AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಹತ್ಯೆ ಮಾದರಿಯಲ್ಲಿ ತಂದೆಯನ್ನೇ ಕೊಂದು ದೇಹವನ್ನು 30 ತುಂಡು ಮಾಡಿ ಬೋರ್​ವೆಲ್​ಗೆ ಹಾಕಿದ ಮಗ!

ದೆಹಲಿಯಲ್ಲಿ ಶ್ರದ್ಧಾಳ ಹತ್ಯೆ ನಂತರ ಅದೇ ರಾಜ್ಯದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿತ್ತು. ಇದೀಗ ಕರ್ನಾಟಕದ ಬಾಗಲಕೋಟೆಯಲ್ಲಿ ನಡೆದಿದೆ. ತಂದೆಯನ್ನು ಕೊಂದು ದೇಹವನ್ನು ತುಂಡು ಮಾಡಿ ಬೋರ್​ವೆಲ್​ಗೆ ಹಾಕಿದ ಕೃತ್ಯ ಬೆಳಕಿಗೆ ಬಂದಿದೆ.

ದೆಹಲಿ ಹತ್ಯೆ ಮಾದರಿಯಲ್ಲಿ ತಂದೆಯನ್ನೇ ಕೊಂದು ದೇಹವನ್ನು 30 ತುಂಡು ಮಾಡಿ ಬೋರ್​ವೆಲ್​ಗೆ ಹಾಕಿದ ಮಗ!
ಕೊಲೆಯಾದ ಪರಶುರಾಮ ಮತ್ತು ಕೊಲೆ ಆರೋಪಿ ವಿಠಲ ಕುಳಲಿ
TV9 Web
| Edited By: |

Updated on:Dec 13, 2022 | 3:14 PM

Share

ಬಾಗಲಕೋಟೆ: ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ತನ್ನ ಲೀವ್ ಇನ್ ಪ್ರಿಯತೆ ಶ್ರದ್ಧಾ ವಾಕರ್​ಳನ್ನು ಕೊಂದು (Shraddha Walkar Murder) ದೇಹವನ್ನು ತುಂಡು ತಂಡು ಮಾಡಿದ ನಂತರ ದೇಶದಲ್ಲಿ ಇಂತಹದ್ದೇ ಪ್ರಕರಣಗಳು ನಡೆಯಲು ಆರಂಭಿವಿಸೆ. ಶ್ರದ್ಧಾ ಕೊಲೆ ನಂತರ ದೆಹಲಿಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿತ್ತು. ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗ ಸೇರಿಕೊಂಡು ಪತಿಯನ್ನು ಕೊಂದು ಫ್ರಿಡ್ಜ್​ನಲ್ಲಿ ಇಟ್ಟಿದ್ದರು. ಇಂತಹದ್ದೇ ಒಂದು ಘಟನೆ ಕರ್ನಾಟಕದಲ್ಲೂ ನಡೆದಿದೆ. ಬಾಗಲಕೋಟೆ (Bagalakote) ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಪಾಪಿ ಮಗನೊಬ್ಬ ತನ್ನ ಜನನಕ್ಕೆ ಕಾರಣವಾಗಿದ್ದ ತಂದೆಯನ್ನೇ ಕೊಂದು (Son kills father) ದೇಹವನ್ನು ತುಂಡು ತುಂಡು ಮಾಡಿದ್ದಾನೆ.

ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರೋಡ್​ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ. ಈ ಘಟನೆ ಕಳೆದ ಮಂಗಳವಾರ ರಾತ್ರಿ 12ಗಂಟೆ ಸುಮಾರಿಗೆ ನಡೆದಿದೆ. ಕುಡಿದು ಬಂದ ತಂದೆ ಪರಶುರಾಮ ಕುಳಲಿ, ಕಬ್ಬಿಗೆ ಏಕೆ ನೀರು ಹಾಯಿಸಲು ಹೋಗಿಲ್ಲ ಎಂದು ಮಗ ವಿಠ್ಠಲ ಕುಳಲಿ ಜೊತೆ ಜಗಳ ತೆಗೆದಿದ್ದ. ಈ ವೇಳೆ ಇಬ್ಬರ ಮಧ್ಯೆ ನಡೆದ ಜಗಳದ ವೇಳೆ ತಂದೆಯೇ ಮಗನಿಗೆ ಹೊಡೆಯಲು ಕೊಡಲಿ ಎತ್ತಿದ್ದ. ತಾಳ್ಮೆ ಕಳೆದುಕೊಂಡ ಮಗ ರಾಡ್​​ನಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಪರುಶುರಾಮ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅಮೆರಿಕ: ಇದಾಹೋ ಮಾಸ್ಕೋ ನಗರದ ಯೂನಿವರ್ಸಿಟಿ ಕ್ಯಾಂಪಸ್ ಹೊರಗೆ ನಾಲ್ವರನ್ನು ಕೊಂದ ಹಂತಕ ಪುನಃ ದಾಳಿ ನಡೆಸುವ ಭೀತಿ?

