
ಉಕ್ರೇನ್, ಆಗಸ್ಟ್ 26: ರಷ್ಯಾ-ಉಕ್ರೇನ್(Russia-Ukraine) ಯುದ್ಧವನ್ನು ನಾನೇ ಕೊನೆಗೊಳಿಸುತ್ತೇನೆ ಈಗಾಗಲೇ ಹಲವು ದೇಶಗಳ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಟ್ರಂಪ್ ಒಂದು ಕಡೆಯಾದರೆ, ಎಲ್ಲೂ ಏನೂ ಹೆಚ್ಚಿನ ಮಾತಾಡದೆ ಎಲ್ಲೋ ಮರೆಯಲ್ಲಿ ನಿಂತು ಎಲ್ಲಾ ದೇಶಗಳು ಶಾಂತಿಯಿಂದಿರಬೇಕು ಎಂದು ಬಯಸುತ್ತಿರುವ ಪ್ರಧಾನಿ ಮೋದಿ ಮತ್ತೊಂದು ಕಡೆ. ಮೂರು ವರ್ಷಗಳಿಗಂತಲೂ ಹೆಚ್ಚು ಕಾಲ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಮಾರಕವಾಗುತ್ತಿದೆ.
ಆದಾಗ್ಯೂ, ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ದೇಶಗಳು ಈ ಸಂಘರ್ಷವನ್ನು ನಿಲ್ಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಈ ಸಂಬಂಧ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಶಾಂತಿ ಮತ್ತು ಸಂವಾದಕ್ಕಾಗಿ ಭಾರತ ನೀಡುವ ಬೆಂಬಲ ಶ್ಲಾಘನೀಯ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಸಂದೇಶದಲ್ಲಿ, ಇಂದು ಜಗತ್ತು ಈ ಭಯಾನಕ ಯುದ್ಧವನ್ನು ಶಾಶ್ವತವಾಗಿ ಶಾಂತಿಯೊಂದಿಗೆ ಕೊನೆಗೊಳಿಸಲು ಪ್ರಯತ್ನಿಸುತ್ತಿರುವಾಗ, ನಾವು ಭಾರತದ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ರಾಜತಾಂತ್ರಿಕತೆಯನ್ನು ಬಲಪಡಿಸುವ ಪ್ರತಿಯೊಂದು ನಿರ್ಧಾರವು ಯುರೋಪ್ ಮಾತ್ರವಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ಭದ್ರತೆಯನ್ನು ಸುಧಾರಿಸುತ್ತದೆ.
ಝೆಲೆನ್ಸ್ಕಿ ಪೋಸ್ಟ್
Thank you, Prime Minister @narendramodi, for the warm greetings on Ukraine’s Independence Day. We appreciate India’s dedication to peace and dialogue. Now, as the entire world strives to end this horrible war with dignity and lasting peace, we count on India’s contribution. Every… pic.twitter.com/FtwkXUhtEH
— Volodymyr Zelenskyy / Володимир Зеленський (@ZelenskyyUa) August 25, 2025
ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಪ್ರಧಾನಿ ಮೋದಿ ಕಳುಹಿಸಿದ ಪತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ಭಾರತದ ಸ್ವಾತಂತ್ರ್ಯ ದಿನದಂದು ತಮಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು ಮತ್ತು ಉಕ್ರೇನ್ ಜನತೆಗೆ ಸ್ವಾತಂತ್ರ್ಯ ದಿನದ ಶುಭ ಹಾರೈಸಿದರು.
ಮತ್ತಷ್ಟು ಓದಿ: ರಷ್ಯಾ – ಉಕ್ರೇನ್ ಮಧ್ಯೆ ಕದನ ವಿರಾಮ ಅಲ್ಲ, ಶೀಘ್ರದಲ್ಲೇ ಶಾಶ್ವತ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ!
ಭಾರತವು ಯಾವಾಗಲೂ ಶಾಂತಿಯ ಪರವಾಗಿ ನಿಂತಿದೆ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಇಬ್ಬರೂ ನಾಯಕರು ಪರಸ್ಪರ ಆರೋಗ್ಯ ಮತ್ತು ಎರಡೂ ದೇಶಗಳ ಜನರ ಸಮೃದ್ಧಿಯನ್ನು ಹಾರೈಸಿದರು ಮತ್ತು ಭವಿಷ್ಯದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾತನಾಡಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