Taliban: ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಈಗ ಪ್ರಪಂಚಕ್ಕೆ ಉಳಿದಿರುವ ಮಾರ್ಗ ಎಂದ ಜನಾಬ್​ ಇಮ್ರಾನ್​ ಖಾನ್!

| Updated By: ಸಾಧು ಶ್ರೀನಾಥ್​

Updated on: Feb 14, 2022 | 7:38 AM

Imran Khan: ಅಮರಿಕದ ಭಯೋತ್ಪಾದನೆ ಮೇಲಿನ ಯುದ್ಧ(WoT) ತಿರುಗುಬಾಣವಾಗಿದೆ. ಅಮರಿಕದ ಉಗ್ರ ಯುದ್ಧದಿಂದಾಗಿ ಜಗತ್ತಿನಲ್ಲಿ ಉಗ್ರರ ಸಂಖ್ಯೆಯೆ ಹೆಚ್ಚಾಗಿದೆ. 40 ದಶಲಕ್ಷ ಅಫಘನ್ನರ ಭವಿಷ್ಯದ ಬಗ್ಗೆ ಆಲೋಚಿಸಿದಾಗ ಜಗತ್ತಿಗೆ ಈಗಲೋ ಆಗಲೋ ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದು ಅನಿವಾರ್ಯವಾಗಿದೆ.

Taliban: ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಈಗ  ಪ್ರಪಂಚಕ್ಕೆ ಉಳಿದಿರುವ ಮಾರ್ಗ ಎಂದ ಜನಾಬ್​ ಇಮ್ರಾನ್​ ಖಾನ್!
ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಈಗ ಪ್ರಪಂಚಕ್ಕೆ ಉಳಿದಿರುವ ಮಾರ್ಗ ಎಂದ್ರು ಜನಾಬ್​ ಇಮ್ರಾನ್​ ಖಾನ್!
Follow us on

ವಾಷಿಂಗ್ಟನ್​: ಅಫ್ಘಾನಿಸ್ತಾನದಲ್ಲಿನ (Afghanistan) ತಾಲಿಬಾನ್​ಗೆ (Taliban) ಪರ್ಯಾಯ ಇಲ್ಲ. ಹಾಗಾಗಿ ಜಗತ್ತಿಗೆ ಈಗ ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಉಳಿದಿರುವ ಮಾರ್ಗ ಎಂದು ಪಾಕಿಸ್ತಾನದ ಪ್ರಧಾನಿ ಜನಾಬ್​ ಇಮ್ರಾನ್​ ಖಾನ್ (Imran Khan) ಹೇಳಿದ್ದಾರೆ. ಭಾನುವಾರ ಸಿಎನ್​ಎನ್ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ​​ಪ್ರಧಾನಿ ಇಮ್ರಾನ್​ ಖಾನ್ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಜೊತೆಗಿನ ಪಾಕಿಸ್ತಾನದ ಪ್ರಚಲಿತ ಸಂಬಂಧ, ಭಯೋತ್ಪಾದನೆ ವಿರುದ್ಧದ ಇಂದಿನ ಜಾಗತಿಕ ಯುದ್ಧ (Terrorism), ಅಫ್ಘಾನಿಸ್ತಾನದಲ್ಲಿನ ನೂತನ ತಾಲಿಬಾನ್ ಸರ್ಕಾರದ ಮುಂದಿನ ಹಾದಿ ಇವೇ ಮುಂತಾದ ವಿಷಯಗಳ ಬಗ್ಗೆ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ,

40 ದಶಲಕ್ಷ ಅಫಘನ್ನರ ಭವಿಷ್ಯದ ಬಗ್ಗೆ ಆಲೋಚಿಸಿದಾಗ ಜಗತ್ತಿಗೆ ಈಗಲೋ ಆಗಲೋ ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಅಮರಿಕದ ಭಯೋತ್ಪಾದನೆ ಮೇಲಿನ ಯುದ್ಧ (United States War on Terror -WoT) ತಿರುಗುಬಾಣವಾಗಿದೆ. ಅಮರಿಕದ ಉಗ್ರ ಯುದ್ಧದಿಂದಾಗಿ ಜಗತ್ತಿನಲ್ಲಿ ಉಗ್ರರ ಸಂಖ್ಯೆಯೆ ಹೆಚ್ಚಾಗಿದೆ. ಈ ಉಗ್ರ ಯುದ್ಧದಿಂದಾಗಿ ಪಾಕಿಸ್ತಾನ ಬಹಳಷ್ಟು ಪೆಟ್ಟು ತಿಂದಿದೆ. 80 ಸಾವಿರ ಪಾಕಿಸ್ತಾನೀಯರು ತಮ್ಮ ಜೀವ ಕಳೆದುಕೊಂಡರು ಎಂದು ಪ್ರಧಾನಿ ಇಮ್ರಾನ್​ ಖಾನ್ ವಿಷಾದದ ದನಿಯಲ್ಲಿ ಹೇಳಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕವು ಭಯೋತ್ಪಾದನೆ ವಿರುದ್ಧ ಸಾರಿರುವ ಯುದ್ಧದ ಬಗ್ಗೆ ಮರುಪರಿಶೀಲಿಸಬೇಕು ಎಂದು ಇಮ್ರಾನ್ ಹಿತವಚನ ಹೇಳಿದ್ದಾರೆ.

Also Read:
Valentines Day: ಪ್ರೀತಿ ಮನಸಿನ ಮಾತು, ಮೈ ಮಾತಲ್ಲ! ಜಗತ್ತಿಗೆ ಪವಿತ್ರ ಪ್ರೀತಿಯ ಧಾರೆ ಎರೆದ ರಾಧಾ-ಕೃಷ್ಣರ ಪ್ರೇಮ ಕಥೆ

Also Read:
Valentines Day: ಪ್ರೇಮಿಗಳ ದಿನ ಹೂ ರಾಜನಿಗೆ ಭಾರೀ ಬೇಡಿಕೆ, ಪ್ರೀತಿಯ ರಾಯಭಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!