ತಂದೆಯನ್ನು ಕೊಂದ ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ಯುತ್ತಾನೆ. ತಂದೆಯ ಮೃತದೇಹವನ್ನು ಕೊಳವೆ ಬಾವಿಗೆ ಹಾಕುವಾಗ ದೇಹ ಅದರೊಳಗೆ ಹೋಗದಿದ್ದಾಗ ಮಗ ವಿಠಲ, ದೇಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್​ವೆಲ್​ಗೆ ಹಾಕಿ ಮನೆಗೆ ವಾಪಸ್ ಆಗಿದ್ದು, ಸದ್ಯ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ.

Sun kills father in bagalakote

ಬೋರ್​ವೆಲ್​ನಿಂದ ಮೃತದೇಹ ಹೊರತೆಗೆಯುತ್ತಿರುವುದು ಮತ್ತು ಪರಶುರಾಮರ ದೇಹದ ತುಂಡು

ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ತಂದೆಯನ್ನೇ ಮಧ್ಯರಾತ್ರಿಯಲ್ಲಿ ಕೊಂದು ಸೈಲೆಂಟಾಗಿ ಬೋರ್​ವೆಲ್​ಗೆ ಹಾಕಿದ್ದ ಆರೋಪಿ ವಿಠಲ, ಘಟನೆಯ ಮೂರು ದಿನಗಳ ನಂತರ ವಿಚಾರವನ್ನು ಮನೆಯಲ್ಲಿ ಬಾಯಿಬಿಟ್ಟಿದ್ದಾನೆ. ಇದರಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುಧೋಳ ಠಾಣೆ ಪೊಲೀಸರು, ಸ್ಥಳಕ್ಕೆ ಜೆಸಿಬಿಯೊಂದಿಗೆ ಬಂದು ಕೊಳವೆಬಾವಿ ಅಗೆದು ಶವ ಹೊರ ತೆಗೆದಿದ್ದಾರೆ. ಸದ್ಯ ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಗೆ ಶರಣಾಗಲು ಒಪ್ಪದ ಆರೋಪಿ ವಿಠ್ಠಲ

ಹೊಲದಲ್ಲಿ ಏನೇ ಕೆಲಸ ಮಾಡಿದರೂ ಪರಶುರಾಮ ಜಗಳಕ್ಕೆ ನಿಲ್ಲುತ್ತಿದ್ದ. ಸದಾ ಹೊಡಿವುದು, ಬಡಿಯುವುದು ಮಾಡುತ್ತಿದ್ದ. ಇದರಿಂದ ಬೇಸತ್ತು ನಾವು ಹೊಲ ಬಿಟ್ಟು ಬೇರೆ ಕಡೆಗೆ ಹೋಗಿದ್ದೆವು ಎಂದು ಕೊಲೆಯಾದ ಪರಶುರಾಮ್ ಪತ್ನಿ ಸರಸ್ವತಿ ಹಾಗೂ ಹಿರಿಯ ಪುತ್ರ ಆನಂದ ಹೇಳಿಕೆ ನೀಡಿದ್ದಾರೆ. ಕೊಲೆ ವಿಚಾರ ತಿಳಿಸುತ್ತಿದ್ದಂತೆ ಪೊಲೀಸರಿಗೆ ತಿಳಿಸಲು ತಾಯಿ-ಮಗ ಪಟ್ಟು ಹಿಡಿದ್ದಾರೆ. ಆರಂಭದಲ್ಲಿ ಪೊಲೀಸರಿಗೆ ಶರಣಾಗಲು ವಿಠಲ ಒಪ್ಪದಿದ್ದಾಗ ತಾಯಿ-ಹಿರಿಮಗ ಪಟ್ಟು ಹಿಡಿದ ಗಲಾಟೆ ಮಾಡಿದ್ದಾರೆ. ಬಳಿಕ ಮುಧೋಳ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ವಿಠ್ಠಲ ಜತೆ ಆತನ ಸ್ನೇಹಿತನೂ ಭಾಗಿಯಾಗಿರುವ ಶಂಕೆ

ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್, ಕೊಲೆ ಆರೋಪದಡಿ ವಿಠ್ಠಲ ಕುಳಲಿನನ್ನು ಬಂಧಿಸಲಾಗಿದೆ. ತನಿಖೆ ವೇಳೆ ವಿಠ್ಠಲನ ಜತೆ ಆತನ ಸ್ನೇಹಿತನೂ ಭಾಗಿಯಾಗಿರುವ ಮಾಹಿತಿ ಇದೆ. ಶೀಘ್ರದಲ್ಲೇ ಮತ್ತೊಬ್ಬ ಆರೋಪಿಯನ್ನು ಬಂಧಿಸುತ್ತೇವೆ ಎಂದಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Tue, 13 December 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!