ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್ ಹತ್ಯೆಗೆ ಇರಾನ್ ಏಜೆಂಟ್ ಸಂಚು!

ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಇರಾನಿನ ವ್ಯಕ್ತಿಯ ವಿರುದ್ಧ ಯುಎಸ್ ಆರೋಪ ಹೊರಿಸಿದೆ. 51 ವರ್ಷದ ಶಕೇರಿ ಬಾಲ್ಯದಲ್ಲಿ ಅಮೆರಿಕಕ್ಕೆ ವಲಸೆ ಬಂದರು. ದರೋಡೆ ಅಪರಾಧದ ನಂತರ 2008ರಲ್ಲಿ ಅವರನ್ನು ಗಡಿಪಾರು ಮಾಡಲಾಯಿತು. ಶಕೇರಿ ತಲೆಮರೆಸಿಕೊಂಡಿದ್ದು, ಇರಾನ್‌ನಲ್ಲಿದ್ದಾನೆ ಎನ್ನಲಾಗಿದೆ.

ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್ ಹತ್ಯೆಗೆ ಇರಾನ್ ಏಜೆಂಟ್ ಸಂಚು!
ಡೊನಾಲ್ಡ್ ಟ್ರಂಪ್
Follow us
|

Updated on: Nov 09, 2024 | 7:08 PM

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷೀಯ ಚುನಾವಣೆಗೂ ಮುನ್ನ ಹತ್ಯೆ ಮಾಡಲು ಇರಾನ್‌ ಸಂಚು ರೂಪಿಸಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಸಂಚನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಷನ್ (ಎಫ್​ಬಿಐ) ವಿಫಲಗೊಳಿಸಿತ್ತು.

ಟ್ರಂಪ್ ಹತ್ಯೆಯ ಸಂಚಿಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಇರಾನಿನ ವ್ಯಕ್ತಿಯೊಬ್ಬರ ಮೇಲೆ ಆರೋಪ ಹೊರಿಸಿದೆ ಎಂದು ನ್ಯಾಯಾಂಗ ಇಲಾಖೆ ಇಂದು ತಿಳಿಸಿದೆ. ಆರೋಪಿ ಫರ್ಹಾದ್ ಶಕೇರಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಅಕ್ಟೋಬರ್ 7ರಂದು ಟ್ರಂಪ್​ರನ್ನು ಕೊಲ್ಲುವ ಕಂಟ್ರಾಕ್ಟ್​ ನೀಡಲಾಗಿತ್ತು” ಎಂದು ಕಾನೂನು ಜಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಶಕೇರಿ ಓರ್ವ ಕಂಟ್ರಾಕ್ಟ್​ ಕಿಲ್ಲರ್ ಆಗಿದ್ದು, ಇರಾನ್​ನಲ್ಲಿ ವಾಸವಾಗಿದ್ದಾರೆ. ಟ್ರಂಪ್ ಅವರ ಚಲನವಲನಗಳನ್ನು ಗಮನಿಸುತ್ತಿರಬೇಕು, ಅವಕಾಶ ಸಿಕ್ಕ ತಕ್ಷಣ ಅವರನ್ನು ಹತ್ಯೆ ಮಾಡಬೇಕೆಂದು ಅವರಿಗೆ ಸೂಚಿಸಲಾಗಿತ್ತು. ಈ ಹತ್ಯೆಗಾಗಿ ಅವರಿಗೆ 5 ಲಕ್ಷ ಡಾಲರ್ ನೀಡುವುದಾಗಿ ಒಪ್ಪಂದವಾಗಿತ್ತು.

ಇದನ್ನೂ ಓದಿ: ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಡೊನಾಲ್ಡ್​ ಟ್ರಂಪ್​ಗೆ ಹಾಲಿನ ಅಭಿಷೇಕ!

51 ವರ್ಷದ ಶಕೇರಿ ಅವರನ್ನು ಟೆಹ್ರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಬಾಲ್ಯದಲ್ಲಿ ಅಮೆರಿಕಕ್ಕೆ ವಲಸೆ ಬಂದರು ಮತ್ತು ದರೋಡೆ ಅಪರಾಧದ ನಂತರ 2008ರಲ್ಲಿ ಅವರನ್ನು ಗಡೀಪಾರು ಮಾಡಲಾಯಿತು. ಶಕೇರಿ ತಲೆಮರೆಸಿಕೊಂಡಿದ್ದು, ಇರಾನ್‌ನಲ್ಲಿದ್ದಾನೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಶಕೇರಿಗೆ 7 ದಿನಗಳೊಳಗೆ ಕೊಲೆ ಮಾಡಲು ಸೂಚಿಸಲಾಗಿತ್ತು. ರೆವಲ್ಯೂಷನರಿ ಗಾರ್ಡ್ ಅಧಿಕಾರಿಯೊಬ್ಬರು ಈ ಹತ್ಯೆಯ ಸಂಚಿನ ಕಂಟ್ರಾಕ್ಟ್ ಕೊಟ್ಟಿದ್ದರು. ಈ ಸಂಚಿನಲ್ಲಿ ಇರಾನ್ ಮತ್ತು ಇಬ್ಬರು ಅಮೆರಿಕನ್ ಪ್ರಜೆಗಳು ಕೂಡ ಭಾಗಿಯಾಗಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Video: ಇರಾನ್ ಯೂನಿವರ್ಸಿಟಿಯಲ್ಲಿ ಹಿಜಾಬ್ ಹೆಸರಿನಲ್ಲಿ ಕಿರುಕುಳ, ವಿದ್ಯಾರ್ಥಿನಿ ಮಾಡಿದ್ದೇನು?

ಇದೇ ವರ್ಷ ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಗುಂಡು ಅವರ ಕಿವಿಯನ್ನು ಸೀಳಿ ಹೋಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಅದಾದ 2 ತಿಂಗಳ ನಂತರ ಫ್ಲೋರಿಡಾದ ಪಾಮ್ ಬೀಚ್​​ ಕೌಂಟಿಯ ಅಂತಾರಾಷ್ಟ್ರೀಯ ಗಾಲ್ಫ್ ಕ್ಲಬ್​ನಲ್ಲಿ ಟ್ರಂಪ್ ಮೇಲೆ ಮತ್ತೊಮ್ಮೆ ಹಲ್ಲೆ ನಡೆದಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​