಗುಣಗೊಳ್ಳಲಿದೆ. ಮಾಸ್ಕೋ ಪೊಲೀಸ್ ಇಲಾಖೆ ಮತ್ತು ಇದಾಹೋ ರಾಜ್ಯ ಪೊಲೀಸ್ ಯೂನಿವರ್ಸಿಟಿ ಕ್ಯಾಂಪಸ್ ಏರಿಯಾ ಮತ್ತು ಮಾಸ್ಕೋ ನಗರಕ್ಕೆ ಭದ್ರತೆ ಒದಗಿಸಲಿದ್ದಾರೆ,’ ಎಂದು ಮಾಸ್ಕೋ ಪೊಲೀಸ್ ಇಲಾಖೆ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

‘ಎಂದಿನಂತೆ ಈಗಲೂ ಜನ ಜಾಗರೂಕರಾಗಿರಬೇಕೆಂದು ನಾವು ಎಚ್ಚರಿಸುತ್ತಿದ್ದೇವೆ. ಗುಂಪುಗಳಲ್ಲಿ ಪ್ರಯಾಣಿಸಿ ಮತ್ತು ಪ್ರಯಾಣಿಸುವಾಗ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ,’ ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪೊಲೀಸರ ಎಚ್ಚರಿಕೆ ಯೂನಿವರ್ಸಿಟಿ ಸಮುದಾಯದಲ್ಲಿ ಅತಂಕವನ್ನು ಹೆಚ್ಚಿಸಿದೆ ಮತ್ತು ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಕೊಲೆಗಳು ನಡೆದು ಒಂದು ತಿಂಗಳು ಕಳೆದರೂ ಹಂತಕನ್ನು ಪತ್ತೆ ಹಚ್ಚದಿರುವುದಕ್ಕೆ ಪೊಲೀಸರ ಮೇಲೆ ವ್ಯಗ್ರರಾಗಿದ್ದಾರೆ.

ಯೂನಿವರ್ಸಿಟಿ ಮೂಲಗಳ ಪ್ರಕಾರ ಶೇಕಡ 25 ರಿಂದ ಶೇಕಡ 40 ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಹೊರಭಾಗದಲ್ಲಿ ವಾಸವಾಗಿದ್ದಾರೆ.

ಕೇಲಿ ಮತ್ತು ಸ್ಟೀವ್ ಗೊನ್ಕಾಲ್ವೆಸ್ ಯುವತಿಯರ ತಂದೆ, ಈ ಪ್ರಕರಣವನ್ನು ಭೇದಿಸಲು ಪೊಲೀಸರು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ನಿಜ, ಅದರೆ ಅವರಲ್ಲಿ ಅನುಭವದ ಕೊರತೆ ಇರುವುದರಿಂದ ಖಾಸಗಿ ಪತ್ತೇದಾರರ ಮೊರೆ ಹೋಗುವುದು ಅನಿವಾರ್ಯವಾಗಿದೆ, ಎಂದು ಹೇಳಿದ್ದಾರೆ.

‘ಅವರು ಅನನುಭವಿಗಳಾಗಿದ್ದಾರೆ-ಹಾಗಾಗಿ ನನ್ನ ಮಕ್ಕಳ ಪ್ರಕರಣದ ತನಿಖೆಯಲ್ಲಿ ಯಾರಿಂದಲೂ ಪ್ರಮಾದ ಜರುಗಬಾರದೆಂದು ಬಯಸುತ್ತೇನೆ,’ ಎಂದು ಹೇಳಿದ ಅವರು 2015 ರಲ್ಲಿ ಹತ್ಯಾ ಪ್ರಕರಣ ನಡೆದಾಗ ಪೊಲೀಸ್ ಪಡೆಯಲ್ಲಿ ಒಬ್ಬ ಹದಿಹರೆಯದ ಯುವಕನಿದ್ದ, ಎಂದಿದ್ದಾರೆ.

ಮಕ್ಕಳನ್ನು ಕಳೆದುಕೊಂಡು ಸಂಪೂರ್ಣವಾಗಿ ವಿಚಲಿತನಾಗಿರುವ ಯುವತಿಯರ ತಂದೆ, ಪ್ರಕರಣದಲ್ಲಿ ಕ್ಷಿಪ್ರ ಬೆಳವಣಿಗೆಗಳೇನಾದರೂ ಕಂಡರೆ ತಾನಾಡಿರುವ ಮಾತುಗಳಿಗೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್