Ukraine war: ಕಾಖೋವ್ಕಾದಲ್ಲಿರುವ ಅಣೆಕಟ್ಟು ಸ್ಫೋಟಗೊಂಡು ಪ್ರವಾಹ; ಪರಸ್ಪರ ಆರೋಪ ಹೊರಿಸಿದ ರಷ್ಯಾ, ಉಕ್ರೇನ್

| Updated By: ರಶ್ಮಿ ಕಲ್ಲಕಟ್ಟ

Updated on: Jun 06, 2023 | 3:52 PM

ನಿಪ್ರೊದ ಪಶ್ಚಿಮ ದಂಡೆಯಲ್ಲಿರುವ ಹತ್ತು ಹಳ್ಳಿಗಳು ಮತ್ತು ಖರ್ಸನ್ ನಗರದ ಒಂದು ಭಾಗವು ಪ್ರವಾಹದ ಅಪಾಯವನ್ನು ಎದುರಿಸುತ್ತಿದ್ದು, ಜನರನ್ನು ಸ್ಥಳಾಂತರಿಸಲು ಸಿದ್ಧರಾಗುವಂತೆ ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೊಗಳು ಹರಿದಾಡುತ್ತಿದ್ದು ಅಣೆಕಟ್ಟಿನ ಅವಶೇಷಗಳ ಮೂಲಕ ನೀರು ಉಕ್ಕಿ ಹರಿಯುತ್ತಿರುವುದನ್ನು ಇದರಲ್ಲಿ ಕಾಣಬಹುದು

Ukraine war: ಕಾಖೋವ್ಕಾದಲ್ಲಿರುವ ಅಣೆಕಟ್ಟು ಸ್ಫೋಟಗೊಂಡು ಪ್ರವಾಹ; ಪರಸ್ಪರ ಆರೋಪ ಹೊರಿಸಿದ ರಷ್ಯಾ, ಉಕ್ರೇನ್
ಉಕ್ರೇನ್ ನ ಅಣೆಕಟ್ಟು ಒಡೆದು ಪ್ರವಾಹ
Image Credit source: Twitter
Follow us on

ರಷ್ಯಾ-ಉಕ್ರೇನ್ ಸಂಘರ್ಷದ(Russia-Ukraine Crisis) ನಡುವೆ ದಕ್ಷಿಣ ಉಕ್ರೇನ್‌ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ (Kakhovka hydropower plant)ಅಣೆಕಟ್ಟು ಸ್ಫೋಟಗೊಂಡಿದೆ. ಎರಡೂ ದೇಶಗಳು ಪರಸ್ಪರ ಆರೋಪ ಮಾಡಿದ್ದ ಅಣೆಕಟ್ಟುಸ್ಫೋಟಗೊಂಡಿರುವುದರಿಂದ ಪ್ರವಾಹವುಂಟಾಗಿದೆ. ಉಕ್ರೇನ್‌ನ ಅಧ್ಯಕ್ಷೀಯ ಆಡಳಿತದ ಮುಖ್ಯಸ್ಥರು ಮಂಗಳವಾರ ಈ ಸ್ಫೋಟವನ್ನು ರಷ್ಯಾದ ಪಡೆಗಳು ಮಾಡಿದ ಪರಿಸರ ಹತ್ಯೆ ಎಂದು ಹೇಳಿದ್ದಾರೆ. ಅದೇ ವೇಳೆ ಉಕ್ರೇನ್ ಹೊಣೆ ಎಂದು ರಷ್ಯಾ (Russia) ಆರೋಪಿಸಿದೆ. ಮುಂದಿನ ಐದು ಗಂಟೆಗಳಲ್ಲಿ ನೀರು ನಿರ್ಣಾಯಕ ಮಟ್ಟವನ್ನು ತಲುಪುತ್ತದೆ  ಎಂದು ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಪ್ರೊಕುಡಿನ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ವಿಡಿಯೊದಲ್ಲಿ ತಿಳಿಸಿದ್ದಾರೆ.

ನಿಪ್ರೊದ ಪಶ್ಚಿಮ ದಂಡೆಯಲ್ಲಿರುವ ಹತ್ತು ಹಳ್ಳಿಗಳು ಮತ್ತು ಖರ್ಸನ್ ನಗರದ ಒಂದು ಭಾಗವು ಪ್ರವಾಹದ ಅಪಾಯವನ್ನು ಎದುರಿಸುತ್ತಿದ್ದು, ಜನರನ್ನು ಸ್ಥಳಾಂತರಿಸಲು ಸಿದ್ಧರಾಗುವಂತೆ ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೊಗಳು ಹರಿದಾಡುತ್ತಿದ್ದು ಅಣೆಕಟ್ಟಿನ ಅವಶೇಷಗಳ ಮೂಲಕ ನೀರು ಉಕ್ಕಿ ಹರಿಯುತ್ತಿರುವುದನ್ನು ಇದರಲ್ಲಿ ಕಾಣಬಹುದು.


ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯನ್ನು  ತುರ್ತು ಸಭೆಗೆ ಕರೆದಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.


ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ಪ್ರಾರಂಭದಲ್ಲಿ ವಶಪಡಿಸಿಕೊಂಡ ಕಾಖೋವ್ಕಾ ಅಣೆಕಟ್ಟು, ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ನೀರನ್ನು ಪೂರೈಸುತ್ತದೆ, ಇದನ್ನು ಮಾಸ್ಕೋ 2014 ರಲ್ಲಿ ಸ್ವಾಧೀನಪಡಿಸಿಕೊಂಡಿತು.

ಇದನ್ನೂ ಓದಿ: Viral Video: ಯುದ್ಧದ ನಡುವೆಯು ನಾಟು ನಾಟು ಹಾಡಿಗೆ ಸಖತ್​​ ಡ್ಯಾನ್ಸ್​​​ ಮಾಡಿದ ಉಕ್ರೇನ್ ಸೈನಿಕರು

ಈ ಜಲಾಶಯವು ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ನೀರನ್ನು ಪೂರೈಸುತ್ತದೆ. ಅಣೆಕಟ್ಟು ಸ್ಫೋಟದಿಂದಾಗಿ ಸ್ಥಾವರದಲ್ಲಿ ತಕ್ಷಣದ ಪರಮಾಣು ಸುರಕ್ಷತೆಯ ಅಪಾಯವಿಲ್ಲ. ಆದರೆ ಅದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಹೇಳಿದೆ.

ಸೋವಿಯತ್ ಯುಗದಲ್ಲಿ 1956 ರಲ್ಲಿ ನಿಪ್ರೊ ನದಿಯ ಮೇಲೆ ನಿರ್ಮಿಸಲಾದ ಈ ಅಣೆಕಟ್ಟು ಭಾಗಶಃ ಕಾಂಕ್ರೀಟ್ ಮತ್ತು ಭಾಗಶಃ ಮಣ್ಣಿನಿಂದ ಮಾಡಲ್ಪಟ್ಟಿದೆ. ಇದು ಉಕ್ರೇನ್‌ನಲ್ಲಿ ಅತೀ ದೊಡ್ಡ ಅಣೆಕಟ್ಟುಗಳಲ್ಲೊಂದಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 6 June 23