ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್

ಬ್ರೆಜಿಲ್‌ನಲ್ಲಿ ಮೊಬೈಲ್ ಕಳ್ಳತನಕ್ಕಿಳಿದಿದ್ದ ಸ್ಕೂಬಿ ಡೂ ಪಾತ್ರಧಾರಿಗಳ ವೇಷದಲ್ಲಿದ್ದ ಕಳ್ಳರನ್ನು, ಸ್ಕ್ವಿಡ್ ಗೇಮ್ ವೇಷದಲ್ಲಿದ್ದ ಪೊಲೀಸ್ ಅಧಿಕಾರಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಕಳ್ಳರು ಹಬ್ಬಗಳ ಜನಸಂದಣಿಯನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು. ಬಂಧಿತರಿಂದ ಅನೇಕ ಫೋನ್‌ಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಿಂದಿರುಗಿಸಲಾಯಿತು. ವಿವಿಧ ವೇಷಗಳಲ್ಲಿ ಪೊಲೀಸರು ಕಳ್ಳರನ್ನು ಹಿಡಿಯುವ ಇಂತಹ ವಿಶೇಷ ಕಾರ್ಯಾಚರಣೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ.

ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್
ಪೊಲೀಸರು

Updated on: Feb 18, 2026 | 11:34 AM

ಬ್ರೆಜಿಲ್, ಫೆಬ್ರವರಿ 18: ಕಾರ್ಟೂನ್(Cartoon) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಸ್ಕೂಬಿ ಡೂ ಕಾರ್ಟೂನ್ ಕೂಡ ಬಹುತೇಕರಿಗೆ ಇಷ್ಟ ಅದರಲ್ಲಿ ಬರುವ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರವಂತೂ ಇಷ್ಟಪಡದವರಿಲ್ಲ. ಆದರೆ ಈ ಪಾತ್ರವನ್ನು ಜನರು ಕಳ್ಳತನಕ್ಕೆ ಬಳಸಿಕೊಂಡಿರುವುದು ವಿಶಾದದ ಸಂಗತಿ.

ಈ ಪಾತ್ರಧಾರಿಗಳ ವೇಷತೊಟ್ಟು ಕಳ್ಳರು ಮೊಬೈಲ್ ಕಳ್ಳತನಕ್ಕಿಳಿದಿದ್ದರು. ಅಂಡರ್ ಕವರ್ ಪೊಲೀಸರು ಇವರ ಮೇಲೆ ನಿಗಾ ಇಟ್ಟಿದ್ದರು. ಅಂತೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ಇವರನ್ನು ಹಿಡಿಯಲು ನೆಟ್​ಫ್ಲಿಕ್ಸ್​​ನಲ್ಲಿ ಬಂದಿದ್ದ ಫೇಮಸ್ ಸೀರೀಸ್ ಸ್ಕ್ವಿಡ್ ಗೇಮ್​​ನಲ್ಲಿ ಬರುವ ಪಾತ್ರಧಾರಿಯಂತೆ ವೇಷ ತೊಟ್ಟು ಹಿಡಿದಿರುವುದೇ ವಿಶೇಷ. ಈ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ.

ನ್ಯೂಯಾರ್ಕ್ ಪೋಸ್ಟ್​ ವರದಿ ಪ್ರಕಾರ, ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ಈ ಕಳ್ಳರಲ್ಲಿ ಒಬ್ಬೊಬ್ಬರ ಬಳಿ ಕನಿಷ್ಠವೆಂದರೂ ಎಂಟು ಫೋನ್​ಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಸಾವೊ ಪಾಲೊ ಪೊಲೀಸ್ ಠಾಣೆಗೆ ಕಳ್ಳರನ್ನು ಕರೆದೊಯ್ಯುವ ಮೊದಲು ಪೊಲೀಸ್ ಅಧಿಕಾರಿಗಳು ಸಾಧನಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: Nobuyo Oyama: ಡೋರೆಮಾನ್ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ಮಹಿಳೆ ನಿಧನ

ಪೊಲೀಸರ ಪ್ರಕಾರ, ಕಳ್ಳತನ ಮತ್ತು ದರೋಡೆಗಳಲ್ಲಿ ಪರಿಣತಿ ಹೊಂದಿರುವ ಗ್ಯಾಂಗ್‌ಗಳು ವಿಶೇಷ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಜನಸಂದಣಿಯನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ, ಪವರ್ ರೇಂಜರ್‌ಗಳಂತೆ ವೇಷ ಧರಿಸಿದ ಪೊಲೀಸರು ಸಾವೊ ಪಾಲೊದ ಇಬಿರಾಪುಯೆರಾ ಪಾರ್ಕ್ ಬಳಿ ಕಳ್ಳನನ್ನು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರು.

ಅದೇ ರೀತಿ, ಪ್ರೇಮಿಗಳ ದಿನದಂದು, ಪೆರುವಿನ ರಾಜಧಾನಿ ಲಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಪಿಬರಾ ವೇಷ ಧರಿಸಿ ಮಾದಕವಸ್ತು ದಾಳಿ ನಡೆಸಿ 1,700 ಪ್ಯಾಕೆಟ್ ಕೊಕೇನ್ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us