ಶಿವಮೊಗ್ಗ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವು
ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹದ (Shivamogga central jail) ವಿಚಾರಣಾಧೀನ ಕೈದಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾನೆ. ಸೈಯದ್ ಅಬು ಸಲೀಂ (36) ಮೃತ ಆರೋಪಿ. ಚಿಕ್ಕಮಗಳೂರಿನ (Chikkamagaluru) ಜಿಲ್ಲೆಯ ಮೂಲದ ಆರೋಪಿ ಸೈಯದ್ ಅಬು ಸಲೀಂ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದನು. ಹೃದಯಾಘಾತ ಹಿನ್ನಲೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಡಿ.12) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಹೈಟೆನ್ಷನ್ ವಿದ್ಯುತ್ ಕೇಬಲ್ ತಗುಲಿ ವ್ಯಕ್ತಿ ಸಾವು
ಬಳ್ಳಾರಿ: ಹೈಟೆನ್ಷನ್ ವಿದ್ಯುತ್ ಕೇಬಲ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸಂಡೂರು ತಾಲೂಕಿನ ಜಿಂದಾಲ್ ಕಾರ್ಖಾನೆಯ ಸ್ಟೀಲ್ಸ್ ವರ್ಕ್ ಶಾಪ್ನ 2ನೇ ಗೇಟ್ ಬಳಿ ನಡೆದಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೇಗಳ ಕಣವಿ ಗ್ರಾಮದ ಯುವಕ ತಿಪ್ಪೇಸ್ವಾಮಿ (25) ಮೃತ ದುರ್ದೈವಿ. ಲಾರಿ ಕ್ಯಾಬೀನ್ ಮೇಲಿದ್ದ ಟೈಯರ್ ಕೆಳೆಗಿಸಲೆಂದು ತಿಪ್ಪೇಸ್ವಾಮಿ ಲಾರಿ ಮೇಲೆ ಹತ್ತಿದ್ದಾನೆ. ಈ ವೇಳೆ ಲಾರಿ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: 3 ತಿಂಗಳು ವಿದ್ಯಾರ್ಥಿಯಂತೆ ನಟಿಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣ ಭೇದಿಸಿದ ಲೇಡಿ ಕಾನ್ಸ್ಟೇಬಲ್
ಇನ್ನೂ ಯುವಕ ತಿಪ್ಪೇಸ್ವಾಮಿ MA ಮುಗಿಸಿ BEd ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಿದ್ದನು. ವ್ಯಾಸಂಗ ಖರ್ಚು ನಿಭಾಯಿಸಲು ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು. ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತ್ನಿಯನ್ನು ಬಚಾವ್ ಮಾಡಲು ಹೋಗಿ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಶಿವಮೊಗ್ಗ: ವಿದ್ಯುತ್ ತಂತಿ ತುಳಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನಂಜವಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಶೇಷಗಿರಿ (45) ಮೃತ ರೈತ. ಇಂದು (ಡಿ.12) ಶೇಷಗಿರಿ ಪತ್ನಿ ಹೂ ಕೀಳಲು ಹೋದ ವೇಳೆ ಕರೆಂಟ್ ಶಾಕ್ ಹೊಡೆದಿದೆ.
ಇದನ್ನು ಕಂಡ ಶೇಷಗಿರಿ ಪತ್ನಿಯನ್ನು ಬಚಾವ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಗಮನಿಸದೆ ವಿದ್ಯುತ್ ತಂತಿ ತುಳಿದ ಪರಿಣಾಮ ಶೇಷಗಿರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಣ ನಡೆದು ಮೂರೇ ಗಂಟೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು
ದಾವಣಗೆರೆ: ದಾವಣಗೆರೆ ಬಡಾವಣೆ ಠಾಣೆ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣ ನಡೆದು ಮೂರೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ದಾವಣಗೆರೆ ಶಾಂತಿ ನಗರದ ನಿವಾಸಿ ಕಿರಣ್ ನಾಯ್ಕ (23) ಬಂಧಿತ ಆರೋಪಿ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದವನ ಮೇಲೆ ಕುಟುಂಬಸ್ಥರ ಹಲ್ಲೆ, ವೃದ್ಧ ಸಾವು
ಡಿಸೆಂಬರ್ 11 ರಂದು ದಾವಣಗೆರೆ ನಗರದ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ರೇಶ್ಮಾ ಪಿಎಸ್ ಮತ್ತು ಕಾರ್ತಿಕ ಜೋಡಿಯ ಮದುವೆ ಇತ್ತು. ಈ ಸಂಬಂಧ ಕುಟುಂಬಸ್ಥರು ಹಿಂದಿನ ದಿನವೇ ಅಂದರೆ ಡಿ.10 ರಂದು ರಾತ್ರಿ ಕಲ್ಯಾಣ ಮಂಟಪ್ಪದಲ್ಲಿ ತಂಗಿದ್ದರು. ಇದರಂತೆ ಸಬಂಧಿಗಳಾದ ಬೆಂಗಳೂರಿನಿಂದ ವೆಂಕಟೇಶ್ ನಾಯ್ಕ ದಂಪತಿಗಳು ಕೂಡ ಬಂದಿದ್ದರು.
ರಾತ್ರಿ ಕಲ್ಯಾಣ ಮಂಟಪದಲ್ಲಿ ಎಲ್ಲರು ನಿದ್ದೆಗೆ ಜಾರಿದ್ದರು. ಈ ಸಮಯದಲ್ಲಿ ಕಳ್ಳ ತನ್ನ ಕೈ ಚಳಕ ತೋರಿಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ವೆಂಕಟೇಶ್ ನಾಯ್ಕ ದಂಪತಿಗಳ 20 ಗ್ರಾಂ ತೂಕದ ಎರಡು ಚಿನ್ನದ ಸರ,13 ಗ್ರಾಂ ಜುಮುಕಿ, 6 ಗ್ರಾಂ ಉಂಗುರ ಕಳ್ಳತನ ಮಾಡಿದ್ದಾನೆ.
ಕೆಲವು ಗಂಟೆ ನಂತರ ದಂಪತಿಗೆ ವಿಷಯ ತಿಳಿದಿದೆ. ಕೂಡಲೆ ಪೊಲೀಸರಿಗೆ ದೂರು ನೀಡಿದ್ದಾರೆ. ದಂಪತಿ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಮೂರೇ ಗಂಟೆಯಲ್ಲಿ ಬೇಧಿಸಿ ಆರೋಪಿಯಿಂದ 2.38 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಶಾಲೆಯ ಅಡುಗೆ ಸಾಮಾಗ್ರಿ ಕದ್ದ ಖದೀಮರು
ಗದಗ: ಶಾಲೆಯ ಅಡುಗೆ ಕೋಣೆಯ ಬೀಗ ಮುರಿದು ಖದೀಮರು ಅಡುಗೆ ಸಾಮಾಗ್ರಿ ಕಳ್ಳತನ ಮಾಡಿರುವ ಘಟನೆ ಗದಗ ತಾಲೂಕಿನ ತಾಲೂಕಿನ ಹೊಂಬಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೂರು ಅಕ್ಕಿ ಪಾಕೆಟ್, ಒಂದು ಅಡುಗೆ ಸಿಲಿಂಡರ್, ಅಡುಗೆ ಎಣ್ಣೆ ಪಾಕೆಟ್ ಕಳ್ಳತನವಾಗಿದೆ. ಸ್ಥಳಕ್ಕೆ ಗದಗ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Mon, 12 December 22